ಅಮ್ಮ ನಾಲ್ಕು ದಿನ ಬದುಕಿದ್ದಳು; ಕೊಲಂಬಿಯಾದ ವಿಮಾನ ಅಪಘಾತದಲ್ಲಿ ಸಾಯುವ ಮುನ್ನ ಆಕೆ ಮಕ್ಕಳಿಗೆ ನೀಡಿದ ಸಲಹೆ ಏನು?
ಮಕ್ಕಳು ತಮ್ಮ ತಾಯಿಯೊಂದಿಗೆ ಅರರಾಕುವಾರಾ ಗ್ರಾಮದಿಂದ ಸ್ಯಾನ್ ಜೋಸ್ ಡೆಲ್ ಗುವಿಯಾರ್ ಪಟ್ಟಣಕ್ಕೆ ಪ್ರಯಾಣಿಸುತ್ತಿದ್ದಾಗ ವಿಮಾನವು ಪತನಗೊಂಡಿತ್ತು. ಸೆಸ್ನಾ ಸಿಂಗಲ್ ಇಂಜಿನ್ ಪ್ರೊಪೆಲ್ಲರ್ ವಿಮಾನವು ಮೂವರು ವಯಸ್ಕರು ಮತ್ತು ನಾಲ್ಕು ಮಕ್ಕಳನ್ನು ಹೊತ್ತೊಯ್ಯುತ್ತಿದ್ದಾಗ ಇಂಜಿನ್ ವೈಫಲ್ಯದಿಂದಾಗಿ ಪೈಲಟ್ ತುರ್ತು ಭೂಸ್ಪರ್ಷ ಮಾಡಲು ನಿರ್ಧರಿಸಿತ್ತು
ಆ ಮಕ್ಕಳ ವಯಸ್ಸು 13, 9, 4 ಮತ್ತು 1 ವರ್ಷ. ಕೊಲಂಬಿಯಾದ ವಿಮಾನ ಅಪಘಾತದಲ್ಲಿ(Colombian plane crash) ಬದುಕುಳಿದ ಈ ಮಕ್ಕಳನ್ನು ಶುಕ್ರವಾರ ರಕ್ಷಣೆ ಮಾಡಲಾಗಿತ್ತು. ಇವರಿಗೀಗ ಚಿಕಿತ್ಸೆ ನೀಡುತ್ತಿತ್ತು ಇವರು ಆಸ್ಪತ್ರೆಯಲ್ಲಿ ಕನಿಷ್ಠ ಎರಡು ವಾರಗಳ ಕಾಲ ಉಳಿಯುವ ನಿರೀಕ್ಷೆಯಿದೆ. ಇವರು ಈಗ ಮಾತನಾಡುತ್ತಿದ್ದು, ಬೆಡ್ ನಲ್ಲಿ ಸುಮ್ಮನೆ ಮಲಗಲು ಇಷ್ಟಪಡುವುದಿಲ್ಲ ಎಂದು ಅವರ ಸಂಬಂಧಿಕರು ಹೇಳಿದ್ದಾರೆ. ಇಬ್ಬರು ಕಿರಿಯ ಮಕ್ಕಳ ತಂದೆ ಮ್ಯಾನುಯೆಲ್ ರಾನೊಕ್ ಭಾನುವಾರ ಆಸ್ಪತ್ರೆಯ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿ ತಮ್ಮ ಮಕ್ಕಳಲ್ಲಿ ಹಿರಿಯವ 13 ವರ್ಷದ ಲೆಸ್ಲಿ ಜಾಕೊಬೊಂಬೈರ್ ಮುಕುಟುಯ್, ಮೇ 1 ರಂದು ಕೊಲಂಬಿಯಾದ ಕಾಡಿನಲ್ಲಿ ವಿಮಾನ ಅಪಘಾತಕ್ಕೀಡಾದ ನಂತರ ಸುಮಾರು ನಾಲ್ಕು ದಿನಗಳ ಕಾಲ ಅವರ ತಾಯಿ ಹೇಗೆ ಜೀವಂತವಾಗಿದ್ದರು ಎಂಬುದನ್ನು ಹೇಳಿದ್ದಾರೆ.
ಅವರ ಅಮ್ಮ ಸಾಯುವ ಮುನ್ನ ತಮ್ಮ ಮಕ್ಕಳಲ್ಲಿ ನೀವು ದೂರ ಹೋಗಿ, ಈ ಅವಶೇಷದ ಹತ್ತಿರ ಇರಬೇಡಿ ಎಂದು ಹೇಳಿರಬಹುದು ಅಂತಾರೆ ರಾನೊಕ್. ಈ ಬಗ್ಗೆ ರಾನೊಕ್ ಹೆಚ್ಚಿನ ಹೆಚ್ಚಿನ ವಿವರಗಳನ್ನು ಹೇಳಿಲ್ಲ.
ಆದರೆ ಬದುಕುಳಿದ ಮಕ್ಕಳಿದ್ದಾರಲ್ಲ ಅವರು ಅಲ್ಲಿ ನಡೆದಿರುವ ಘಟನೆ ಬಗ್ಗೆ ಸ್ವಲ್ಪ ಸ್ವಲ್ಪ ಮಾಹಿತಿಗಳನ್ನು ಹೇಳುತ್ತಿದ್ದಾರೆ. ಇದರ ಸ್ಪಷ್ಟ ಚಿತ್ರಣ ಸಿಗಬೇಕಾದರೆ ಇನ್ನಷ್ಟು ಸಮಯ ಹಿಡಿಸೀತು ಅಂತಾರೆ ಅಧಿಕಾರಿಗಳು.
ಮಕ್ಕಳು ಎರಡು ಸಣ್ಣ ಚೀಲಗಳಲ್ಲಿ ಕೆಲವು ಬಟ್ಟೆಗಳು, ಟವೆಲ್, ಬ್ಯಾಟರಿ, ಎರಡು ಸೆಲ್ ಫೋನ್, ಮ್ಯೂಸಿಕ್ ಬಾಕ್ಸ್ ಮತ್ತು ಸೋಡಾ ಬಾಟಲ್ ಅನ್ನು ಹೊಂದಿದ್ದರು ಎಂದು ಹುಡುಕಾಟದ ಗುಂಪಿನ ಭಾಗವಾಗಿದ್ದ ಸ್ಥಳೀಯ ವ್ಯಕ್ತಿ ಹೆನ್ರಿ ಗೆರೆರೊ ಸುದ್ದಿಗಾರರಲ್ಲಿ ಹೇಳಿದ್ದಾರೆ. ಅವರು ಕಾಡಿನಲ್ಲಿ ನೀರು ಸಂಗ್ರಹಿಸಲು ಬಾಟಲಿಯನ್ನು ಬಳಸುತ್ತಿದ್ದರು. ಅವರು ತುಂಬಾನೇ ಹಸಿದಿದ್ದರು ನಾವು ಅವರನ್ನು ರಕ್ಷಿಸಿದ ನಂತರ ಅವರು ಅಕ್ಕಿ ಪುಡಿಂಗ್ ಬೇಕು ಅಂದರು, ಬ್ರೆಡ್ ಬೇಕು ಅಂದರುಎಂದು ಗೆರೆರೊ ಹೇಳಿದ್ದಾರೆ.
ಮಕ್ಕಳು ಮಾತನಾಡಲು ಪ್ರಾರಂಭಿಸುತ್ತಿದ್ದಾರೆ ಎಂದು ಮಕ್ಕಳ ಚಿಕ್ಕಪ್ಪ ಫೀಡೆನ್ಸಿಯೊ ವೇಲೆನ್ಸಿಯಾ ನೋಟಿಸಿಯಾಸ್ ಕ್ಯಾರಕೋಲ್ ಮಾಧ್ಯಮಕ್ಕೆ ತಿಳಿಸಿದರು. ಆ ಮಕ್ಕಳಲ್ಲಿ ಒಬ್ಬರು ಹಾವುಗಳು, ಪ್ರಾಣಿಗಳು ಮತ್ತು ಸೊಳ್ಳೆಗಳಿಂದ ತುಂಬಿದ ಕಾಡಿನಲ್ಲಿ ತಮ್ಮನ್ನು ರಕ್ಷಿಸಿಕೊಳ್ಳಲು ಮರದ ಕಾಂಡಗಳಲ್ಲಿ ಅಡಗಿಕೊಂಡಿದ್ದರು. ಅವರು ದಣಿದಿದ್ದಾರೆ.
ಕೊಲಂಬಿಯಾದ ಬೊಗೋಟಾದಲ್ಲಿರುವ ಮಿಲಿಟರಿ ಆಸ್ಪತ್ರೆಯಲ್ಲಿ ಅವರನ್ನು ಭೇಟಿ ಮಾಡಿದ ನಂತರ ಮಾತನಾಡಿದ ವೇಲೆನ್ಸಿಯಾ, ಅವರೀಗ ಸ್ವಲ್ಪ ಸ್ವಲ್ಪ ತಿನ್ನುತ್ತಿದ್ದಾರೆ ಎಂದು ಹೇಳಿದರು. ಶನಿವಾರ, ರಕ್ಷಣಾ ಸಚಿವ ಇವಾನ್ ವೆಲಾಸ್ಕ್ವೆಜ್ ಮಕ್ಕಳು ಹಸಿವು,ಬಾಯಾರಿಕೆಯಿಂದ ಸಿಕ್ಕಾಪಟ್ಟೆ ದಣಿದಿರುವುದರಿಂದ ಅವರಿಗೆ ಸರಿಯಾಗಿ ತಿನ್ನಲು ಆಗುತ್ತಿಲ್ಲ ಎಂದಿದ್ದರು. ಆಘಾತದಿಂದ ಚೇತರಿಸಿಕೊಳ್ಳಲು ಅವರಿಗೆ ಸ್ಥಳ ಮತ್ತು ಸಮಯವನ್ನು ನೀಡಲು ಕುಟುಂಬ ಸದಸ್ಯರು ಅವರೊಂದಿಗೆ ಹೆಚ್ಚು ಮಾತನಾಡುತ್ತಿಲ್ಲ ಎಂದು ಅವರು ಹೇಳಿದರು.
ಮಕ್ಕಳು ತಮ್ಮ ತಾಯಿಯೊಂದಿಗೆ ಅರರಾಕುವಾರಾ ಗ್ರಾಮದಿಂದ ಸ್ಯಾನ್ ಜೋಸ್ ಡೆಲ್ ಗುವಿಯಾರ್ ಪಟ್ಟಣಕ್ಕೆ ಪ್ರಯಾಣಿಸುತ್ತಿದ್ದಾಗ ವಿಮಾನವು ಪತನಗೊಂಡಿತ್ತು. ಸೆಸ್ನಾ ಸಿಂಗಲ್ ಇಂಜಿನ್ ಪ್ರೊಪೆಲ್ಲರ್ ವಿಮಾನವು ಮೂವರು ವಯಸ್ಕರು ಮತ್ತು ನಾಲ್ಕು ಮಕ್ಕಳನ್ನು ಹೊತ್ತೊಯ್ಯುತ್ತಿದ್ದಾಗ ಇಂಜಿನ್ ವೈಫಲ್ಯದಿಂದಾಗಿ ಪೈಲಟ್ ತುರ್ತು ಭೂಸ್ಪರ್ಷ ಮಾಡಲು ನಿರ್ಧರಿಸಿತ್ತು. ಸ್ವಲ್ಪ ಸಮಯದ ನಂತರ ಸಣ್ಣ ವಿಮಾನವು ಪತನವಾಗಿದ್ದು, ಬದುಕುಳಿದವರಿಗಾಗಿ ಹುಡುಕಾಟ ಪ್ರಾರಂಭವಾಯಿತು.
ಮಕ್ಕಳಲ್ಲಿ ಒಬ್ಬ ಅಂಕಲ್, ನನಗೆ ಬೂಟುಗಳು ಬೇಕು, ನಾನು ನಡೆಯಲು ಬಯಸುತ್ತೇನೆ, ಆದರೆ ನನ್ನ ಪಾದಗಳು ನೋಯುತ್ತಿವೆ ಎಂದು ಹೇಳಿದ್ದಾನೆ. ನೀನು ಚೇತರಿಸಿಕೊಂಡಾಗ ಸಾಕರ್ ಆಡೋಣ ಎಂದು ಅವನಿಗೆ ಹೇಳಿದ್ದೇನೆ ಎಂದು ಡೈರೊ ಜುವೇನಲ್ ಮುಕುಟಯ್ ಹೇಳಿದ್ದಾರೆ.
ಈ ಮಕ್ಕಳು ಕಾಡಿನಲ್ಲಿ ಮರಗೆಣಸಿನ ಹಿಟ್ಟು ಮತ್ತು ಬೀಜಗಳನ್ನು ತಿನ್ನುವ ಮೂಲಕ ಬದುಕುಳಿದರು. ಮಳೆಕಾಡಿನ ಕೆಲವೊಂದು ಹಣ್ಣುಗಳ ಪರಿಚಯ ಅವರಿಗೆ ಇತ್ತು. ಈ ಮಕ್ಕಳು ಹುಯಿಟೊಟೊ ಸ್ಥಳೀಯ ಗುಂಪಿನ ಸದಸ್ಯರಾಗಿದ್ದಾರೆ ಎಂದು ಅಧಿಕಾರಿಗಳು ಮತ್ತು ಕುಟುಂಬದ ಸದಸ್ಯರು ಹೇಳಿದ್ದಾರೆ.
ಶುಕ್ರವಾರ ರಕ್ಷಿಸಿದ ನಂತರ ಮಕ್ಕಳನ್ನು ಹೆಲಿಕಾಪ್ಟರ್‌ನಲ್ಲಿ ಬೊಗೊಟಾಗೆ ಮತ್ತು ನಂತರ ಮಿಲಿಟರಿ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅಧ್ಯಕ್ಷ ಗುಸ್ಟಾವೊ ಪೆಟ್ರೋ, ಸರ್ಕಾರ ಮತ್ತು ಮಿಲಿಟರಿ ಅಧಿಕಾರಿಗಳು ಮತ್ತು ಕುಟುಂಬ ಸದಸ್ಯರು ಶನಿವಾರ ಮಕ್ಕಳನ್ನು ಭೇಟಿಯಾದರು.
ಶುಕ್ರವಾರ ಬಿಡುಗಡೆಯಾದ ವಾಯುಪಡೆಯ ವೀಡಿಯೊದಲ್ಲಿ ಹೆಲಿಕಾಪ್ಟರ್, ಯುವಕರನ್ನು ರಕ್ಷಿಸಲು ಲೈನ್‌ಗಳನ್ನು ಬಳಸುವುದನ್ನು ತೋರಿಸಿದೆ. ಸೈನಿಕರು ಮತ್ತು ಸ್ವಯಂಸೇವಕರ ಗುಂಪು ಥರ್ಮಲ್ ಹೊದಿಕೆಗಳಲ್ಲಿ ಮಕ್ಕಳನ್ನು ಸುತ್ತಿ ಪೋಸ್ ನೀಡುತ್ತಿರುವ ಚಿತ್ರಗಳನ್ನು ಮಿಲಿಟರಿ ಶುಕ್ರವಾರ ಟ್ವೀಟ್ ಮಾಡಿದೆ. ಯೋಧರಲ್ಲಿ ಒಬ್ಬರು ಚಿಕ್ಕ ಮಗುವಿನ ಬಾಟಲಿ ಹಾಲು ಕುಡಿಸುತ್ತಿದ್ದರು.
ಅಪಘಾತದ ಸ್ಥಳದಿಂದ 5 ಕಿಲೋಮೀಟರ್ (3 ಮೈಲಿ) ದೂರದಲ್ಲಿ ಸಣ್ಣ ಅರಣ್ಯ ತೆರವುಗೊಳಿಸುವಿಕೆಯಲ್ಲಿ ಮಕ್ಕಳು ಕಂಡುಬಂದಿದ್ದಾರೆ ಎಂದು ರಕ್ಷಣಾ ಕಾರ್ಯಗಳ ಉಸ್ತುವಾರಿ ವಹಿಸಿದ್ದ ಜನರಲ್ ಪೆಡ್ರೊ ಸ್ಯಾಂಚೆಜ್ ಹೇಳಿದ್ದಾರೆ. ರಕ್ಷಣಾ ತಂಡಗಳು ಒಂದೆರಡು ಸಂದರ್ಭಗಳಲ್ಲಿ ಮಕ್ಕಳು ಕಂಡುಬಂದ ಸ್ಥಳದಿಂದ 20 ರಿಂದ 50 ಮೀಟರ್ (66 ರಿಂದ 164 ಅಡಿ) ಒಳಗೆ ಹಾದು ಹೋಗಿದ್ದಾರೆ. ಆಗ ಅವರು ಕಾಣ ಸಿಗಲಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: Amazon Forest: ವಿಮಾನ ಅಪಘಾತ: 40 ದಿನಗಳ ಕಾಲ ಅಮೆಜಾನ್ ಕಾಡಿನಲ್ಲಿ 4 ಮಕ್ಕಳು ಬದುಕುಳಿದಿದ್ದು ಹೇಗೆ?
ಅಪಘಾತದ ಎರಡು ವಾರಗಳ ನಂತರ, ಮೇ 16 ರಂದು ಹುಡುಕಾಟ ತಂಡವು ಮಳೆಕಾಡಿನ ದಟ್ಟವಾದ ಪ್ರದೇಶದಲ್ಲಿ ವಿಮಾನವನ್ನು ಕಂಡುಹಿಡಿದಿದೆ. ಈ ವಿಮಾನದಲ್ಲಿದ್ದ ಮೂವರು ವಯಸ್ಕರ ದೇಹಗಳನ್ನು ಸಿಕ್ಕಿದ್ದರೂ, ಸಣ್ಣ ಮಕ್ಕಳು ಎಲ್ಲಿಯೂ ಕಂಡುಬಂದಿಲ್ಲ.
ಹೆಲಿಕಾಪ್ಟರ್‌ಗಳಲ್ಲಿದ್ದ ಸೈನಿಕರು ಆಹಾರದ ಪೆಟ್ಟಿಗೆಗಳನ್ನು ಕಾಡಿನಲ್ಲಿ ಬೀಳಿಸಿದ್ದು ಇದು ಮಕ್ಕಳನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಆಶಿಸಿದರು. ಆ ಪ್ರದೇಶದ ಮೇಲೆ ಹಾರುವ ವಿಮಾನಗಳು ರಾತ್ರಿಯಲ್ಲಿ ನೆಲದ ಮೇಲೆ ಹುಡುಕಾಟದ ಸಿಬ್ಬಂದಿಗೆ ಸಹಾಯ ಮಾಡಲು ಹಲವಾರು ಕ್ರಮ ಕೈಗೊಂಡಿತು. ಕೊಲಂಬಿಯಾದ ಸೈನ್ಯವು 150 ಸೈನಿಕರನ್ನು ನಾಯಿಗಳೊಂದಿಗೆ ಪ್ರದೇಶಕ್ಕೆ ಕಳುಹಿಸಿತು, ಅಲ್ಲಿ ಮಂಜು ಮತ್ತು ದಟ್ಟವಾದ ಎಲೆಗಳು ಮುಚ್ಚಿದ್ದರಿಂದ ಯಾರೂ ಕಾಣಸಿಗಲಿಲ್ಲ.. ಸ್ಥಳೀಯ ಬುಡಕಟ್ಟು ಸಮುದಾಯದ ಹತ್ತಾರು ಸ್ವಯಂಸೇವಕರು ಹುಡುಕಾಟದಲ್ಲಿ ಸೇರಿಕೊಂಡರು. ಇವರ ಸಹಾಯದಿಂದ ಮಕ್ಕಳನ್ನು ಪತ್ತೆ ಹಚ್ಚಲು ಸಾಧ್ಯವಾಯಿತು.
ದೇಶದಲ್ಲಿ ಆಂತರಿಕ ಸಂಘರ್ಷಗಳನ್ನು ಕೊನೆಗೊಳಿಸಲು ಪ್ರಯತ್ನಿಸುತ್ತಿರುವ ಕೊಲಂಬಿಯಾದ ಸರ್ಕಾರವು ಮಕ್ಕಳನ್ನು ಹುಡುಕಲು ಮಿಲಿಟರಿ ಮತ್ತು ಸ್ಥಳೀಯ ಸಮುದಾಯಗಳ ಜಂಟಿ ಕೆಲಸವನ್ನು ಎತ್ತಿ ತೋರಿಸಿದೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ