ತನ್ನ ಮೂವರು ಹೆಣ್ಣುಮಕ್ಕಳನ್ನು ಕೊಂದಿದ್ದ ಮಹಿಳೆಗೆ ನ್ಯಾಯಾಲಯವು 18 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ನ್ಯೂಜಿಲೆಂಡ್(New Zealand)ನಲ್ಲಿ ನಡೆದ ಘಟನೆ ಇದಾಗಿದ್ದು, ಮಹಿಳೆ ಲಾರೆನ್ ಡಿಕಾಸನ್ 2021ರಲ್ಲಿ ತನ್ನ ಮೂರು ಮಕ್ಕಳನ್ನು ಹತ್ಯೆಗೈದಿದ್ದರು.
ನನ್ನ ಕೃತ್ಯದಿಂದ ನನ್ನ ಕುಟುಂಬಕ್ಕೆ ಅಪಾರ ನೋವು ಉಂಟಾಗಿದೆ, ನಾನು ಪಶ್ಚಾತಾಪ ಪಡುತ್ತಿದ್ದೇನೆ ಎಂದು ಆಕೆ ಹೇಳಿದ್ದಾರೆ.
ಡಿಕಾಸನ್ ಎರಡು ವರ್ಷಗಳ ಹಿಂದೆ ತನ್ನ ಅವಳಿ ಮಕ್ಕಳಾದ ಮಾಯಾ ಹಾಗೂ ಕಾರ್ಲಾ ಮೊದಲ ಮಗಳಾದ ಲಿಯಾನ್ ಹತ್ಯೆ ಮಾಡಿದ ಮೂರು ಪ್ರಕರಣಗಳಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದೆ.
ಮತ್ತಷ್ಟು ಓದಿ: ಮಕ್ಕಳಿಬ್ಬರೂ ಲೈಂಗಿಕ ಆರೋಪಗಳಲ್ಲಿ ಜೈಲು ಸೇರಿದರೂ ರೇವಣ್ಣನ ಮೊಗದಲ್ಲಿ ಮಾಸದ ಮುಗುಳ್ನಗು!
2021ರ ಸೆಪ್ಟೆಂಬರ್ನಲ್ಲಿ ಆಕೆಯ ಪತಿ ಸಹೋದ್ಯೋಗಿಗಳೊಂದಿಗೆ ಊಟಕ್ಕೆ ಹೋಗಿದ್ದ ಹೊತ್ತಿನಲ್ಲಿ ಆಕೆ ಕೊಲೆ ಮಾಡಿದ್ದಳು, ಪತಿ ಹಿಂದಿರುಗಿದಾಗ ಮಕ್ಕಳು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡಿದ್ದರು.
ವಾರದ ಹಿಂದಷ್ಟೇ ಕುಟುಂಬವು ದಕ್ಷಿಣ ಆಫ್ರಿಕಾದಿಂದ ನ್ಯೂಜಿಲೆಂಡ್‌ಗೆ ತೆರಳಿತ್ತು. ವಿಚಾರಣೆಯಲ್ಲಿ ಆಕೆ ಮಕ್ಕಳನ್ನು ಕೊಂದಿರುವುದನ್ನು ಒಪ್ಪಿಕೊಂಡಿದ್ದಾರೆ. ಜತೆಗೆ ತನ್ನ ಮಾನಸಿಕ ಸ್ಥಿತಿ ಅಷ್ಟು ಸರಿ ಇಲ್ಲ ಎಂದೂ ಹೇಳಿದ್ದಾರೆ.
ಸಂಬಂಧಿಯನ್ನು ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡಲು ಒತ್ತಾಯಿಸಿದ ದಂಪತಿ ಬಂಧನ
ಶಾಲೆಗೆ ಸೇರಿಸಲು ಸಹಾಯ ಮಾಡುವ ನೆಪದಲ್ಲಿ ಅಮೆರಿಕಕ್ಕೆ ಕರೆತಂದು ಮೂರು ವರ್ಷಗಳ ಕಾಲ ತಮ್ಮ ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡಲು ಒತ್ತಾಯಿಸಿದ ಭಾರತೀಯ-ಅಮೆರಿಕನ್ ದಂಪತಿಗೆ ಯುಎಸ್ ನ್ಯಾಯಾಲಯವು ಜೈಲು ಶಿಕ್ಷೆ ವಿಧಿಸಿದೆ.
ಸಿಂಗ್ ಮತ್ತು ಕೌರ್ ಸಂತ್ರಸ್ತೆಯನ್ನು ಅಂಗಡಿಯಲ್ಲಿ ಶುಚಿಗೊಳಿಸುವುದು, ಅಡುಗೆ ಮಾಡುವುದು, ಸಂಗ್ರಹಣೆ ಮತ್ತು ನಗದು ರಿಜಿಸ್ಟರ್ ಮತ್ತು ಅಂಗಡಿಯ ದಾಖಲೆಗಳನ್ನು ನಿರ್ವಹಿಸುವುದು ಸೇರಿದಂತೆ ಎಲ್ಲಾ ಕೆಲಸವನ್ನು ಮಾಡಿಸುತ್ತಿದ್ದರು. ತಾನು ತನ್ನ ದೇಶಕ್ಕೆ ವಾಪಸ್ ಹೋಗುವುದಾಗಿ ಹೇಳಿದಾಗ ಅವರು ಆಕೆಗೆ ಥಳಿಸುತ್ತಿದ್ದರು ಎಂಬುದು ತಿಳಿದುಬಂದಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ