AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮೃದು ಮಂಜುಗಡ್ಡೆ ಮೇಲೆ ನಡೆದಾಡಿದರೆ ತಾನು ನೀರಿನೊಳಗೆ ಬೀಳುತ್ತೇನೆ ಎಂದು ಹಿಮ ಕರಡಿ ಮಾಡಿ ಪ್ಲಾನ್​​​ ನೋಡಿ

ಉದ್ಯಮಿ ಆನಂದ್ ಮಹೀಂದ್ರಾ ಅವರು ಸಾಮಾಜಿಕ ಜಾಲತಾಣದಲ್ಲಿ ಇಂಟೆರೆಸ್ಟಿಂಗ್ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅಂತಹದ್ದೇ ಹಿಮ ಕರಡಿಯೊಂದರ ವಿಡಿಯೋವನ್ನು ಅವರು ಹಂಚಿಕೊಂಡಿದ್ದು, ಈ ಹಿಮ ಕರಡಿಯ ಬುದ್ಧಿವಂತಿಕೆಯಂತೆ ಷೇರು ಮಾರುಕಟ್ಟೆಗಳಲ್ಲಿ ಬಹಳ ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಬೇಕು ಎಂಬುದನ್ನು ಹೇಳಿದ್ದಾರೆ.

Viral Video: ಮೃದು ಮಂಜುಗಡ್ಡೆ ಮೇಲೆ ನಡೆದಾಡಿದರೆ ತಾನು ನೀರಿನೊಳಗೆ ಬೀಳುತ್ತೇನೆ ಎಂದು ಹಿಮ ಕರಡಿ ಮಾಡಿ ಪ್ಲಾನ್​​​ ನೋಡಿ
ವೈರಲ್​​​ ವಿಡಿಯೋ
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on: Feb 21, 2024 | 4:32 PM

Share

ಪ್ರಾಣಿ ಪಕ್ಷಿಗಳು ಮನುಷ್ಯರಷ್ಟು ಜಾಣ್ಮೆಯನ್ನು ಹೊಂದಿಲ್ಲ ನಿಜ. ಆದರೂ ಕೆಲವೊಮ್ಮೆ ಈ ಮುಗ್ಧ ಜೀವಿಗಳು ತೋರಿಸುವ ಬುದ್ಧಿವಂತಿಕೆ ನಮ್ಮೆಲ್ಲರಲ್ಲೂ ಅಚ್ಚರಿಯನ್ನು ಮೂಡಿಸುತ್ತವೆ. ಇಂತಹ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಹಿಮ ಕರಡಿಯೊಂದು ನಾನು ಹೀಗೆ ತೆಳುವಾದ ಮಂಜುಗಡ್ಡೆಯ ಮೇಲೆ ನಡೆದುಕೊಂಡು ಹೋದ್ರೆ ಖಂಡಿತವಾಗಿಯೂ ನನಗೆ ಅಪಾಯ ಆಗುತ್ತೆ ಅನ್ನೋ ಕಾರಣಕ್ಕೆ ತನ್ನ ಬುದ್ಧಿವಂತಿಕೆಯನ್ನು ಉಪಯೋಗಿಸಿಕೊಂಡು ಹಿಮದ ಮೇಲೆ ತೆವಳಿಕೊಂಡು ಹೋಗಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುವ ಉದ್ಯಮಿ ಆನಂದ್ ಮಹೀಂದ್ರಾ ಅವರು ಒಂದಲ್ಲಾ ಒಂದು ಇಂಟೆರೆಸ್ಟಿಂಗ್ ಸ್ಟೋರಿಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅವರು ಬುದ್ಧಿವಂತ ಹಿಮ ಕರಡಿಯ ಮುದ್ದಾದ ವಿಡಿಯೋವೊಂದನ್ನು ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹಾಗೂ “ಹಿಮಕರಡಿಯು ಅಪಾಯವನ್ನು ಎದುರಿಸಿ ಜಯಿಸುವುದು ಹೇಗೆ ಎಂಬುದನ್ನು ಉತ್ತಮವಾಗಿ ಕಲಿಸಿದೆ.

ತೆಳುವಾದ ಮಂಜುಗಡ್ಡೆಯ ಮೇಲೆ ನಡೆಯುವಾಗ ಈ ಕರಡಿ ತನ್ನ ಬುದ್ಧಿವಂತಿಕೆಯಿಂದ ಸಂಪೂರ್ಣ ದೇಹವನ್ನು ನೆಲಕ್ಕೆ ಸ್ಪರ್ಶಿಸಿ, ಸಮ ತೂಕದೊಂದಿಗೆ ಚಲಿಸುತ್ತಿದ್ದೆ; ಇದು ಷೇರು ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡಲು ಸರಿಯಾದ ಮಾರ್ಗ?” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ವೈರಲ್ ವಿಡಿಯೋದಲ್ಲಿ ಕರಡಿಯ ಬುದ್ಧಿವಂತಿಕೆಯನ್ನು ಕಾಣಬಹುದು. ಉತ್ತರ ಧ್ರುವ ಪ್ರದೇಶದಲ್ಲಿ ವಾಸಿಸುವಂತಹ ಹಿಮ ಕರಡಿಯೊಂದು ತೆಳುವಾದ ಮಂಜುಗಡ್ಡೆಯ ಮೇಲೆ ನಡೆದಾಡಿದರೆ, ಆ ಮಂಜು ಒಡೆದು ನೀರಿನೊಳಗೆ ತಾನು ಬಿದ್ದು ಬಿಡುತ್ತೇನೆ ಎಂಬ ಕಾರಣಕ್ಕೆ ಬುದ್ಧಿವಂತಿಕೆಯನ್ನು ಉಪಯೋಗಿಸಿಕೊಂಡು ಹಿಮದ ಮೇಲೆ ನಿಧಾನಕ್ಕೆ ತೆವಳಿಕೊಂಡು ಹೋಗುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ನಾಯಿ ಕದಿಯಲು ಬಂದಿದ್ದ ಎಂದು ವ್ಯಕ್ತಿಯೊಬ್ಬರನ್ನು ಅದರದ್ದೇ ಗೂಡಿನಲ್ಲಿ ಬಂಧಿಸಿದ ಬಾರ್ ಸಿಬ್ಬಂದಿ

ಫೆಬ್ರವರಿ 13 ರಂದು ಹಂಚಿಕೊಳ್ಳಲಾದ ಈ ವಿಡಿಯೋ 5 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ 14 ಸಾವಿರ ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಮತ್ತು ತರಹೇವಾರಿ ಕಾಮೆಂಟ್ ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ‘ಹೌದು ಸರ್ ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಬೇಕು’ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ‘ಹಿಮ ಕರಡಿಯ ಬುದ್ಧಿವಂತಿಕೆಯಂತೆ ಹೂಡಿಗೆ ಮಾಡಿ’ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ‘ಒತ್ತಡವನ್ನು ಕಡಿಮೆ ಮಾಡಲು ತೂಕವನ್ನು ಹೇಗೆ ಮ್ಯಾನೆಜ್ ಮಾಡಬೇಕೆಂದು ಆ ಕರಡಿಗೆ ತಿಳಿದಿದೆ..’ ಎಂದು ಹಿಮ ಕರಡಿಯ ಬುದ್ಧಿವಂತಿಕೆಯನ್ನು ಹೊಗಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ