ಅಮೆರಿಕದ ಕೆಂಟಕಿ ಸೇರಿ ಹಲವೆಡೆ ಸುಂಟರಗಾಳಿ ಆರ್ಭಟ; 50ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆಂದ ಗವರ್ನರ್​

| Updated By: Lakshmi Hegde

Updated on: Dec 11, 2021 | 6:34 PM

ಅಷ್ಟೇ ಅಲ್ಲ, ಯುಎಸ್​ನ ಇಲ್ಲಿನೊಯಿಸ್​ ರಾಜ್ಯದ ಅಮೇಜಾನ್​ ವೇರ್​ಹೌಸ್​​ನ ಮೇಲ್ಛಾವಣಿ ಕೂಡ ಕುಸಿದುಬಿದ್ದಿದೆ. ಅದರಲ್ಲಿ ಕೂಡ 100ಕ್ಕೂ ಹೆಚ್ಚು ಮಂದಿ ಸಿಲುಕಿದ್ದರು. ಶನಿವಾರ ಮುಂಜಾನೆಯವರೆಗೂ ಅವರ ರಕ್ಷಣಾ ಕಾರ್ಯಾಚರಣೆ ನಡೆದಿದೆ.

ಅಮೆರಿಕದ ಕೆಂಟಕಿ ಸೇರಿ ಹಲವೆಡೆ ಸುಂಟರಗಾಳಿ ಆರ್ಭಟ; 50ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆಂದ ಗವರ್ನರ್​
ಅಮೇಜಾನ್ ವೇರ್​ಹೌಸ್ ಮೇಲ್ಛಾವಣಿ ಕುಸಿತ
Follow us on

ಯುಎಸ್​ನ ಆಗ್ನೇಯ ರಾಜ್ಯವಾದ ಕೆಂಟಕಿ ಮತ್ತು ಇತರ ನಗರಗಳಲ್ಲಿ ಶುಕ್ರವಾರ ಸಂಜೆಯಿಂದ ಶುರುವಾದ ಸುಂಟರಗಾಳಿಯಿಂದ  ಇದುವರೆಗೆ 50ಕ್ಕೂ ಹೆಚ್ಚು ಬಲಿಯಾಗಿರಬಹುದು ಎಂದು ಅಲ್ಲಿನ ರಾಜ್ಯಪಾಲರು ಹೇಳಿದ್ದಾರೆ. ಕೆಂಟಕಿ ಸೇರಿ ಯುಎಸ್​ನ ಇನ್ನೂ ಹಲವು ದೊಡ್ಡ ನಗರಗಳಲ್ಲಿ ಈ ಸುಂಟರಗಾಳಿ ತೀವ್ರ ಹಾನಿ ಮಾಡಿದೆ. ಅದರಲ್ಲೂ ಕೆಂಟಕಿ ರಾಜ್ಯದ ಅನೇಕ ಪ್ರದೇಶಗಳು ನಾಶವಾಗಿವೆ ಎಂದೂ ರಾಜ್ಯಪಾಲ ಆ್ಯಂಡಿ ಬೆಶಿಯರ್ ಮಾಹಿತಿ ನೀಡಿದ್ದಾರೆ. 

ಶುಕ್ರವಾರ ರಾತ್ರಿ 12ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಸುಂಟರಗಾಳಿ ಎದ್ದಿದೆ. ಅದರಲ್ಲೂ ಮೊದಲು ಎದ್ದ ಸುಂಟರಗಾಳಿ ಕೆಂಟಕಿಯಾದ್ಯಂತ 200 ಮೈಲುಗಳ ದೂರ ಸಂಚರಿಸಿ ಅವಘಡ ಸೃಷ್ಟಿಸಿದೆ. ಕಂಟಕಿಯ ಇತಿಹಾಸದಲ್ಲೇ ಅತ್ಯಂತ ಭೀಕರ ಸುಂಟರಗಾಳಿ ಇದಾಗಿದ್ದು, 50ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ನನಗೂ ಕೂಡ ಇದರ ಭೀಕರತೆ ನೋಡಿ ಭಯವಾಯಿತು ಎಂದು ರಾಜ್ಯಪಾಲರು ಹೇಳಿಕೊಂಡಿದ್ದಾರೆ. ಮೇಫೀಲ್ಡ್​ ನಗರದಲ್ಲಿ ಒಂದು ಮೇಣದಬತ್ತಿ ಕಾರ್ಖಾನೆಯ ಮೇಲ್ಛಾವಣಿ ಕುಸಿದಿದೆ.  ಈ ವೇಳೆ ಅದರಲ್ಲಿ 110 ಮಂದಿ ಕೆಲಸ ಮಾಡುತ್ತಲೇ ಇದ್ದರು. ಮಧ್ಯರಾತ್ರಿ ಹೊತ್ತಲ್ಲಿ ನಾನು ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದೇನೆ ಎಂದು ಬೆಶಿಯರ್ ಮಾಹಿತಿ ನೀಡಿದ್ದಾರೆ.

ಅಷ್ಟೇ ಅಲ್ಲ, ಯುಎಸ್​ನ ಇಲ್ಲಿನೊಯಿಸ್​ ರಾಜ್ಯದ ಅಮೇಜಾನ್​ ವೇರ್​ಹೌಸ್​​ನ ಮೇಲ್ಛಾವಣಿ ಕೂಡ ಕುಸಿದುಬಿದ್ದಿದೆ. ಅದರಲ್ಲಿ ಕೂಡ 100ಕ್ಕೂ ಹೆಚ್ಚು ಮಂದಿ ಸಿಲುಕಿದ್ದರು. ಶನಿವಾರ ಮುಂಜಾನೆಯವರೆಗೂ ಅವರ ರಕ್ಷಣಾ ಕಾರ್ಯಾಚರಣೆ ನಡೆದಿದೆ. ಅರ್ಕಾನ್ಸಾಸ್‌ ಎಂಬಲ್ಲಿ ಇರುವ ಮೊನೆಟ್ ಮ್ಯಾನರ್ ನರ್ಸಿಂಗ್​ ಹೋಂಗೆ ಸುಂಟರಗಾಳಿ ಅಪ್ಪಳಿಸಿದ ಪರಿಣಾಮ ಒಬ್ಬರು ಮೃತಪಟ್ಟಿದ್ದಾರೆ. ಯುಎಸ್​ ಮಾಧ್ಯಮಗಳಲ್ಲಿ ಈ ಸುಂಟರಗಾಳಿ ಸೃಷ್ಟಿಸಿದ ಅನಾಹುತಗಳ ವಿಡಿಯೋ, ಫೋಟೋಗಳು ವೈರಲ್ ಆಗುತ್ತಿವೆ.

ಇದನ್ನೂ ಓದಿ: Team India: ಟೀಮ್ ಇಂಡಿಯಾದ ಈ ಮೂವರು ಆಟಗಾರರಿಗೆ ಕೊನೆಯ ಅವಕಾಶ