Nigeria Boat Capsized: ಮದುವೆ ಮುಗಿಸಿ ಹಿಂದಿರುಗುತ್ತಿದ್ದ ವೇಳೆ ದೋಣಿ ಮಗುಚಿ 103 ಮಂದಿ ಸಾವು

ಆಫ್ರಿಕಾದ ಉತ್ತರ ನೈಜೀರಿಯಾದಲ್ಲಿ ಭೀಕರ ದೋಣಿ ಅಪಘಾತ ಸಂಭವಿಸಿದೆ. ಮಾಹಿತಿ ಪ್ರಕಾರ, ಈ ದೋಣಿ ಅಪಘಾತದಲ್ಲಿ ಸುಮಾರು 103 ಮಂದಿ ಸಾವನ್ನಪ್ಪಿದ್ದಾರೆ.

Nigeria Boat Capsized: ಮದುವೆ ಮುಗಿಸಿ ಹಿಂದಿರುಗುತ್ತಿದ್ದ ವೇಳೆ ದೋಣಿ ಮಗುಚಿ 103 ಮಂದಿ ಸಾವು
ದೋಣಿ
Image Credit source: ABP Live

Updated on: Jun 14, 2023 | 8:44 AM

ಆಫ್ರಿಕಾದ ಉತ್ತರ ನೈಜೀರಿಯಾದಲ್ಲಿ ಭೀಕರ ದೋಣಿ ದುರಂತ ಸಂಭವಿಸಿದೆ. ಮಾಹಿತಿ ಪ್ರಕಾರ, ಈ ದೋಣಿ ಅಪಘಾತದಲ್ಲಿ ಸುಮಾರು 103 ಮಂದಿ ಸಾವನ್ನಪ್ಪಿದ್ದಾರೆ. ಅಂತರಾಷ್ಟ್ರೀಯ ಸುದ್ದಿ ಸಂಸ್ಥೆ ಅಸೋಸಿಯೇಟೆಡ್ ಪ್ರೆಸ್ (AP) ಪ್ರಕಾರ, ಉತ್ತರ ನೈಜೀರಿಯಾದಿಂದ 103 ಜನರು ದೋಣಿಯಲ್ಲಿ ಮದುವೆಯಿಂದ ಹಿಂತಿರುಗುತ್ತಿದ್ದರು. ಈ ವೇಳೆ ದೋಣಿ ಮಗುಚಿದ ಘಟನೆ ನಡೆದಿದೆ. ಎಪಿ ಪ್ರಕಾರ, 100 ಕ್ಕೂ ಹೆಚ್ಚು ಜನರು ದೋಣಿಯಲ್ಲಿ ಮದುವೆಯಿಂದ ಹಿಂತಿರುಗುತ್ತಿದ್ದರು. ಇದೇ ವೇಳೆ ಹಠಾತ್ ಓವರ್ ಲೋಡ್ ನಿಂದಾಗಿ ಬೋಟ್ ಪಲ್ಟಿಯಾಗಿದೆ. ಈ ಅಪಘಾತದಲ್ಲಿ ಸುಮಾರು 103 ಮಂದಿ ಸಾವನ್ನಪ್ಪಿದ್ದಾರೆ.

ಇತರ ಜನರನ್ನು ರಕ್ಷಿಸಲು ಪೊಲೀಸರು ಮತ್ತು ಸ್ಥಳೀಯ ಜನರು ಪರಿಹಾರ ಮತ್ತು ರಕ್ಷಣಾ ಕಾರ್ಯವನ್ನು ಪ್ರಾರಂಭಿಸಿದ್ದಾರೆ. ಮಾಹಿತಿಯ ಪ್ರಕಾರ, ಅಪಘಾತದ ನಂತರ ಅನೇಕ ಮೃತದೇಹಗಳು ಪತ್ತೆಯಾಗಿವೆ. ಇದೇ ವೇಳೆ ಇತರರಿಗಾಗಿ ಹುಡುಕಾಟ ನಡೆಯುತ್ತಿದೆ.

ಸಿಎನ್ಎನ್ ವರದಿಯ ಪ್ರಕಾರ, ಈ ದೋಣಿ ಅಪಘಾತ ನೈಜರ್ ನದಿಯಲ್ಲಿ ಸಂಭವಿಸಿದೆ. ದೋಣಿಯಲ್ಲಿ ಸುಮಾರು 300 ಮಂದಿ ಇದ್ದರು ಎಂದು ಹೇಳಲಾಗುತ್ತಿದೆ. ಈ ಘಟನೆ ಸೋಮವಾರ ನಡೆದಿದೆ ಎಂದು ಕಪಾಡಾದ ಸಾಂಪ್ರದಾಯಿಕ ಮುಖ್ಯಸ್ಥ ಅಬ್ದುಲ್ ಗಣ ಲುಕ್ಪಾಡಾ ಹೇಳಿದ್ದಾರೆ.
ಮದುವೆಯಲ್ಲಿ ಭಾಗವಹಿಸಿದ್ದ ಅತಿಥಿಗಳು ನೈಜರ್ ನದಿಯನ್ನು ದಾಟಲು ಇಗ್ಬೋಟಿ ಗ್ರಾಮದಿಂದ ದೋಣಿ ಹತ್ತಿದ್ದಾರೆ ಎಂದು ಅಬ್ದುಲ್ ಗಣ ಲುಕ್ಪಾಡಾ ಹೇಳಿದರು.

ಮತ್ತಷ್ಟು ಓದಿ: ಉತ್ತರ ಪ್ರದೇಶ: ಗಂಗಾ ನದಿಯಲ್ಲಿ ದೋಣಿ ಮುಳುಗಿ 3 ಮಂದಿ ಸಾವು

ಕಪಡಾದಲ್ಲಿ ಸುರಿದ ಭಾರಿ ಮಳೆಗೆ ರಸ್ತೆಗಳು ಜಲಾವೃತಗೊಂಡಿವೆ. ಮದುವೆ ಸಮಯದಲ್ಲಿಯೇ ಮಳೆ ಸುರಿಯಲಾರಂಭಿಸಿತು ಎಂದು ತಿಳಿಸಿದರು. ಇದರಿಂದಾಗಿ ಜನರು ದೋಣಿಯಲ್ಲಿ ಹಿಂತಿರುಗಲು ನಿರ್ಧರಿಸಿದರು. ದೋಣಿಯಲ್ಲಿ ಪುರುಷರು ಮತ್ತು ಮಹಿಳೆಯರು ಸೇರಿದಂತೆ ಸುಮಾರು 300 ಜನರಿದ್ದರು ಎಂದು ಹೇಳಿದರು.

ಸೋಮವಾರ ಬೆಳಗಿನ ಜಾವ ಮೂರರಿಂದ ನಾಲ್ಕರ ನಡುವೆ ಈ ಅವಘಡ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ. ಬೋಟ್ ನೀರಿನಲ್ಲಿದ್ದ ಮರದ ಕಾಂಡಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ ಎಂದು ತಿಳಿಸಿದರು. ನನ್ನ ಮಾಹಿತಿಯ ಪ್ರಕಾರ ಕೇವಲ 53 ಜನರನ್ನು  ಮಾತ್ರ ಉಳಿಸಲು ಸಾಧ್ಯವಾಯಿತು ಎಂದಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ