ಸರ್ಕಾರಿ ದಾಖಲೆಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪ್ರಕರಣ, ಅಮೆರಿಕ ಮಾಜಿ ಅಧ್ಯಕ್ಷ ಟ್ರಂಪ್ ಮತ್ತೆ ಬಂಧನ
ಸರ್ಕಾರದ ದಾಖಲೆಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump)ರನ್ನು ಮತ್ತೆ ಬಂಧಿಸಲಾಗಿದೆ.
ಸರ್ಕಾರದ ದಾಖಲೆಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump)ರನ್ನು ಮತ್ತೆ ಬಂಧಿಸಲಾಗಿದೆ. ಪ್ರಕರಣ ಸಂಬಂಧ ಮಿಯಾಮಿ ಕೋರ್ಟ್ ಎದುರು ಟ್ರಂಪ್ ಶರಣಾಗಿದ್ದು, ಈ ವೇಳೆ ಪೊಲೀಸರು ಬಂಧಿಸಿದ್ದಾರೆ. ಟ್ರಂಪ್ ವಿರುದ್ಧ ಸರ್ಕಾರದ ದಾಖಲೆಗಳ ಅಕ್ರಮ ಸಂಗ್ರಹ ಆರೋಪವಿದೆ, 30ಕ್ಕೂ ಹೆಚ್ಚು ರಹಸ್ಯ ಕಡತಗಳನ್ನು ಅಕ್ರಮವಾಗಿ ಹೊತ್ತೊಯ್ದ ಆರೋಪ ಎದುರಿಸುತ್ತಿದ್ದಾರೆ. ಈ ಪ್ರಕರಣ ಸಂಬಂಧ ಮಿಯಾಮಿ ಕೋರ್ಟ್ ಟ್ರಂಪ್ರವರ ವಿಚಾರಣೆ ನಡೆಸಲಿದೆ. ಆರೋಪ ಸಾಬೀತಾದರೆ ಟ್ರಂಪ್ಗೆ 20 ವರ್ಷ ಜೈಲು ಶಿಕ್ಷೆ ಸಾಧ್ಯತೆ ಇದೆ ಎನ್ನಲಾಗಿದೆ. ಅಮೆರಿಕದ ಮಾಜಿ ಅಧ್ಯಕ್ಷರು ಎದುರಿಸುತ್ತಿರುವ ಎರಡನೇ ಕ್ರಿಮಿನಲ್ ಪ್ರಕರಣ ಇದಾಗಿದೆ. ಪ್ರಕರಣದಲ್ಲಿ ತಮ್ಮದೇನೂ ತಪ್ಪಿಲ್ಲ ಎಂದು ಅವರು ವಾದಿಸಿದ್ದಾರೆ.
ಮಿಯಾಮಿ ಫೆಡರಲ್ ನ್ಯಾಯಾಲಯದಲ್ಲಿ ನ್ಯಾಯಾಧೀಶ ಜೊನಾಥನ್ ಗುಡ್ಮ್ಯಾನ್ ಅವರ ಮುಂದೆ ವಿಚಾರಣೆ ಎದುರಿಸಿದ ಟ್ರಂಪ್, ತಮ್ಮ ವಿರುದ್ಧ ಕೇಳಿಬಂದ ಕ್ರಿಮಿನಲ್ ಆರೋಪಗಳ ತಪ್ಪೊಪ್ಪಿಕೊಂಡಿಲ್ಲ. ಈ ಪ್ರಕರಣದಲ್ಲಿ ತಮ್ಮನ್ನು ವಿನಾಕಾರಣ ಸಿಲುಕಿಸುವ ಪ್ರಯತ್ನ ನಡೆಯುತ್ತಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಮತ್ತಷ್ಟು ಓದಿ: ರಹಸ್ಯ ದಾಖಲೆಗಳ ಪ್ರಕರಣ: ಡೊನಾಲ್ಡ್ ಟ್ರಂಪ್ ವಿರುದ್ಧ ದೋಷಾರೋಪಣೆ, ದಾಖಲೆಗಳನ್ನು ಎಲ್ಲೆಲ್ಲಿ ಅಡಗಿಸಿಟ್ಟಿದ್ದರು
ರಹಸ್ಯ ದಾಖಲೆಗಳ ಹೊತ್ತೊಯ್ದ ಪ್ರಕರಣದಲ್ಲಿ ಒಂದೊಮ್ಮೆ ಶಿಕ್ಷೆಗೆ ಒಳಗಾದರೆ ಡೊನಾಲ್ಡ್ ಟ್ರಂಪ್ ಅವರು ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಕ್ರಿಮಿನಲ್ ಪ್ರಕರಣ ಇದಾಗಿದ್ದು, ಆರೋಪ ಸಾಬೀತಾದರೆ 20 ವರ್ಷಗಳ ಜೈಲು ಶಿಕ್ಷೆ ಖಚಿತ ಎನ್ನಲಾಗುತ್ತಿದೆ.
ಡೊನಾಲ್ಡ್ ಟ್ರಂಪ್ ಮಿಯಾಮಿ ಕೋರ್ಟ್ ಮುಂದೆ ವಿಚಾರಣೆಗೆ ಒಳಗಾಗುವ ಮುನ್ನ ಅವರ ಬೆಂಬಲಿಗರು ಕೋರ್ಟ್ ಮುಂದೆ ಘೋಷಣೆ ಕೂಗಿದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ