ಅಮೆರಿಕದಲ್ಲಿ ಇನ್ನು ಮಾಸ್ಕ್ ಧರಿಸಬೇಕಾಗಿಲ್ಲ ಆದರೆ ಗುಂಪಿನಲ್ಲಿದ್ದಾಗ ಮಾಸ್ಕ್ ಇರಲಿ! ಅಧ್ಯಕ್ಷ ಜೋ ಬೈಡೆನ್ ಘೋಷಣೆ

|

Updated on: Apr 28, 2021 | 10:51 AM

ಕೊರೊನಾದಿಂದ ನಮ್ಮ ಅಮೆರಿಕಾ ನರಳಿತ್ತು. ಆದರೆ ಆರೋಗ್ಯಾಧಿಕಾರಿಗಳ ಅದ್ಭುತ ಕೆಲಸದಿಂದ ಜನರ ಸಹಕಾರದಿಂದ ಸೋಂಕನ್ನು ನಿಯಂತ್ರಸುವಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದೇವೆ. ಹಾಗಾಗಿ ಎರಡು ಬಾರಿಯೂ ಚುಚ್ಚು ಮದ್ದು ಹಾಕಿಸಿಕೊಂಡವರು ಇನ್ಮುಂದೆ ಒಬ್ಬರೇ ಇದ್ದಾಗ ಮಾಸ್ಕ್​ ಹಾಕಿಕೊಳ್ಳುವುದು ಬೇಡ ಎಂದು ಅಧ್ಯಕ್ಷ ಜೋ ಬೈಡೆನ್ ಸಾರಿದ್ದಾರೆ.

ಅಮೆರಿಕದಲ್ಲಿ ಇನ್ನು ಮಾಸ್ಕ್ ಧರಿಸಬೇಕಾಗಿಲ್ಲ ಆದರೆ ಗುಂಪಿನಲ್ಲಿದ್ದಾಗ ಮಾಸ್ಕ್ ಇರಲಿ! ಅಧ್ಯಕ್ಷ ಜೋ ಬೈಡೆನ್ ಘೋಷಣೆ
ಜೊ ಬೈಡನ್​
Follow us on

ದೆಹಲಿ: ಅಮೆರಿಕದಲ್ಲಿ ಉಲ್ಬಣಗೊಂಡಿದ್ದ ಕೊರೊನಾ ಸೋಂಕು ಕಾಟ ತಹಬಂದಿಗೆ ಬಂದಿದೆಯಾ? ಏಂಕೆಂದರೆ ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಅವರು ದಿಢೀರನೆ ಆದೇಶವೊಂದನ್ನು ಹೊರಡಿಸಿದ್ದು, ಲಸಿಕೆ ಪಡೆದವರು ಮಾಸ್ಕ್ ಧರಿಸಬೇಕಾಗಿಲ್ಲ ಎಂದು ಘೋಷಣೆ ಮಾಡಿದ್ದಾರೆ. ಸಾಂಕ್ರಾಮಿಕ ರೋಗ ತಡೆ ಇಲಾಖೆ ಶಿಫಾರಸು ಹಿನ್ನೆಲೆ ಈ ಕ್ರಮ ಕೈಗೊಂಡಿರುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ತಿಳಿಸಿದ್ದಾರೆ.

ಅಮೆರಿಕದಲ್ಲಿ ಇನ್ನು ಮಾಸ್ಕ್ ಧರಿಸಬೇಕಾಗಿಲ್ಲ. ಹೊರಗೆ ಏಕಾಂಗಿಯಾಗಿ ಓಡಾಡುವಾಗ ಮಾಸ್ಕ್​ ಧರಿಸದಿದ್ದರೂ ರವಾಗಿಲ್ಲ. ಆದರೆ ಗುಂಪಿನಲ್ಲಿದ್ದಾಗ ಮಾಸ್ಕ್ ಖಂಡಿತವಾಗಿಯೂ ಧರಿಸಿ ಎಂದು ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ. ಗಮನಾರ್ಹವೆಂದ್ರೆ ಅಮೆರಿಕದಲ್ಲಿ ಪ್ರತಿಯೊಬ್ಬ
ವಯಸ್ಕರರಿಗೂ ವ್ಯಾಕ್ಸಿನೇಶನ್​ ಹಾಕಲಾಗಿದೆ. ಇದುವರೆಗೂ 95 ದಶಲಕ್ಷ ಅಮೆರಿಕನ್ನರಿಗೆ ಕೊರೊನಾ ಚುಚ್ಚುಮದ್ದು ಹಾಕಲಾಗಿದೆ ಎಂದು ಸಾಂಕ್ರಾಮಿಕ ರೋಗ ತಡೆ ಇಲಾಖೆ (Centers for Disease Control and Prevention-CDC) ತಿಳಿಸಿದೆ.

ಈ ಹಿಂದೆ ಕೊರೊನಾದಿಂದ ನಮ್ಮ ಅಮೆರಿಕಾ ನರಳಿತ್ತು. ಆದರೆ ಆರೋಗ್ಯಾಧಿಕಾರಿಗಳ ಅದ್ಭುತ ಕೆಲಸದಿಂದ ಜನರ ಸಹಕಾರದಿಂದ ಸೋಂಕನ್ನು ನಿಯಂತ್ರಸುವಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದೇವೆ. ಹಾಗಾಗಿ ಎರಡು ಬಾರಿಯೂ ಚುಚ್ಚು ಮದ್ದು ಹಾಕಿಸಿಕೊಂಡವರು ಇನ್ಮುಂದೆ ಒಬ್ಬರೇ ಇದ್ದಾಗ ಮಾಸ್ಕ್​ ಹಾಕಿಕೊಳ್ಳುವುದು ಬೇಡ ಎಂದು ಅಧ್ಯಕ್ಷ ಜೋ ಬೈಡೆನ್ ಸಾರಿದ್ದಾರೆ.

(no need of mask to vaccinated people in usa says president Joe Biden)

Also Reed:
ಮೇ 1ರಿಂದ 3ನೇ ಹಂತದ ಲಸಿಕೆ ವಿತರಣೆ; ನೀವೂ 18 ವರ್ಷ ಮೇಲ್ಪಟ್ಟವರಾಗಿದ್ದರೆ ಇಂದಿನಿಂದಲೇ ನೋಂದಣಿ ಮಾಡಿಕೊಳ್ಳಿ.. ಇಲ್ಲಿದೆ ನೋಡಿ ವಿಧಾನ

Published On - 10:48 am, Wed, 28 April 21