ಚೀನಾ(China) ಮೂಲದ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ಹೊಸ ನಿಯಮವನ್ನು ಪರಿಚಯಿಸಿದೆ. ತನ್ನ ಉದ್ಯೋಗಿಗಳು ವಿವಾಹೇತರ ಸಂಬಂಧ ಹೊಂದಿರಬಾರದು ಹಾಗೆಯೇ ವಿಚ್ಛೇದನ ನೀಡಿದರೂ ಕೆಲಸದಿಂದ ವಜಾಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ. ಕುಟುಂಬಕ್ಕೆ ನಿಷ್ಠರಾಗಿರುವ ಕಾರ್ಪೊರೇಟ್ ಸಂಸ್ಕೃತಿಯನ್ನು ಪ್ರತಿಪಾದಿಸುವ ಮತ್ತು ಗಂಡ ಮತ್ತು ಹೆಂಡತಿಯ ನಡುವಿನ ಪ್ರೀತಿ ಇವೆಲ್ಲವನ್ನು ಉಳಿಸಿಕೊಂಡು ಹೋದರಷ್ಟೇ ಕೆಲಸ ಎಂದು ಸ್ಪಷ್ಟಪಡಿಸಿದೆ.”
ಈ ನಿಯಮವು ಎಲ್ಲಾ ವಿವಾಹಿತ ಸಿಬ್ಬಂದಿಗೆ ಅನ್ವಯಿಸುತ್ತದೆ. ವಿವಾಹೇತರ ಸಂಬಂಧ ಹೊಂದಿರುವ ಉದ್ಯೋಗಿಗಳ ಮೇಲಿನ ನಿಷೇಧವು ಸಾಮಾಜಿಕ ಮಾಧ್ಯಮದಲ್ಲಿ ಬಿಸಿ ಚರ್ಚೆಗೆ ಕಾರಣವಾಗಿದೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಹೇಳಿದೆ.
ಜತೆಗೆ ಆತ/ಆಕೆ ವಿಚ್ಛೇದನ ನೀಡುವಂತಿಲ್ಲ, ವೀವಾಹೇತರ ಸಂಬಂಧ ಹೊಂದಿರುವ ಉದ್ಯೋಗಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು, ಕಂಪನಿಯಲ್ಲಿ ಕೆಲಸ ಮಾಡಲು ಅಂತವರು ಅರ್ಹರಾಗಿರುವುದಿಲ್ಲ ಎಂದು ಹೇಳಿದೆ.
ಮತ್ತಷ್ಟು ಓದಿ: ಬಿಡದಿಯಲ್ಲಿ ಚೀನಾ ಕಂಪನಿಯಿಂದ ನೌಕರರ ಭವಿಷ್ಯ, ಭವಿಷ್ಯ ನಿಧಿ ಎರಡಕ್ಕೂ ಸಂಚಕಾರ! ಲ್ಯಾಪ್ ಟಾಪ್ ಬ್ಯಾಗ್ ತಯಾರಿಸಿಕೊಡುತ್ತಿದ್ದ ಮಹಿಳೆಯರ ಪಾಡೇನು?
ಎಲ್ಲಾ ಉದ್ಯೋಗಿಗಳು ತಮ್ಮ ಮನಸ್ಸನ್ನು ಬದಲಿಸಿಕೊಂಡು, ಉತ್ತಮ ಉದ್ಯೋಗಿಗಳಾಗಲು ಪ್ರಯತ್ನಿಸಿ, ಜತೆಗೆ ಕುಟುಂಬದಲ್ಲೂ ಒಳ್ಳೆಯ ಹೆಸರು ಪಡೆಯಿರಿ ಎಂದು ಕಂಪನಿ ಹೇಳಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ