ಅಮೆರಿಕದಲ್ಲೊಂದು ವಿಚಿತ್ರ ಘಟನೆ: ಭೇಟೆಗೆ ತೆರಳುತ್ತಿದ್ದಾಗ ವ್ಯಕ್ತಿಗೆ ಗುಂಡು ಹಾರಿಸಿ ಹತ್ಯೆ ಮಾಡಿದ ಸಾಕು ನಾಯಿ
ನಾಯಿ ಹೇಗೆ ಬಂದೂಕು ಹಿಡಿದು ಗುಂಡು ಹಾರಿಸಲು ಸಾಧ್ಯ ಎಂದು ಯೋಚನೆ ಮಾಡುತ್ತಿದ್ದೀರಾ. ಹೌದು ಅಮೆರಿಕದಲ್ಲಿ ಸಾಕು ನಾಯಿಯೊಂದು ವ್ಯಕ್ತಿಯೊಬ್ಬನಿಗೆ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ನಾಯಿ ಹೇಗೆ ಬಂದೂಕು ಹಿಡಿದು ಗುಂಡು ಹಾರಿಸಲು ಸಾಧ್ಯ ಎಂದು ಯೋಚನೆ ಮಾಡುತ್ತಿದ್ದೀರಾ. ಹೌದು ಅಮೆರಿಕದಲ್ಲಿ ಸಾಕು ನಾಯಿಯೊಂದು ವ್ಯಕ್ತಿಯೊಬ್ಬನಿಗೆ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಅಮೆರಿಕದಲ್ಲಿ 30 ವರ್ಷದ ವ್ಯಕ್ತಿಯೊಬ್ಬನನ್ನು ಸಾಕುನಾಯಿಯೊಂದು ಕೊಂದಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಪೊಲೀಸರ ಪ್ರಕಾರ, ನಾಯಿ ಆಕಸ್ಮಿಕವಾಗಿ ಹಿಂದಿನ ಸೀಟಿನಲ್ಲಿ ಬಂದೂಕನ್ನು ತುಳಿದು ಗುಂಡು ಹಾರಿಸಿದೆ. ಮುಂದಿನ ಸೀಟಿನಲ್ಲಿ ಕುಳಿತಿದ್ದ ಯುವಕನ ಬೆನ್ನಿಗೆ ನೇರವಾಗಿ ಗುಂಡು ತಗುಲಿ ಸಾವನ್ನಪ್ಪಿದ್ದಾನೆ.
ನಾಯಿ ಬಂದೂಕಿನ ಮೇಲೆ ಕಾಲಿಟ್ಟಾಗ ಅದರಿಂದ ಗುಂಡು ಹಾರಿದೆ, ಗುಂಡು ತಗುಲಿ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಯುತ್ತಿದ್ದು, ಪ್ರಾಥಮಿಕ ತನಿಖೆಯಲ್ಲಿ ಬೇಟೆಯಾಡಲು ತೆರಳಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಏತನ್ಮಧ್ಯೆ, ಮೃತ ಯುವಕ ನಾಯಿಯ ಮಾಲೀಕನೇ ಎನ್ನುವ ಕುರಿತು ತನಿಖೆ ನಡೆಯುತ್ತಿದೆ. ಪೊಲೀಸರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ಓದಿ: Bihar News: ಬಿಹಾರದಲ್ಲಿ 30 ಬೀದಿ ನಾಯಿಗಳಿಗೆ ಶೂಟ್ ಮಾಡಿ ಹತ್ಯೆ; ಕಾರಣ ಇಲ್ಲಿದೆ
ಇದೊಂದು ಕೊಲೆಯಾಗಿದ್ದು, ನಾಯಿಯ ಹೆಸರು ಹೇಳಿ ದಾರಿತಪ್ಪಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಆದರೆ ಅವರಿಗೆ ಇದುವರೆಗೆ ಯಾವುದೇ ಪುರಾವೆ ಸಿಕ್ಕಿಲ್ಲ. 2018 ರಲ್ಲಿ ಮೆಕ್ಸಿಕೋದಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಬೇಟೆಯಾಡಲು ಹೊರಟಿದ್ದ ಮುದ್ದಿನ ನಾಯಿ ಆಕಸ್ಮಿಕವಾಗಿ ಬೆನ್ನಿಗೆ ಗುಂಡು ಹಾರಿಸಿದ್ದರಿಂದ ಮಾಲೀಕ ಮೃತಪಟ್ಟಿದ್ದ.
ಅಮೆರಿಕದಲ್ಲಿ ಆಕಸ್ಮಿಕವಾಗಿ ಗುಂಡಿನ ದಾಳಿಗಳು ನಡೆಯುತ್ತಲೇ ಇರುತ್ತವೆ. ಕಾನೂನು ಅನುಮತಿಯಿಂದಾಗಿ ಅಮೆರಿಕದಲ್ಲಿ ಬಂದೂಕು ಬಳಸುವವರ ಸಂಖ್ಯೆ ಹೆಚ್ಚಿದೆ. ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಪ್ರಕಾರ, 2021 ರಲ್ಲಿ ಶೂಟಿಂಗ್-ಸಂಬಂಧಿತ ಘಟನೆಗಳಲ್ಲಿ 500 ಜನರು ಪ್ರತಿ ವರ್ಷ ಮೃತಪಡುತ್ತಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ