AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಈ ಇಳಿ ವಯಸ್ಸಿನಲ್ಲೂ ಈ ಅಜ್ಜಿಗೆ ಏನು ಎನರ್ಜಿ, ಈಕೆಯ ಜೀವನೋತ್ಸಾಹಕ್ಕೆ ನೆಟ್ಟಿಗರು ಫಿದಾ 

ವಯಸ್ಸು ದೇಹಕ್ಕಷ್ಟೇ ಮನಸ್ಸಿಗಲ್ಲ, ಜೀವನೋತ್ಸಾಹಕ್ಕಲ್ಲ ಎನ್ನುವುದಕ್ಕೆ ಇದೀಗ ಈ ವಿಡಿಯೋವೊಂದು ಸಾಕ್ಷಿಯಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಅಜ್ಜಿಯೊಬ್ಬಳು ತಮಿಳು ಹಾಡಿನ ತಾಳಕ್ಕೆ ತಕ್ಕಂತೆ  ಹೆಜ್ಜೆ ಹಾಕುತ್ತಿದ್ದು, ಈ ವಿಡಿಯೋವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.

Viral Video: ಈ ಇಳಿ ವಯಸ್ಸಿನಲ್ಲೂ ಈ ಅಜ್ಜಿಗೆ ಏನು ಎನರ್ಜಿ, ಈಕೆಯ ಜೀವನೋತ್ಸಾಹಕ್ಕೆ ನೆಟ್ಟಿಗರು ಫಿದಾ 
ವೈರಲ್​​ ವಿಡಿಯೋ
ಸಾಯಿನಂದಾ
| Edited By: |

Updated on: Jun 26, 2024 | 12:32 PM

Share

ವಯಸ್ಸು ಬರೀ ಸಂಖ್ಯೆಯಷ್ಟೇ. ವಯಸ್ಸು ದೇಹಕಾಗುತ್ತದೆಯೇ ಹೊರತು ಮನಸಿಗಲ್ಲ ಎನ್ನುವುದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಎನರ್ಜಿಟಿಕ್ ಆಗಿ ಸ್ಟೆಪ್ ಹಾಕುವ ವಯೋವೃದ್ಧರನ್ನು ಕಂಡಾಗ ಈ ಮಾತು ಸತ್ಯವೆನಿಸುತ್ತದೆ. ಆದರೆ ಇದೀಗ ವೈರಲ್ ಆಗಿರುವ  ವಿಡಿಯೋದಲ್ಲಿ ವೃದ್ಧೆರೊಬ್ಬರು ಯುವಕ ಯುವತಿಯರು ನಾಚುವಂತೆ ನೃತ್ಯ ಮಾಡಿದ್ದಾರೆ.

95 ವರ್ಷದ ವಯಸ್ಸಿನ ಅಜ್ಜಿಯೊಬ್ಬಳು ತಮಿಳಿನ ‘ಓ ರಸಿಕಂ ಸೀಮಾನೆ’ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಈ ವೃದ್ಧೆಯ ಡಾನ್ಸ್ ಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಭಾರತೀಯ ರೈಲ್ವೆ ಖಾತೆಗಳ ಸೇವೆ (IRAS) ಅಧಿಕಾರಿ ಅನಂತ್ ರೂಪಂಗುಡಿ ಅವರು ಟ್ವಿಟರ್‌ನಲ್ಲಿ ಈ ವೀಡಿಯೊವನ್ನು ಪೋಸ್ಟ್ ಮಾಡಿದ್ದು, “ವಿಶ್ರಾಂತಿ ಓಲ್ಡ್ ಏಜ್ ಹೋಮ್ ನಲ್ಲಿ 95 ವರ್ಷದ ವೃದ್ಧೆಯೊಬ್ಬರು ಹಳೆಯ ತಮಿಳು ಹಾಡಿಗೆ ನೃತ್ಯ ಮಾಡಿದರು” ಎಂದು ಬರೆದುಕೊಂಡಿದ್ದಾರೆ.

ಅದರೊಂದಿಗೆ, ‘ಈ ವೃದ್ಧೆಯು 1940ರ ದಶಕದಲ್ಲಿ ಕಲಾಕ್ಷೇತ್ರ ಫೌಂಡೇಶನ್‌ನ ವಿದ್ಯಾರ್ಥಿಯಾಗಿದ್ದು, ಹಿನ್ನೆಲೆ ನೃತ್ಯಗಾರರಾಗಿ ಕೆಲಸ ಮಾಡಿದ್ದರು. ಈ ಹಿಂದೆ  ಈ ವೃದ್ಧೆಯು ‘ಚಂದ್ರಲೇಖಾ’ ನಂತಹ ಹಿಟ್ ಚಿತ್ರಗಳ ಹಿನ್ನೆಲೆ ನೃತ್ಯಗಾರ್ತಿಯಾಗಿ ಕೆಲಸ ಮಾಡಿದ್ದರು ಎಂದು ಪೋಸ್ಟ್ ನಲ್ಲಿ ಬರೆದಿದ್ದಾರೆ. ಈ  ವಿಡಿಯೋವು ಒಂದೂವರೆ ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆ ಕಂಡಿದೆ.

ಇದನ್ನೂ ಓದಿ:   ಇಳಿ ವಯಸ್ಸಿನಲ್ಲೂ ಕುಂದದ ಜೀವನೋತ್ಸಾಹ… ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡಿ ಸ್ವಾವಲಂಬಿ ಬದುಕು ನಡೆಸುತ್ತಿರುವ ಗಟ್ಟಿಗಿತ್ತಿ

ಬಳಕೆದಾರರೊಬ್ಬರು, ‘ಎಂತಹ ಅದ್ಭುತ ಪ್ರದರ್ಶನ. ಅವರಿಂದ ಬಹಳಷ್ಟು ಕಲಿಯಬಹುದು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು  ‘ವಾವ್ 95 ವರ್ಷ, ಫಿಟ್ ಹಾಗೂ ಆರೋಗ್ಯಕರವಾಗಿದ್ದರೆ ನೃತ್ಯ ಮಾಡಲು ಸಾಧ್ಯವಾಗುತ್ತದೆ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ. ಈ ವಿಡಿಯೋಗೆ ಈಗಾಗಲೇ ನಾನಾ ರೀತಿಯ ಮೆಚ್ಚುಗೆಯ ಕಾಮೆಂಟ್ ಗಳು ವ್ಯಕ್ತವಾಗಿವೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ