ನವದೆಹಲಿ, ನವೆಂಬರ್ 21: ಭಾರತ ಕಳೆದ ಕೆಲ ವರ್ಷಗಳಿಂದ ಮೈಕೊಡವಿ ಮೇಲೇಳುತ್ತಿದೆ. ಶತಮಾನಗಳ ಬಳಿಕ ದೇಶವು ಈಗ ಜಾಗತಿಕ ರಂಗದ ಮುನ್ನೆಲೆಗೆ ಬಂದಿದೆ ಎಂದು ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಹೇಳಿದ್ದಾರೆ. ಜರ್ಮನಿಯ ಸ್ಟುಟ್ಗಾಟ್ನ ಎಂಎಚ್ಪಿ ಅರೇನಾದಲ್ಲಿ ಇಂದು ಆರಂಭಗೊಂಡಿರುವ ಮೂರು ದಿನಗಳ ನ್ಯೂಸ್9 ಗ್ಲೋಬಲ್ ಸಮಿಟ್ ಕಾರ್ಯಕ್ರಮದಲ್ಲಿ ಸಿಂದಿಯಾ ಮಾತನಾಡುತ್ತಿದ್ದರು. ನ್ಯೂಸ್9 ವಾಹಿನಿ ಈ ಕಾರ್ಯಕ್ರಮ ಆಯೋಜನೆ ಮಾಡಿರುವುದನ್ನು ಸಚಿವರು ಪ್ರಶಂಸಿಸಿದರು. ಇದೊಂದು ಮಾಧ್ಯಮ ಇತಿಹಾಸದಲ್ಲೇ ಒಂದು ಮೈಲಿಗಲ್ಲು ಎಂದು ಬಣ್ಣಿಸಿದರು.
ಭಾರತ ಮಾತ್ರವಲ್ಲ, ವಿಶ್ವದ ಯಾವುದೇ ಮಾಧ್ಯಮವೂ ಇಂಥದ್ದೊಂದು ಉನ್ನತ ಮಟ್ಟದ ಜಾಗತಿಕ ಸಮಿಟ್ ಅನ್ನು ಆಯೋಜನೆ ಮಾಡಿದ್ದು ಇದೇ ಮೊದಲು ಎಂದು ಜ್ಯೋತಿರಾದಿತ್ಯ ಸಿಂದಿಯಾ ಮೆಚ್ಚುಗೆ ವ್ಯಕ್ತಪಡಿಸಿದರು.
ಸುಸ್ಥಿರ ಅಭಿವೃದ್ಧಿಯ ಹಾದಿ ವಿಚಾರದ ಬಗ್ಗೆ ಸಚಿವರು ಮಾತನಾಡಿದರು. ಸುಸ್ಥಿರತೆ ಸಾಧನೆಯ ಹಾದಿಯಲ್ಲಿ ಭಾರತದ ಬೆಳವಣಿಗೆ ಬಗ್ಗೆ ಮಾಹಿತಿ ನೀಡಿದರು. ಹಸಿರು ಇಂಧನ ಉತ್ಪಾದನೆಯಲ್ಲಿ ಭಾರತ ಮುಂಚೂಣಿಗೆ ಬರುತ್ತಿರುವುದನ್ನು ತಿಳಿಸಿದರು. ಪ್ಯಾರಿಸ್ ಅಗ್ರೀಮೆಂಟ್ ಆಶಯದಂತೆ ಡೀಕಾರ್ಬನೈಸೇಶನ್ ಕಾರ್ಯದಲ್ಲಿ ಭಾರತ ಯಶಸ್ಸು ಗಳಿಸಿರುವುದನ್ನು ವಿವರಿಸಿದರು.
ಇದನ್ನೂ ಓದಿ: ನ್ಯೂಸ್9 ಗ್ಲೋಬಲ್ ಸಮಿಟ್ನಲ್ಲಿ ಭಾರತದ ಬೆಳವಣಿಗೆಯ ಹಾದಿ ತೆರೆದಿಟ್ಟ ಸಚಿವ ಎ ವೈಷ್ಣವ್
ಸರ್ಕಾರದ ಇನ್ನಷ್ಟು ಸಾಧನೆಗಳ ಬಗ್ಗೆ ಮಾಹಿತಿ ಬಿಚ್ಚಿಟ್ಟ ಜ್ಯೋತಿರಾದಿತ್ಯ ಸಿಂದಿಯಾ, ಪಿಎಂ ಇಂಟರ್ನ್ಶಿಪ್ ಯೋಜನೆಯ ಯಶಸ್ಸನ್ನು ಎತ್ತಿ ತೋರಿಸಿದರು.
ನವೆಂಬರ್ 21ರಿಂದ 23ರವರೆಗೆ ಜರ್ಮನಿಯ ಸ್ಟುಟ್ಗಾರ್ಟ್ನಲ್ಲಿ ನ್ಯೂಸ್9 ಗ್ಲೋಬಲ್ ಸಮಿಟ್ ಕಾರ್ಯಕ್ರಮ ನಡೆಯಲಿದೆ. ಟಿವಿ9 ನೆಟ್ವರ್ಕ್ ಎಂಡಿ ಮತ್ತು ಸಿಇಒ ಬರುಣ್ ದಾಸ್, ಕಾರ್ಯಕ್ರಮದ ಸಹ ಆಯೋಜಕರಾದ ವಿಎಫ್ಬಿ ಸ್ಟುಟ್ಗಾರ್ಟ್ನ ಚೀಫ್ ಮಾರ್ಕೆಟಿಂಗ್ ಆಫೀಸರ್ ಮೊದಲಾದವರು ಮಾತನಾಡಿದರು. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಭಾರತ ದೇಶ ಕಳೆದ 10 ವರ್ಷದಲ್ಲಿ ಸಾಧಿಸಿದ ಕಾರ್ಯಗಳ ವಿವರ ನೀಡಿದರು. ಹ್ಯಾಪಿ ಹೋಮ್ ಸಂಸ್ಥೆಯ ರಾಮುರಾವ್ ಜುಪಲ್ಲಿ ಕೂಡ ಮಾತನಾಡಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:38 pm, Thu, 21 November 24