Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ಸಂಗಾತಿಯಿಲ್ಲದೆ ಗರ್ಭ ಧರಿಸಿ 14 ಮರಿಗಳಿಗೆ ಜನ್ಮ ನೀಡಿದ ಹೆಬ್ಬಾವು

ಇಂಗ್ಲೆಂಡಿನ 13 ವರ್ಷದ ಹೆಬ್ಬಾವೊಂದು ಸಂಗಾತಿಯಿಲ್ಲದೆ ಗರ್ಭ ಧರಿಸಿ 14ಮರಿಗಳಿಗೆ ಜನ್ಮ ನೀಡಿರುವ ಘಟನೆ ನಡೆದಿದೆ. ವರದಿಯ ಪ್ರಕಾರ, ಈ ರೀತಿಯ ಸಂತಾನೋತ್ಪತ್ತಿಯನ್ನು ಪಾರ್ಥೆನೋಜೆನೆಸಿಸ್ ಎಂದು ಕರೆಯಲಾಗುತ್ತದೆ. ಇದು ಅಲೈಂಗಿಕ ಸಂತಾನೋತ್ಪತ್ತಿಯ ನೈಸರ್ಗಿಕ ರೂಪವಾಗಿದೆ.

Viral News: ಸಂಗಾತಿಯಿಲ್ಲದೆ ಗರ್ಭ ಧರಿಸಿ 14 ಮರಿಗಳಿಗೆ ಜನ್ಮ ನೀಡಿದ ಹೆಬ್ಬಾವು
14 ಮರಿಗಳಿಗೆ ಜನ್ಮ ನೀಡಿದ ಹೆಬ್ಬಾವು
Follow us
ಅಕ್ಷತಾ ವರ್ಕಾಡಿ
|

Updated on: Jun 26, 2024 | 4:22 PM

ಇಂಗ್ಲೆಂಡಿನಲ್ಲಿ ಹೆಬ್ಬಾವೊಂದು ಸಂಗಾತಿಯಿಲ್ಲದೆ ಗರ್ಭ ಧರಿಸಿ 14ಮರಿಗಳಿಗೆ ಜನ್ಮ ನೀಡಿರುವ ಘಟನೆ ನಡೆದಿದೆ. ಈ ಹೆಬ್ಬಾವು ಗಂಡಿನ ಸಂಪರ್ಕಕ್ಕೆ ಬಾರದೆ ಮಗುವಿಗೆ ಜನ್ಮ ನೀಡಿದ್ದು ಹೇಗೆ ಎಂಬುದು ಈಗ ಪ್ರಶ್ನೆಯಾಗಿದೆ. ಒಂಬತ್ತು ವರ್ಷಗಳ ಹಿಂದೆ ಇಂಗ್ಲೆಂಡ್‌ನ ಪೋರ್ಟ್ಸ್‌ಮೌತ್ ಕಾಲೇಜಿನಲ್ಲಿ ಸೆರೆಯಲ್ಲಿ ತಂದು ಬಿಡಲಾಗಿದ್ದ ಈ ಹಾವಿಗೆ ಶ್ರೇಷ್ಠ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಅವರ ಹೆಸರಿಡಲಾಗಿತ್ತು. ಆದರೆ ಇದೀಗ ಮರಿಗಳಿಗೆ ಜನ್ಮ ನೀಡಿದ ಬಳಿಕ ಇದು ಗಂಡಲ್ಲ, ಹೆಣ್ಣು ಹಾವು ಎಂದು ತಿಳಿದುಬಂದಿದೆ.

ಸ್ಕೈ ನ್ಯೂಸ್ ವರದಿಯ ಪ್ರಕಾರ, 13 ವರ್ಷದ ರೊನಾಲ್ಡೊ 6 ಅಡಿ (1.8 ಮೀಟರ್) ಉದ್ದದ ಬ್ರೆಜಿಲಿಯನ್ ರೈನ್ಬೋ ಬೋವಾ ಕನ್‌ಸ್ಟ್ರಿಕ್ಟರ್, ಇದು ಹೆಬ್ಬಾವಿನ ಒಂದು ಜಾತಿಯಾಗಿದೆ. ಪ್ರಾಣಿ ಸಂರಕ್ಷಣಾಧಿಕಾರಿ ಪೀಟ್ ಕ್ವಿನ್ಲಾನ್ ಪ್ರಕಾರ, ಒಂಬತ್ತು ವರ್ಷಗಳ ಹಿಂದೆ ಪಶುವೈದ್ಯರು ಹೆಬ್ಬಾವನ್ನು ಗಂಡು ಎಂದು ಘೋಷಿಸಿದ್ದರು, ಅದರಂತೆ ಈ ಹಾವನ್ನು ಗಂಡು ಎಂದು ಭಾವಿಸಲಾಗಿತ್ತು. ಆದರೆ ಈ ಆಶ್ಚರ್ಯಕರ ಘಟನೆಯ ನಂತರ ಅದು ಗಂಡಲ್ಲ ಹೆಣ್ಣು ಎಂದು ತಿಳಿದುಬಂದಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:   ಇಳಿ ವಯಸ್ಸಿನಲ್ಲೂ ಕುಂದದ ಜೀವನೋತ್ಸಾಹ… ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡಿ ಸ್ವಾವಲಂಬಿ ಬದುಕು ನಡೆಸುತ್ತಿರುವ ಗಟ್ಟಿಗಿತ್ತಿ

ವರದಿಯ ಪ್ರಕಾರ, ಈ ರೀತಿಯ ಸಂತಾನೋತ್ಪತ್ತಿಯನ್ನು ಪಾರ್ಥೆನೋಜೆನೆಸಿಸ್ ಎಂದು ಕರೆಯಲಾಗುತ್ತದೆ. ಇದು ಅಲೈಂಗಿಕ ಸಂತಾನೋತ್ಪತ್ತಿಯ ನೈಸರ್ಗಿಕ ರೂಪವಾಗಿದೆ, ಅಲ್ಲಿ ಫಲೀಕರಣವಿಲ್ಲದೆ ಮೊಟ್ಟೆಯಿಂದ ಭ್ರೂಣವು ಬೆಳವಣಿಗೆಯಾಗುತ್ತದೆ. ಇದು ಸಸ್ಯಗಳು, ಪಾಚಿಗಳು ಮತ್ತು ಕೆಲವು ಅಕಶೇರುಕಗಳು (ಬೆನ್ನುಹುರಿಗಳಿಲ್ಲದವುಗಳು) ಮತ್ತು ಕಶೇರುಕ ಪ್ರಾಣಿಗಳಲ್ಲಿ ಸಂಭವಿಸಬಹುದು.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ