Chris Hipkins: ನ್ಯೂಜಿಲೆಂಡ್​ನ ನೂತನ ಪ್ರಧಾನಿಯಾಗಿ ಕ್ರಿಸ್​ ಹಿಪ್​​ಕಿನ್ಸ್ ಪ್ರಮಾಣವಚನ

ನ್ಯೂಜಿಲೆಂಡ್​ನ ನೂತನ ಪ್ರಧಾನಿಯಾಗಿ ಕ್ರಿಸ್​ ಹಿಪ್​​ಕಿನ್ಸ್ (Chris Hipkins)ಪ್ರಮಾಣವಚನ ಸ್ವೀಕರಿಸಿದ್ದಾರೆ. 44 ವರ್ಷದ ಕ್ರಿಸ್​ ಹಿಪ್​ಕಿನ್ಸ್ ಆರ್ಥಿಕತೆಯ ಮೇಲೆ ಕೇಂದ್ರೀಕರಿಸುವುದಾಗಿ ಭರವಸೆ ನೀಡಿದ್ದಾರೆ.

Chris Hipkins: ನ್ಯೂಜಿಲೆಂಡ್​ನ ನೂತನ ಪ್ರಧಾನಿಯಾಗಿ ಕ್ರಿಸ್​ ಹಿಪ್​​ಕಿನ್ಸ್ ಪ್ರಮಾಣವಚನ
ಕ್ರಿಸ್ ಹಿಪ್​ಕಿನ್ಸ್

Updated on: Jan 25, 2023 | 12:09 PM

ನ್ಯೂಜಿಲೆಂಡ್​ನ ನೂತನ ಪ್ರಧಾನಿಯಾಗಿ ಕ್ರಿಸ್​ ಹಿಪ್​​ಕಿನ್ಸ್ (Chris Hipkins)ಪ್ರಮಾಣವಚನ ಸ್ವೀಕರಿಸಿದ್ದಾರೆ. 44 ವರ್ಷದ ಕ್ರಿಸ್​ ಹಿಪ್​ಕಿನ್ಸ್ ಆರ್ಥಿಕತೆಯ ಮೇಲೆ ಕೇಂದ್ರೀಕರಿಸುವುದಾಗಿ ಭರವಸೆ ನೀಡಿದ್ದಾರೆ. ಪ್ರಧಾನ ಮಂತ್ರಿಯಾದ ನಂತರ, ಹಿಪ್​ಕಿನ್ಸ್ 9 ತಿಂಗಳಿಗಿಂತ ಕಡಿಮೆ ಅವಧಿಯ ಅಧಿಕಾರವನ್ನು ಹೊಂದಿರುತ್ತಾರೆ. ಅಕ್ಟೋಬರ್‌ನಲ್ಲಿ ನ್ಯೂಜಿಲೆಂಡ್‌ನಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ.

ಚುನಾವಣಾ ಪೂರ್ವ ಸಮೀಕ್ಷೆಗಳ ಪ್ರಕಾರ, ಲೇಬರ್ ಪಕ್ಷದ ಸ್ಥಾನವು ಪ್ರಮುಖ ಪ್ರತಿಸ್ಪರ್ಧಿ ರಾಷ್ಟ್ರೀಯ ಪಕ್ಷಕ್ಕಿಂತ ಉತ್ತಮವಾಗಿದೆ. ನ್ಯೂಜಿಲೆಂಡ್ ಗವರ್ನರ್-ಜನರಲ್ ಸಿಂಡಿ ಕಿರೊ ಅವರು ಅರ್ಡೆರ್ನ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ ನಂತರ ಹಿಪ್​ಕಿನ್ಸ್ ಪ್ರಮಾಣವಚನ ಸ್ವೀಕರಿಸಿದರು.

ಇದು ನನ್ನ ಜೀವನದ ಅತ್ಯಂತ ದೊಡ್ಡ ಸವಾಲು ಮತ್ತು ದೊಡ್ಡ ಜವಾಬ್ದಾರಿಯಾಗಿದೆ ಎಂದು ಹಿಪ್​ಕಿನ್ಸ್ ಪ್ರಮಾಣವಚನ ಸಮಾರಂಭದಲ್ಲಿ ಹೇಳಿದರು. ಭವಿಷ್ಯದ ಸವಾಲುಗಳ ಬಗ್ಗೆ ನನಗೆ ಕುತೂಹಲವಿದೆ ಎಂದು ಅವರು ಹೇಳಿದರು.
ಕಾರ್ಮೆಲ್ ಸೆಪುಲೋನಿ ಉಪ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ದೇಶದಲ್ಲೇ ಪ್ರಥಮ ಬಾರಿಗೆ ಪೆಸಿಫಿಕ್ ದ್ವೀಪಕ್ಕೆ ಸೇರಿದ ವ್ಯಕ್ತಿಯೊಬ್ಬರಿಗೆ ಈ ಹುದ್ದೆಯ ಜವಾಬ್ದಾರಿಯನ್ನು ವಹಿಸಲಾಗಿದೆ.

ಸೆಪುಲೋನಿ ಹಿಪ್​ಕಿನ್ಸ್ ಅವರನ್ನು ಅಭಿನಂದಿಸಿದರು ಮತ್ತು ಅವರ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಅವರಿಗೆ ಧನ್ಯವಾದ ಹೇಳಿದರು. ಅರ್ಡೆರ್ನ್ ನೇತೃತ್ವದಲ್ಲಿ ಶಿಕ್ಷಣ ಮತ್ತು ಪೊಲೀಸ್ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಈ ಬಿಕ್ಕಟ್ಟಿನ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ ಕೋವಿಡ್ -19 ಜಾಗತಿಕ ಸಾಂಕ್ರಾಮಿಕ ಸಮಯದಲ್ಲಿ ಹಿಪ್​ಕಿನ್ಸ್ ಸಾರ್ವಜನಿಕವಾಗಿ ಕಾಣಿಸಿಕೊಂಡರು, ಜನರ ಗಮನ ಸೆಳೆದರು.

ಸುಮಾರು ಐದೂವರೆ ವರ್ಷಗಳ ಕಾಲ ಉನ್ನತ ಹುದ್ದೆಯನ್ನು ಅಲಂಕರಿಸಿದ ಅರ್ಡೆರ್ನ್ ಕಳೆದ ಗುರುವಾರ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದರು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us