Viral Video : ಈ ಪುಟಾಣಿ ಮನೆ ಹೋಗ್ಲಿಲ್ಲ ಅಂದ್ರೆ ಅಜ್ಜ ಅಜ್ಜಿ ಗಾಬರಿಯಾಗ್ತಾರಂತೆ, ಕ್ಯೂಟ್ ವಿಡಿಯೋ ವೈರಲ್

ಮಕ್ಕಳ ಮನಸ್ಸು ಪರಿಶುದ್ಧವಾದದ್ದು, ಕಪಟ ಮೋಸ ಯಾವುದು ತಿಳಿಯುವುದಿಲ್ಲ. ಮಕ್ಕಳಿಗೆ ಗೊತ್ತಿರುವುದಿಷ್ಟೇ ತನ್ನನ್ನು ಯಾರು ಮುದ್ದು ಮಾಡುತ್ತಾರೋ ಅವರೇ ಒಳ್ಳೆಯವರು. ವೈರಲ್ ಆಗಿರುವ ವಿಡಿಯೋದಲ್ಲಿ ಪುಟಾಣಿಯೊಂದು ಶಾಲೆಯಲ್ಲಿದ್ದು, ತನ್ನ ಅಜ್ಜ ಅಜ್ಜಿಯು ಮುದ್ದು ಮಾಡುತ್ತಾರೆ, ನಾನು ಮನೆಗೆ ಹೋಗ್ತೇನೆ ಎಂದು ಅಳುತ್ತಿದೆ. ಈ ಮುದ್ದಾದ ವಿಡಿಯೋವೊಂದು ನೆಟ್ಟಿಗರ ಹೃದಯವನ್ನು ಗೆದ್ದು ಕೊಂಡಿದೆ.

Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on:Jun 26, 2024 | 4:19 PM

ಪುಟಾಣಿಗಳ ಮಕ್ಕಳ ನುಡಿಗಳನ್ನು ಕೇಳಿದ್ರೆ ಸಾಕು, ಮನಸ್ಸು ನಿರಾಳವೆನಿಸುತ್ತದೆ. ನಿಷ್ಕಲ್ಮಶ, ಮುಗ್ಧ ಮಕ್ಕಳು ಮಾತಾಡುವುದು ಕೇಳೋದೇ ಚಂದ. ಕೆಲವೊಂದು ಮಾತುಗಳು ನಮ್ಮ ಮನಸ್ಸು ಹಗುರವಾಗಿಸಿ ನಗು ಮೂಡುವಂತೆ ಮಾಡುತ್ತದೆ. ಕೆಲವೊಮ್ಮೆ ಮಕ್ಕಳು ಮುದ್ದು ಮುದ್ದಾಗಿ ಹಠ ಹಿಡಿದರೆ ಸಮಾಧಾನ ಪಡಿಸಲು ಆಗುವುದೇ ಇಲ್ಲ ಬಿಡಿ. ಇದೀಗ ಶಾಲೆಗೆ ಹೋಗಿರುವ ಪುಟಾಣಿಯೊಂದು ಅಜ್ಜ ಅಜ್ಜಿಯು ಮುದ್ದು ಮಾಡ್ತಾರೆ, ನನ್ನ ಮನೆಗೆ ಕಳುಹಿಸಿ ಕೊಡಿ ಎಂದು ಶಿಕ್ಷಕಿಯನ್ನು ಕೇಳಿಕೊಂಡಿದೆ.

ಹೌದು, ಮಕ್ಕಳು ಸಹಜವಾಗಿ ತಮ್ಮ ತಂದೆ ತಾಯಿಗಿಂತ ತಮ್ಮ ಅಜ್ಜ–ಅಜ್ಜಿಯರನ್ನೇ ಹೆಚ್ಚು ಹಚ್ಚಿಕೊಂಡಿರುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಈ ಮಗುವು ಅಜ್ಜ ಅಜ್ಜಿಯನ್ನು ತುಂಬಾನೇ ಹೆಚ್ಚಿಕೊಂಡಿರುವುದು ಸ್ಪಷ್ಟವಾಗಿ ತಿಳಿಯುತ್ತಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಶಾಲೆಯಲ್ಲಿ ಪುಟಾಣಿ ಮಗುವೊಂದು ಅಳುತ್ತ ನಾನು ಮನೆಗೆ ಹೋಗ್ಲಿಲ್ಲ ಅಂದ್ರೆ, ನನ್ನ ಅಜ್ಜ ಅಜ್ಜಿ ತುಂಬಾನೇ ಗಾಬರಿಯಾಗ್ತಾರೆ. ನಾನು ಮನೆಗೆ ಹೋದ್ರೆ ತುಂಬಾ ಗಾಬರಿಯಾಗಲ್ಲ, ನನ್ನ ತಾತ ತುಂಬಾ ಮುದ್ದು ಮಾಡ್ತಾನೆ ಎಂದು ಅಳುತ್ತಿರುವುದನ್ನು ಗಮನಿಸಬಹುದು.

ಶಿಕ್ಷಕಿ ಈ ಪುಟಾಣಿಯನ್ನು ಸಮಾಧಾನ ಪಡಿಸುತ್ತ, ಏನು ಆಗಲ್ಲ ನಾನು ಫೋನ್ ಮಾಡಿ ಹೇಳ್ತೇನೆ ಎಂದು ಹೇಳಿದ್ದಾರೆ. ಕೊನೆಗೆ ಶಾಲಾ ಶಿಕ್ಷಕಿ, ನಾವು ನಿನ್ನನ್ನು ಮುದ್ದು ಮಾಡ್ತೇವೆ ಎಂದು ಸಮಾಧಾನ ಪಡಿಸುತ್ತಾರೆ. ಆದರೆ ಕೋಪದಲ್ಲಿ ನೀವು ಮುದ್ದು ಮಾಡಲ್ಲ, ಸುಮ್ನೆ ಕುತ್ಕೋಳ್ಳಿ ತಾತ ಅಜ್ಜಿಯೆಲ್ಲಾ ಮುದ್ದು ಮಾಡ್ತಾರೆ ನಾನು ಮನೆಗೆ ಹೋಗ್ಬೇಕು ಎಂದು ಪದೇ ಪದೇ ಅದನ್ನೇ ಹೇಳುತ್ತಿದೆ.

ಇದನ್ನೂ ಓದಿ; ಈ ಇಳಿ ವಯಸ್ಸಿನಲ್ಲೂ ಈ ಅಜ್ಜಿಗೆ ಏನು ಎನರ್ಜಿ, ಈಕೆಯ ಜೀವನೋತ್ಸಾಹಕ್ಕೆ ನೆಟ್ಟಿಗರು ಫಿದಾ 

ಈ ವಿಡಿಯೋದಲ್ಲಿ ಶಿಕ್ಷಕಿ ಮುದ್ದು ಮಾಡೋದು ಅಂದ್ರೇನು ಕೇಳಿದ್ದಕ್ಕೆ ಈ ಪುಟಾಣಿ ಪ್ರೀತಿ ಕೊಡೋದು, ಹಾಗಾದ್ರೆ ನಾವು ಕೊಡ್ತೇವೆ ಎಂದು ಹೇಳಿದ್ದಾರೆ ಶಿಕ್ಷಕಿ. ಏನೇ ಹೇಳಿದ್ರೂ, ಈ ಮಗುವು ನಾನು ಮನೆಗೆ ಹೋಗ್ಬೇಕು ಎಂದು ಅಳುತ್ತಿರುವುದನ್ನು ಕಾಣಬಹುದು. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮಗುವಿನ ಮುದ್ದಾದ ಮಾತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಈ ವಿಡಿಯೋಗೆ ಈಗಾಗಲೇ ಮೆಚ್ಚುಗೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:35 pm, Wed, 26 June 24

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ