ಲೆಬನಾನ್‌ನಲ್ಲಿ ಪೇಜರ್‌ಗಳ ಸ್ಫೋಟಕ್ಕೆ ಸಂಬಂಧಿಸಿದಂತೆ ಕೇರಳದ ವ್ಯಕ್ತಿಯ ಹೆಸರು ಕೇಳಿ ಬರುತ್ತಿದೆ. ಲೆಬನಾನ್‌ನಲ್ಲಿ 9 ಜನರ ಸಾವಿಗೆ ಕಾರಣವಾಗಿತ್ತು ಈ ಬ್ಲಾಸ್ಟ್. ಇದೀಗ ಈ ಸ್ಟೋಟದಲ್ಲಿ ಕೇರಳ ವ್ಯಕ್ತಿಯ ಕೈವಾಡ ಇದೆ ಎಂದು ಹೇಳಲಾಗಿದೆ. ಹೆಜ್ಬೊಲ್ಲಾ ಗುರಿಯಾಗಿಸಿಕೊಂಡು ಪೇಜರ್ ಸ್ಫೋಟ ಮಾಡಲಾಗಿದೆ ಎಂದು ತನಿಖೆಯಲ್ಲಿ ತಿಳಿದು ಬಂದಿದ್ದು, ತನಿಖೆ ವರದಿ ಪ್ರಕಾರ, ನಾರ್ವೆಯಲ್ಲಿರುವ ಕೇರಳ ಮೂಲದ ವ್ಯಕ್ತಿ ರಿನ್ಸನ್ ಜೋಸ್ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ. ಈ ವ್ಯಕ್ತಿ ನಾರ್ವೇಜಿಯನ್ಕ್ಕೆ ಡಿಜಿಟಲ್ ಕಂಪನಿಯ ಬಗ್ಗೆ ಕಲಿಯಲು ಬಂದಿದ್ದ ಎಂದು ಹೇಳಲಾಗಿದೆ. ರಿನ್ಸನ್ ಜೋಸ್ ಕೇರಳದ ವಯನಾಡಿನವರು, ಇವರು ಉಗ್ರಗಾಮಿ ಗುಂಪಿಗೆ ಪೇಜರ್‌ಗಳ ಪೂರೈಕೆಯಲ್ಲಿ ತೊಡಗಿಸಿಕೊಂಡಿದ್ದರೆ ಎಂದು ವರದಿ ಹೇಳಿದೆ.
ಲೆಬನಾನ್ನ ರಾಜ್ಯ ಭದ್ರತಾ ಸಂಸ್ಥೆ DANS ಮಾಡಿದ ತನಿಖೆ ಪ್ರಕಾರ ಸಂಹವನಕ್ಕಾಗಿ ಬಳಸುವ ಪೇಜರ್ಗಳಲ್ಲಿ ಮೂರು ಗ್ರಾಂ ಸ್ಫೋಟಕ ತುಂಬಲಾಗುತ್ತದೆ. ಪ್ರಾಥಮಿಕ ತನಿಖೆಗಳ ಪ್ರಕಾರ ಈ ಪೇಜರ್ ಸ್ಫೋಟಕಗಳನ್ನು ತೈವಾನ್ ಮೂಲದ ಗೋಲ್ಡ್ ಅಪೊಲೊ ತಯಾರಿಸಿದೆ ಎಂದು ಹೇಳಲಾಗಿತ್ತು. ಆದರೆ ಈ ಕಂಪನಿ ನೀಡಿದ ಹೇಳಿಕೆ ಪ್ರಕಾರ, ಪೇಜರ್ ಮಾಡೆಲ್, AR-924 ಅನ್ನು ಹಂಗೇರಿಯ ಬುಡಾಪೆಸ್ಟ್ ಮೂಲದ BAC ಕನ್ಸಲ್ಟಿಂಗ್ KFT ಕಂಪನಿ ಮಾಡಿದೆ. ಇದಕ್ಕೆ ಅದರ ಟ್ರೇಡ್‌ಮಾರ್ಕ್ ಸಾಕ್ಷಿ ಎಂದು ಹೇಳಿದೆ.
ಪೇಜರ್‌ಗಳು ಸ್ಫೋಟಗೊಂಡ ಎರಡು ದಿನಗಳ ನಂತರ, ಬಲ್ಗೇರಿಯನ್ ರಾಜ್ಯ ಭದ್ರತಾ ಸಂಸ್ಥೆ DANS, ದೇಶದ ಆಂತರಿಕ ಸಚಿವಾಲಯದೊಂದಿಗೆ ಸಮಾಲೋಚನೆ ನಡೆಸಿದೆ. ಈಗಾಗಲೇ ಪ್ರಾಥಮಿಕ ತನಿಖೆಯಲ್ಲಿ ಕೇಳಿ ಬಂದಿರುವ ಕಂಪನಿಗಳನ್ನು ತನಿಖೆ ನಡೆಸಲಾಗುತ್ತದೆ. ತನಿಖೆಯ ಪ್ರಕಾರ ನಾರ್ಟಾ ಗ್ಲೋಬಲ್ ಲಿಮಿಟೆಡ್ ಈ ಸ್ಫೋಟಕಗಳನ್ನು ನೀಡಿದೆ ಎಂದು ಹೇಳಲಾಗಿದೆ. ಈ ಕಂಪನಿಯನ್ನು 2022ರಲ್ಲಿ ಸೋಫಿಯಾದಲ್ಲಿ ಸ್ಥಾಪಿಸಲಾಗಿದೆ. ಈ ಕಂಪನಿ ನಾರ್ವೇಜಿಯನ್ನಲ್ಲಿರುವ ರಿನ್ಸನ್ ಜೋಸ್ ಅವರ ಒಡೆತನದಲ್ಲಿದೆ ಎಂದು ಹೇಳಲಾಗಿದೆ.
ಇನ್ನು ಸ್ಫೋಟಗೊಂಡ ಪೇಜರ್‌ಗಳನ್ನು ಬಲ್ಗೇರಿಯಾದಲ್ಲಿ ಯಾವುದೇ ವಸ್ತುಗಳನ್ನು ತಯಾರಿಸಲು, ಆಮದು ಮಾಡಿಕೊಳ್ಳಲು, ರಫ್ತು ಮಾಡಲು ಬಳಸಿಲ್ಲ ಎಂದು DANS ಹೇಳಿದೆ. ಇದನ್ನು ಒಟ್ಟಿನಲ್ಲಿ ಭಯೋತ್ಪಾದನಾ ಕೃತ್ಯಕ್ಕಾಗಿ ಬಳಸಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಲೆಬನಾನ್‌ನಲ್ಲಿ ಪೇಜರ್ಸ್ ಸ್ಪೋಟದಲ್ಲಿ 9 ಸಾವು; ಸಂವಹನ ಸಾಧನಗಳಾದ ಪೇಜರ್ ಬಗ್ಗೆ ನಿಮಗೆಷ್ಟು ಗೊತ್ತು?
ಸುದ್ದಿ ಸಂಸ್ಥೆ IANS ವರದಿಯ ಪ್ರಕಾರ, ಜೋಸ್ ಕೆಲವು ವರ್ಷಗಳ ಹಿಂದೆ ಡಿಜಿಟಲ್ನ ಬಗ್ಗೆ ಉನ್ನತ ವ್ಯಾಸಂಗ ಮಾಡಲು ನಾರ್ವೆಗೆ ಹೋಗಿದ್ದರು. ನಾರ್ವೆಯ ಓಸ್ಲೋಗೆ ಬರುವ ಮೊದಲು ಅವರು ಲಂಡನ್‌ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದೆ. ನಾರ್ವೇಜಿಯನ್ ಪ್ರೆಸ್ ಗ್ರೂಪ್ ಡಿಎನ್ ಮೀಡಿಯಾದಲ್ಲಿ ಕೆಲಸ ಮಾಡಲು ಅವರು ಡಿಜಿಟಲ್ ಕಂಪನಿಗಳಲ್ಲಿ ಸುಮಾರು ಐದು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ ಎಂದು ಹೇಳಲಾಗಿದೆ. ಇನ್ನು ಜೋಸ್ ತನ್ನ ಪತ್ನಿಯೊಂದಿಗೆ ಓಸ್ಲೋದಲ್ಲಿ ನೆಲೆಸಿದ್ದಾರೆ. ಅವರ ಇಬ್ಬರು ಸಹೋದರರು ಲಂಡನ್ನಲ್ಲಿದ್ದಾರೆ ಎಂದು ಜೋಸ್ ಸಂಬಂಧಿಕರೊಬ್ಬರು ಐಎಎನ್‌ಎಸ್‌ಗೆ ತಿಳಿಸಿದ್ದಾರೆ. ನಾವು ಜೋಸ್ ಜತೆ ಪ್ರತಿದಿನ ಫೋನ್‌ನಲ್ಲಿ ಮಾತನಾಡುತ್ತೇವೆ, ಆದರೆ, ಕಳೆದ ಮೂರು ದಿನಗಳಿಂದ ಜೋಸ್ ಅವರು ನಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಹೇಳಿದ್ದಾರೆ. ಜೋಸ್ ಯಾವುದೇ ತಪ್ಪು ಮಾಡಿಲ್ಲ, ಅವರು ನೇರವಾಗಿರುವ ವ್ಯಕ್ತಿ. ನಾವು ಅವರನ್ನು ಸಂಪೂರ್ಣವಾಗಿ ನಂಬುತ್ತೇವೆ. ಅವರು ಈ ಸ್ಫೋಟಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾರೆ.
ಲೆಬನಾನ್‌ನಲ್ಲಿ ನಡೆದ ಭೀಕರ ಪೇಜರ್ ಸ್ಫೋಟಗಳಲ್ಲಿ ಲೆಬನಾನ್ ಸಶಸ್ತ್ರ ಉಗ್ರಗಾಮಿ ಸಂಘಟನೆ ಹಿಜ್ಬುಲ್ಲಾ ಸೇರಿದಂತೆ 9 ಮಂದಿ ಸಾವನ್ನಪ್ಪಿ ಸುಮಾರು 3,000 ಮಂದಿ ಗಾಯಗೊಂಡಿದ್ದಾರೆ. ಇರಾನ್ ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದು, ಇಸ್ರೇಲ್ ಲೆಬನಾನ್‌ನಲ್ಲಿ ಸಾಮೂಹಿಕ ಹತ್ಯೆ ಮಾಡಿದೆ ಎಂದು ಆರೋಪಿಸಿದೆ.
ವಿದೇಶಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ