AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಲಾ ತರಗತಿಗಳಲ್ಲಿ ಮೊಬೈಲ್ ಫೋನ್ ನಿಷೇಧಿಸಿದ ಬ್ರಿಟನ್ ಪ್ರಧಾನಿ ರಿಶಿ ಸುನಕ್

ಬ್ರಿಟನ್ ಪ್ರಧಾನಿ ರಿಶಿ ಸುನಕ್ ಸಂವೇದನಾಶೀಲ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ಫೆಬ್ರವರಿ 19 ರಿಂದ ಅನ್ವಯವಾಗುವಂತೆ ಶಾಲಾ ತರಗತಿಗಳಲ್ಲಿ ಮೊಬೈಲ್ ಫೋನ್ ನಿಷೇಧ ಮಾಡಿ ವೀಡಿಯೊ ಸಂದೇಶವನ್ನು ಹಂಚಿಕೊಂಡಿದ್ದಾರೆ.

ಶಾಲಾ ತರಗತಿಗಳಲ್ಲಿ ಮೊಬೈಲ್ ಫೋನ್ ನಿಷೇಧಿಸಿದ ಬ್ರಿಟನ್ ಪ್ರಧಾನಿ ರಿಶಿ ಸುನಕ್
ಶಾಲಾ ತರಗತಿಗಳಲ್ಲಿ ಮೊಬೈಲ್ ಫೋನ್ ನಿಷೇಧಿಸಿದ ಬ್ರಿಟನ್ ಪ್ರಧಾನಿ ರಿಶಿ ಸುನಕ್
ಸಾಧು ಶ್ರೀನಾಥ್​
|

Updated on:Feb 20, 2024 | 10:25 AM

Share

ಪ್ರಸ್ತುತ ಯುಗವು ತಂತ್ರಜ್ಞಾನ ನಾಗಾಲೋಟದಲ್ಲಿದೆ. ದೊಡ್ಡವರು, ಚಿಕ್ಕವರು ಎಂಬ ಭೇದವಿಲ್ಲದೆ ಎಲ್ಲರೂ ಮೊಬೈಲ್ ಫೋನ್ ಮೂಲಕ ತಂತ್ರಜ್ಞಾನದೊಂದಿಗೆ ಸಂಪರ್ಕ ಸಾಧಿಸುತ್ತಿದ್ದಾರೆ. ಆದಾಗ್ಯೂ, ಅವರು ಅನಗತ್ಯವಾಗಿ ಅನಗತ್ಯ ಸ್ಥಳಗಳಲ್ಲಿಯೂ ಸಹ ಗಂಟೆಗಟ್ಟಲೆ ಮೊಬೈಲ್ ಫೋನ್‌ಗಳೊಂದಿಗೆ ಇರುತ್ತಾರೆ. ಕಚೇರಿಗಳು, ದೇವಸ್ಥಾನಗಳು, ಕಾಲೇಜುಗಳು ಮತ್ತು ಶಾಲೆಗಳಲ್ಲಿ ಫೋನ್ ಬಳಸುವುದು ಸಾಮಾನ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳು ಕೂಡ ಫೋನ್‌ಗೆ ದಾಸರಾಗಿದ್ದಾರೆ ಮತ್ತು ಅವರು ತಮ್ಮ ಶಿಕ್ಷಣದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಿಲ್ಲ. ಮಕ್ಕಳ ವಿದ್ಯಾಭ್ಯಾಸದ ಮೇಲೆ ಮೊಬೈಲ್ ಫೋನ್ ಪ್ರಭಾವ ಬೀರುತ್ತಿದೆ. ಆರ್ಥಿಕ ಹಿಂಜರಿತದ ಸುಳಿಗೆ ಸಿಲುಕಿರುವ ಬ್ರಿಟನ್ನಿನಲ್ಲಿ ಅಲ್ಲಿನ ಪ್ರಧಾನಿ, ಭಾರತೀಯ ಮೂಲದ ರುಶಿ ಸುನಕ್ ಅವರು ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರುವಂತಹ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ.

ತರಗತಿ ಕೊಠಡಿಗಳಲ್ಲಿ ಶಾಂತಿಯುತ ವಾತಾವರಣವನ್ನು ನಿರ್ಮಿಸಲು, ಮೊಬೈಲ್ ಫೋನ್‌ಗಳನ್ನು ನಿಷೇಧಿಸುವ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಯುಕೆ ಪ್ರಧಾನ ಮಂತ್ರಿ ರಿಷಿ ಸುನಕ್ ಅವರು ಸರ್ಕಾರದ ಹೊಸ ನೀತಿಯನ್ನು ಬೆಂಬಲಿಸುವ ವೀಡಿಯೊ ಸಂದೇಶವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ವಿರಾಮದ ಸಮಯ ಸೇರಿದಂತೆ ಇಂಗ್ಲೆಂಡ್‌ನಾದ್ಯಂತ ಶಾಲೆಗಳಲ್ಲಿ ಮೊಬೈಲ್ ಫೋನ್‌ಗಳನ್ನು ನಿಷೇಧಿಸಲು ಫೆಬ್ರವರಿ 19 ಸೋಮವಾರದಂದು ಸರ್ಕಾರವು ಹೊಸ ಮಾರ್ಗದರ್ಶನವನ್ನು ಪ್ರಕಟಿಸಿದೆ. UK ಯಲ್ಲಿನ ಕೆಲವು ಶಾಲೆಗಳು ಈಗಾಗಲೇ ಫೋನ್ ನಿಷೇಧಗಳನ್ನು ಜಾರಿಗೆ ತಂದಿದ್ದರೂ, ಸದರ್ಕಾರದ ಅಧಿಕೃತ ಮಾರ್ಗದರ್ಶನವು ದೇಶಾದ್ಯಂತ ಸ್ಥಿರವಾದ ನೀತಿಯನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ.

ಗಮನಾರ್ಹವೆಂದರೆ ಮೊಬೈಲ್ ಬಳಕೆ ದುಷ್ಪರಿಣಾಮಗಳ ಬಗ್ಗೆ ಮಾತನಾಡುತ್ತಾ ವಿಡಿಯೋ ಸಂದೇಶ ನೀಡುವಾಗ ಅವರ ಬ್ಲೇಜರ್​​ನಲ್ಲಿ ಭದ್ರವಾಗಿ ಕುಳಿತಿದ್ದ ಮೊಬೈಲ್ ಫೋನ್ ತನ್ನೊಡೆಯ ಯಾವುದರ ಬಗ್ಗೆ ಮಾತನಾಡುತ್ತಿದ್ದಾನೆ. ಅಥವಾ ಆ ಮಾತುಗಳು ತನ್ನ ಬುಡಕ್ಕೆ ಬೆಂಕಿ ಹಚ್ಚಿ ತನ್ನ ಸದ್ದನ್ನು ಅಡಗಿಸಿಬಿಡುತ್ತದೆ ಎಂಬುದರ ಪರಿವೆಯೂ ಇಲ್ಲದೆ ಎಂದಿನಂತೆ ರಿಂಗಣಿಸತೊಡಗುತ್ತದೆ. ಮೊದಲ ಬಾರಿ ರಿಂಗಣಿಸಿದಾಗ ಅದರ ಬಾಯಿ ಮುಚ್ಚಿ ಮತ್ತೆ ತಮ್ಮ ಬ್ಲೇಜರ್​​ನೊಳಕ್ಕೆ ತುರುಕುತ್ತಾರೆ ಪ್ರಧಾನಿ ರಿಶಿ. ಆದರೆ ಅದರ ಹುಟ್ಟುಗುಣ ಬಿಟ್ಟುಕೊಡದ ಮೊಬೈಲ್​ ಮತ್ತೆ ಮತ್ತೆ ರಿಂಗಣಿಸುತ್ತದೆ. ಈ ಬಾರಿ ಅದರ ಕಿವಿ ಹಿಂಡಿ ಟೇಬಲ್​ ಮೇಲೆ ಬಿಸಾಡುತ್ತಾರೆ. ತನ್ಮೂಲಕ ಸಾಂಕೇತಿಕವಾಗಿ ನಿನ್ನ ಬಾಯಿ ಮುಚ್ಚಿಸಿದ್ದೇನೆ ಎಂದು ರಿಶಿ ಗಂಭೀರವಾಗಿ ಘೋಷಿಸುತ್ತಾರೆ.

ಮಕ್ಕಳ ಆರೋಗ್ಯದ ಮೇಲೆ ಪರಿಣಾಮ

ಮೊಬೈಲ್ ಫೋನ್‌ಗಳು, ಐಪ್ಯಾಡ್‌ಗಳು ಮತ್ತು ಟ್ಯಾಬ್‌ಗಳು ಅವುಗಳ ಸುತ್ತಲಿನ ಪರಿಸರ ಸೇರಿದಂತೆ ವೈರ್‌ಲೆಸ್ ಸಾಧನಗಳಿಂದ ಉತ್ಪತ್ತಿಯಾಗುವ ಎಲ್ಲಾ ರೀತಿಯ ವಿಕಿರಣಗಳಿಗೆ ಒಡ್ಡಿಕೊಳ್ಳುತ್ತವೆ. ಮೊದಲಿಗಿಂತ ಚಿಕ್ಕ ವಯಸ್ಸಿನಲ್ಲಿ ಮಕ್ಕಳು ತಂತ್ರಜ್ಞಾನಕ್ಕೆ ತೆರೆದುಕೊಳ್ಳುತ್ತಾರೆ. ಮೊಬೈಲ್ ಫೋನ್‌ಗಳು ಮತ್ತು ವೈರ್‌ಲೆಸ್ ಸಾಧನಗಳಿಂದ ಉತ್ಪತ್ತಿಯಾಗುವ ವಿವಿಧ ರೀತಿಯ ವಿಕಿರಣಗಳಿವೆ. ನೇರಳಾತೀತ ಕಿರಣಗಳು ಸಮಸ್ಯೆಗಳನ್ನು ಉಂಟುಮಾಡುತ್ತವೆ. ಸೆಲ್ ಫೋನ್‌ಗಳು ಅಯಾನೀಕರಿಸದ ವಿಕಿರಣವನ್ನು ಹೊಂದಿರುತ್ತವೆ.

ಇದನ್ನೂ ಓದಿ: ಮೊಬೈಲ್ ಬಳಕೆಯನ್ನು ಇತಿಮಿತಿಯಲ್ಲಿರಿಸಿದರೆ ಈ ಆರೋಗ್ಯ ಲಾಭಗಳು ಖಂಡಿತ

ಮೊಬೈಲ್ ಫೋನ್‌ಗಳು ರೇಡಿಯೋ ಆವರ್ತನ ತರಂಗಗಳನ್ನು ತಮ್ಮ ಪ್ರಸಾರ ಘಟಕ ಅಥವಾ ಆಂಟೆನಾದಿಂದ ಹತ್ತಿರದ ಸೆಲ್ ಟವರ್‌ಗಳಿಗೆ ಕಳುಹಿಸುತ್ತವೆ. ನಾವು ಕರೆಗಳನ್ನು ಮಾಡಿದಾಗ ಅಥವಾ ಸ್ವೀಕರಿಸಿದಾಗ, ಪಠ್ಯಗಳನ್ನು ಕಳುಹಿಸಿದಾಗ ಅಥವಾ ಸ್ವೀಕರಿಸಿದಾಗ ಅಥವಾ ಡೇಟಾವನ್ನು ಬಳಸಿದಾಗ, ನಮ್ಮ ಫೋನ್ ತನ್ನ ಆಂಟೆನಾದಲ್ಲಿರುವ ಸೆಲ್ ಟವರ್‌ಗಳಿಂದ ರೇಡಿಯೊ ಆವರ್ತನ ತರಂಗಗಳನ್ನು ಸ್ವೀಕರಿಸುತ್ತದೆ. ಈ ರೀತಿ ಬಳಸುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:19 am, Tue, 20 February 24

‘ನಗ್ತಾ ಇರಿ, ಖುಷಿಯಾಗಿರಿ’; ಮಾತಿನ ಮೂಲಕ ವಿಶ್ ಮಾಡಿದ ಸುದೀಪ್
‘ನಗ್ತಾ ಇರಿ, ಖುಷಿಯಾಗಿರಿ’; ಮಾತಿನ ಮೂಲಕ ವಿಶ್ ಮಾಡಿದ ಸುದೀಪ್
ನಮಗೊಂದು ಟ್ವೀಟ್ ಮಾಡಿಕೊಡಿ: ಕೇರಳ ಸಿಎಂಗೆ ದುಂಬಾಲು ಬಿದ್ದ ಬಿಜೆಪಿ!
ನಮಗೊಂದು ಟ್ವೀಟ್ ಮಾಡಿಕೊಡಿ: ಕೇರಳ ಸಿಎಂಗೆ ದುಂಬಾಲು ಬಿದ್ದ ಬಿಜೆಪಿ!
ಹೊಸ ವರ್ಷಾಚರಣೆ ವೇಳೆ ಸ್ವಿಟ್ಜರ್​ಲ್ಯಾಂಡ್​ನ ಬಾರ್‌ನಲ್ಲಿ ಬಾಂಬ್ ಸ್ಫೋಟ
ಹೊಸ ವರ್ಷಾಚರಣೆ ವೇಳೆ ಸ್ವಿಟ್ಜರ್​ಲ್ಯಾಂಡ್​ನ ಬಾರ್‌ನಲ್ಲಿ ಬಾಂಬ್ ಸ್ಫೋಟ
ಹೊಸ ವರ್ಷದ ದಿನ ನಮ್ಮ ಮೆಟ್ರೋಗೆ ಬಂಪರ್​ ಆದಾಯ: ಕಲೆಕ್ಷನ್​ ಎಷ್ಟು?
ಹೊಸ ವರ್ಷದ ದಿನ ನಮ್ಮ ಮೆಟ್ರೋಗೆ ಬಂಪರ್​ ಆದಾಯ: ಕಲೆಕ್ಷನ್​ ಎಷ್ಟು?
ಪರೋಕ್ಷವಾಗಿ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಡಾ. ಜಿ. ಪರಮೇಶ್ವರ್
ಪರೋಕ್ಷವಾಗಿ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಡಾ. ಜಿ. ಪರಮೇಶ್ವರ್
ಹೂ, ಎಲೆಗಳ ಸಿಂಗಾರ; ವಿಶೇಷ ಅಲಂಕಾರದಲ್ಲಿ ಕಂಗೊಳಿಸಿದ ನಾಡ ದೇವತೆ
ಹೂ, ಎಲೆಗಳ ಸಿಂಗಾರ; ವಿಶೇಷ ಅಲಂಕಾರದಲ್ಲಿ ಕಂಗೊಳಿಸಿದ ನಾಡ ದೇವತೆ
ಮಂತ್ರಾಲಯದಲ್ಲಿ ಹೊಸ ವರ್ಷದ ಸಂಭ್ರಮ: ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತರು
ಮಂತ್ರಾಲಯದಲ್ಲಿ ಹೊಸ ವರ್ಷದ ಸಂಭ್ರಮ: ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತರು
ಪಕ್ಕದಮನೆಯವರ ಬಗ್ಗೆ ಮಾತನಾಡಲ್ಲ; ವಿಜಯಲಕ್ಷ್ಮೀ ಬಗ್ಗೆ ಸುದೀಪ್ ಮಾತು
ಪಕ್ಕದಮನೆಯವರ ಬಗ್ಗೆ ಮಾತನಾಡಲ್ಲ; ವಿಜಯಲಕ್ಷ್ಮೀ ಬಗ್ಗೆ ಸುದೀಪ್ ಮಾತು
ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಭಕ್ತರ ದಂಡು
ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಭಕ್ತರ ದಂಡು
ಕಾರ್ಮಿಕರ ಮೇಲೆ ಹಲ್ಲೆ ಮಾಡಿ ಚಹಾ ಅಂಗಡಿ ಧ್ವಂಸಗೊಳಿಸಿದ ಪೊಲೀಸಪ್ಪ!
ಕಾರ್ಮಿಕರ ಮೇಲೆ ಹಲ್ಲೆ ಮಾಡಿ ಚಹಾ ಅಂಗಡಿ ಧ್ವಂಸಗೊಳಿಸಿದ ಪೊಲೀಸಪ್ಪ!