ರಾಷ್ಟ್ರವ್ಯಾಪಿ ಪ್ರವಾಸ, ಒಂದು ಡಜನ್ ಚುನಾವಣಾ ಪ್ರಚಾರ ಮತ್ತು ಮೂರು ದೂರದರ್ಶನ ಚರ್ಚೆಗಳ ನಂತರ ಲಿಜ್ ಟ್ರಸ್ (Liz Truss) ಅವರು ಯುನೈಟೆಡ್ ಕಿಂಗ್ಡಮ್ ನ ಮುಂದಿನ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲು ಸಿದ್ಧರಾಗಿದ್ದಾರೆ. ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ (Boris Johnson) ಅವರು ರಾಣಿ ಎಲಿಜಬೆತ್ II ರವರಿಗೆ ತಮ್ಮ ರಾಜೀನಾಮೆಯನ್ನು ಔಪಚಾರಿಕವಾಗಿ ಪ್ರಸ್ತುತಪಡಿಸುವ ಮೊದಲು, ಪ್ರಧಾನಿ ಚುನಾವಣೆಗಾಗಿ ನಡೆದ ಸುದೀರ್ಘ ಪ್ರಚಾರದ ಫಲಿತಾಂಶವನ್ನು ಸೋಮವಾರ ಪ್ರಕಟಿಸಲಾಗುತ್ತದೆ . ಆಗಸ್ಟ್‌ನ ಆರಂಭದಲ್ಲಿ ಜಾನ್ಸನ್ ನಿರ್ಗಮನವನ್ನು ಘೋಷಿಸಿದ ಒಂದು ತಿಂಗಳ ನಂತರ, ಅಂದಾಜು 200,000 ಟೋರಿ ಸದಸ್ಯರು ಇಮೇಲ್ ಮತ್ತು ಆನ್‌ಲೈನ್ ಮೂಲಕ ಮತ ಚಲಾಯಿಸಲು ಪ್ರಾರಂಭಿಸಿದರು. ಮತದಾನ ಸಂಜೆ 5:00 ಗಂಟೆಗೆ (1600 GMT) ಕೊನೆಗೊಳ್ಳುತ್ತದೆ. ಸದಸ್ಯರ ಮತದಾನದಲ್ಲಿ ಟ್ರಸ್ ಅವರು ರಿಷಿ ಸುನಕ್(Rishi Sunak) ಗಿಂತ ಜಾಸ್ತಿ ಬೆಂಬಲ ಪಡೆದಿದ್ದಾರೆ.
ಉಕ್ರೇನ್‌ನಲ್ಲಿ ಮೇಲೆ ರಷ್ಯಾ ಯುದ್ಧದ ಪರಿಣಾಮವಾಗಿ ಹಣದುಬ್ಬರವು ಎರಡಂಕಿಗಳಿಂದ ಏರಿಕೆಯಾಗುತ್ತಿದೆ ಮತ್ತು ಶಕ್ತಿಯ ವೆಚ್ಚಗಳು ಗಗನಕ್ಕೇರುತ್ತಿವೆ. ಯುಕೆ ಶತಮಾನಗಳಲ್ಲಿ ತನ್ನ ಜೀವನ ವೆಚ್ಚದ ಬಿಕ್ಕಟ್ಟನ್ನು ಅನುಭವಿಸುತ್ತಿದೆ. ಸಮೀಕ್ಷೆಗಳ ಪ್ರಕಾರ, ಲಕ್ಷಾಂತರ ಜನರು ಈ ಚಳಿಗಾಲದಲ್ಲಿ ಆಹಾರಕ್ಕಾಗಿ ಪಾವತಿಸುವ ಮತ್ತು ಬಿಸಿಮಾಡುವ ನಡುವೆ ಆಯ್ಕೆ ಮಾಡಬೇಕಾಗುತ್ತದೆ ಎಂದು ಭಾವಿಸುತ್ತಾರೆ ಏಕೆಂದರೆ ಅವರ ವೆಚ್ಚಗಳು ಅಕ್ಟೋಬರ್‌ನಿಂದ ಪ್ರಾರಂಭವಾಗಿ ಜನವರಿಯಲ್ಲಿ ಶೇ 80 ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.
ಮಾಜಿ ಚಾನ್ಸೆಲರ್ ರಿಷಿ ಸುನಕ್(42) ಮತ್ತು ಲಿಜ್ ಟ್ರಸ್ (47) ಅಂದಾಜು 160,000 ಟೋರಿ ಮತದಾರರ ಮತಗಳನ್ನು ಗೆಲ್ಲಲು ಕಳೆದ ತಿಂಗಳು ಯುಕೆಯಲ್ಲಿ ಜಿದ್ದಾಜಿದ್ದಿನ ಪೈಪೋಟಿ ನಡೆಸಿದ್ದಾರೆ.
ಭಾರತ ಮೂಲದ ಸುನಕ್ ತಮ್ಮ ಪ್ರಚಾರದಲ್ಲಿ ತಕ್ಷಣದ ಆದ್ಯತೆಯಾಗಿ ಗಗನಕ್ಕೇರುತ್ತಿರುವ ಹಣದುಬ್ಬರದ ಮೇಲೆ ಹಿಡಿತ ಸಾಧಿಸುವುದಾಗಿ ಭರವಸೆ ನೀಡಿದ್ದಾರೆ. ಇತ್ತ ವಿದೇಶಾಂಗ ಸಚಿವರಾಗಿದ್ದ ಟ್ರಸ್ ಮೊದಲ ದಿನದಿಂದ ತೆರಿಗೆ ಕಡಿತವನ್ನು ಪ್ರತಿಜ್ಞೆ ಮಾಡಿದ್ದಾರೆ. ಒಟ್ಟಾರೆಯಾಗಿ ಬ್ರಿಟಿಷ್ ಸಾರ್ವಜನಿಕರು ಎದುರಿಸುತ್ತಿರುವ ಜೀವನ ವೆಚ್ಚದ ಬಿಕ್ಕಟ್ಟನ್ನು ನಿಭಾಯಿಸಲು ಅವರು ಹೇಗೆ ಯೋಜಿಸಿದ್ದಾರೆ ಎಂಬುದು ಚರ್ಚೆಗಳಲ್ಲಿ ಪ್ರಾಬಲ್ಯ ಸಾಧಿಸಿದೆ. ಇಬ್ಬರೂ ಬುಧವಾರ ರಾತ್ರಿ ಲಂಡನ್‌ನಲ್ಲಿ ತಮ್ಮ ಅಂತಿಮ ಚರ್ಚೆಯಲ್ಲಿ ತಮ್ಮ ಅನೇಕ ಭರವಸೆಗಳನ್ನು ಪುನರುಚ್ಚರಿಸಿದ್ದಾರೆ.