ನೇಪಾಳದಲ್ಲಿ ಭಾರತೀಯ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ಪ್ರತಿಭಟನಾಕಾರರ ದಾಳಿ, ಹಲವರಿಗೆ ಗಾಯ

ನೇಪಾಳದಲ್ಲಿ ಯುವಜನರ ಪ್ರತಿಭಟನೆಯ ಬಿಸಿ ಇನ್ನೂ ಕಡಿಮೆಯಾಗಿಲ್ಲ. 49 ಭಾರತೀಯ ಪ್ರಜೆಗಳನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಸ್ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಈ ಘಟನೆಯಲ್ಲಿ ಮಹಿಳೆಯರು ಮತ್ತು ವೃದ್ಧರು ಸೇರಿದಂತೆ ಅನೇಕ ಪ್ರಯಾಣಿಕರು ಗಾಯಗೊಂಡಿದ್ದಾರೆ ಎನ್ನಲಾಗಿದೆ.

ನೇಪಾಳದಲ್ಲಿ ಭಾರತೀಯ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ಪ್ರತಿಭಟನಾಕಾರರ ದಾಳಿ, ಹಲವರಿಗೆ ಗಾಯ
Bus Carrying Indian Tourists

Updated on: Sep 12, 2025 | 4:14 PM

ಕಠ್ಮಂಡು, ಸೆಪ್ಟೆಂಬರ್ 12: ನೇಪಾಳ (Nepal) ರಾಷ್ಟ್ರದಲ್ಲಿ ನಡೆಯುತ್ತಿರುವ ಪ್ರತಿಭಟನೆ ಕೊಂಚ ನಿಯಂತ್ರಣಕ್ಕೆ ಬಂದಿದ್ದರೂ ಅದರ ಕಾವು ಇನ್ನೂ ಕಡಿಮೆಯಾಗಿಲ್ಲ. ನೇಪಾಳದಲ್ಲಿ ಆಂಧ್ರಪ್ರದೇಶದ ಭಾರತೀಯ ಪ್ರಜೆಗಳನ್ನು ಕರೆದೊಯ್ಯುತ್ತಿದ್ದ ಪ್ರವಾಸಿ ಬಸ್ ಮೇಲೆ ಕೆಲವು ಪ್ರತಿಭಟನಾಕಾರರು ದಾಳಿ ನಡೆಸಿದ್ದಾರೆ. ಈ ಘಟನೆ ಭಾರತ-ನೇಪಾಳ ಗಡಿಯಲ್ಲಿರುವ ಉತ್ತರ ಪ್ರದೇಶದ ಸೋನೌಲಿ ಬಳಿ ನಡೆದಿದೆ. ಅವರಲ್ಲಿ ಕೆಲವರಿಗೆ ಗಾಯಗಳಾಗಿವೆ.

ಪೊಲೀಸ್ ಅಧಿಕಾರಿಗಳ ಪ್ರಕಾರ ಈ ಬಸ್ 49 ಭಾರತೀಯ ಪ್ರಜೆಗಳನ್ನು ಕರೆದೊಯ್ಯುತ್ತಿತ್ತು. ಈ ವೇಳೆ ಬಸ್ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಈ ಘಟನೆಯಲ್ಲಿ ಮಹಿಳೆಯರು ಮತ್ತು ವೃದ್ಧರು ಸೇರಿದಂತೆ ಅನೇಕ ಪ್ರಯಾಣಿಕರು ಗಾಯಗೊಂಡಿದ್ದಾರೆ. ಅವರನ್ನು ಕಠ್ಮಂಡುವಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್​​ನಲ್ಲಿದ್ದ ಪ್ರವಾಸಿಗರು ಕಠ್ಮಂಡುವಿನ ಪಶುಪತಿನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ವಾಪಾಸ್ ಹಿಂತಿರುಗುತ್ತಿದ್ದರು ಎನ್ನಲಾಗಿದೆ.


ಇದನ್ನೂ ಓದಿ: ನೇಪಾಳದ ಪ್ರತಿಭಟನೆಯಿಂದಾಗಿ ಟಿಬೆಟ್‌ನಲ್ಲಿ ಸಿಲುಕಿರುವ ಭಾರತದ ಕೈಲಾಸ ಮಾನಸರೋವರ ಯಾತ್ರಾರ್ಥಿಗಳಿಗೆ ಸಹಾಯವಾಣಿ ಬಿಡುಗಡೆ

ಆ ಬಸ್ ಮೇಲಿನ ದಾಳಿಯ ನಂತರ, ನೇಪಾಳ ಸರ್ಕಾರದ ಸಹಾಯದಿಂದ ಭಾರತೀಯ ರಾಯಭಾರ ಕಚೇರಿ ವ್ಯವಸ್ಥೆ ಮಾಡಿದ ವಿಶೇಷ ವಿಮಾನದಲ್ಲಿ ಪ್ರವಾಸಿಗರನ್ನು ಭಾರತಕ್ಕೆ ಕರೆತರಲಾಯಿತು. “ನಾವು ಪಶುಪತಿನಾಥ ದೇವಸ್ಥಾನದಲ್ಲಿ ದರ್ಶನ ಪಡೆದು ಹಿಂತಿರುಗುತ್ತಿದ್ದಾಗ, ಇದ್ದಕ್ಕಿದ್ದಂತೆ ಒಂದು ಗುಂಪು ನಮ್ಮ ಬಸ್ಸನ್ನು ಸುತ್ತುವರೆದು ಕಾರಣವಿಲ್ಲದೆ ದಾಳಿ ಮಾಡಿತು. ಪ್ರಯಾಣಿಕರಲ್ಲಿ ಮಹಿಳೆಯರು ಮತ್ತು ವೃದ್ಧರು ಇದ್ದರು. ಆದರೆ ಪ್ರತಿಭಟನಾಕಾರರು ಅದನ್ನು ಲೆಕ್ಕಿಸಲಿಲ್ಲ” ಎಂದು ಬಸ್ ಚಾಲಕ ರಾಮು ನಿಶಾದ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ