Pahalgam Attack: ಭಾರತದೊಂದಿಗೆ ಯುದ್ಧ ಮಾಡದಿರುವುದೇ ಉತ್ತಮ, ಪಾಕ್ ಪ್ರಧಾನಿಗೆ ನವಾಜ್ ಷರೀಫ್ ಸಲಹೆ

ಭಾರತದೊಂದಿಗೆ ಯುದ್ಧ ಮಾಡದೇ ಶಾಂತಿಯಿಂದ ಪರಿಸ್ಥಿತಿಯನ್ನು ನಿಭಾಯಿಸುವುದು ಹೇಗೆ ಎಂಬುದರ ಬಗ್ಗೆ ಗಮನಹರಿಸಬೇಕು ಎಂದು ಪಾಕ್ ಪ್ರಧಾನಿ ಶಹಬಾಜ್ ಷರೀಫ್​ಗೆ ಮಾಜಿ ಪ್ರಧಾನಿ ನವಾಜ್ ಷರೀಫ್ ಸಲಹೆ ನೀಡಿದ್ದಾರೆ. ಈ ಕ್ರೂರ ಹತ್ಯಾಕಾಂಡದ ಬಗ್ಗೆ 130ಕ್ಕೂ ಅಧಿಕ ದೇಶಗಳು ಆಕ್ರೋಶ ವ್ಯಕ್ತಪಡಿಸಿವೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತವನ್ನು ಬೆಂಬಲಿಸುವ ಬಗ್ಗೆಯೂ ಮಾತನಾಡಿವೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಗಮನಾರ್ಹವಾಗಿ ಹೆಚ್ಚಾಗಿದೆ. ಪಾಕಿಸ್ತಾನಿ ಸೇನೆಯು ಪಿಒಕೆಯಲ್ಲಿ ತನ್ನ ಚಲನವಲನವನ್ನು ಹೆಚ್ಚಿಸಿದೆ.

Pahalgam Attack: ಭಾರತದೊಂದಿಗೆ ಯುದ್ಧ ಮಾಡದಿರುವುದೇ ಉತ್ತಮ, ಪಾಕ್ ಪ್ರಧಾನಿಗೆ ನವಾಜ್ ಷರೀಫ್ ಸಲಹೆ
ಭಾರತದೊಂದಿಗೆ ಯುದ್ಧ ಮಾಡದಿರುವುದೇ ಉತ್ತಮ ಎಂದು ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್​ಗೆ ಸಹೋದರ ನವಾಜ್ ಷರೀಫ್ ಸಲಹೆ ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಭಾರತದೊಂದಿಗೆ ಯುದ್ಧ ಮಾಡಬೇಡಿ ಮತ್ತು ಶಾಂತವಾಗಿರಿ ಎಂದು ನವಾಜ್ ಷರೀಫ್ ಪ್ರಧಾನಿ ಶಹಬಾಜ್ ಅವರಿಗೆ ಸಲಹೆ ನೀಡಿದ್ದಾರೆ ಎನ್ನಲಾಗುತ್ತಿದೆ.
Image Credit source: daw

Updated on: Apr 29, 2025 | 7:56 AM

ಇಸ್ಲಾಮಾಬಾದ್, ಏಪ್ರಿಲ್ 29: ಭಾರತದೊಂದಿಗೆ ಯುದ್ಧ ಮಾಡದಿರುವುದೇ ಉತ್ತಮ ಎಂದು ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್​ಗೆ( Shahbaz Sharif )ಸಹೋದರ ನವಾಜ್ ಷರೀಫ್ ಸಲಹೆ ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನ ಪರಿಸ್ಥಿತಿ ಇದೆ. ಪ್ರಧಾನಿ ನರೇಂದ್ರ ಮೋದಿ ಈ ದಾಳಿಗೆ ಕಾರಣರಾದವರ ಬಗ್ಗೆ ಸೇಡು ತೀರಿಸಿಕೊಳ್ಳುವ ಬಗ್ಗೆ ಮಾತನಾಡಿದ್ದಾರೆ. ಹಾಗಾಗಿ, ಪಾಕಿಸ್ತಾನದಲ್ಲೂ ಸಾಕಷ್ಟು ಚಟುವಟಿಕೆಗಳು ಗರಿಗೆದರಿವೆ.

ಈ ಕ್ರೂರ ಹತ್ಯಾಕಾಂಡದ ಬಗ್ಗೆ 130ಕ್ಕೂ ಅಧಿಕ ದೇಶಗಳು ಆಕ್ರೋಶ ವ್ಯಕ್ತಪಡಿಸಿವೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತವನ್ನು ಬೆಂಬಲಿಸುವ ಬಗ್ಗೆಯೂ ಮಾತನಾಡಿವೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಗಮನಾರ್ಹವಾಗಿ ಹೆಚ್ಚಾಗಿದೆ. ಪಾಕಿಸ್ತಾನಿ ಸೇನೆಯು ಪಿಒಕೆಯಲ್ಲಿ ತನ್ನ ಚಲನವಲನವನ್ನು ಹೆಚ್ಚಿಸಿದೆ.

ಎಲ್‌ಒಸಿ ಬಳಿ ಹೆಚ್ಚಿನ ಸಂಖ್ಯೆಯ ಸೈನಿಕರನ್ನು ಜಮಾಯಿಸಲಾಗುತ್ತಿದೆ. ಇಷ್ಟೆಲ್ಲಾ ಗದ್ದಲದ ನಡುವೆಯೂ, ಪಾಕಿಸ್ತಾನಿ ಪ್ರಧಾನಿ ಶಹಬಾಜ್ ಷರೀಫ್​ಗೆ ಸಹೋದರ್ ನವಾಜ್ ಷರೀಫ್ ಸಲಹೆ ನೀಡಿದ್ದಾರೆ. ಭಾರತದೊಂದಿಗೆ ಯುದ್ಧ ಮಾಡಬೇಡಿ ಮತ್ತು ಶಾಂತವಾಗಿರಿ ಎಂದು ನವಾಜ್ ಷರೀಫ್ ಪ್ರಧಾನಿ ಶಹಬಾಜ್ ಅವರಿಗೆ ಸಲಹೆ ನೀಡಿದ್ದಾರೆ ಎನ್ನಲಾಗುತ್ತಿದೆ.

ಮತ್ತಷ್ಟು ಓದಿ: ಪಹಲ್ಗಾಮ್ ದಾಳಿ ಕುರಿತು ಅಪಹಾಸ್ಯ, ಭಾರತದಲ್ಲಿ ನೂರಾರು ಪಾಕಿಸ್ತಾನಿ ಯೂಟ್ಯೂಬ್​ ಚಾನೆಲ್​ಗಳಿಗೆ ನಿಷೇಧ

ರಾಷ್ಟ್ರೀಯ ಭದ್ರತಾ ಸಮಿತಿಯ ನಿರ್ಧಾರಗಳ ಬಗ್ಗೆ ಪ್ರಧಾನಿ ಶಹಬಾಜ್ ಷರೀಫ್ ಅವರು ನವಾಜ್ ಷರೀಫ್ ಅವರಿಗೆ ತಿಳಿಸಿದ್ದರು. ಭಾರತವು ಸಿಂಧೂ ನದಿ ನೀರು ಒಪ್ಪಂದವನ್ನು ಅಮಾನತುಗೊಳಿಸಿದ ನಂತರ ಈ ಸಭೆ ನಡೆಯಿತು. ಪಹಲ್ಗಾಮ್ ದಾಳಿಯ ಬಗ್ಗೆ ಶಹಬಾಜ್ ನವಾಜ್ ಅವರಿಗೆ ವಿವರವಾದ ಮಾಹಿತಿಯನ್ನು ನೀಡಿದರು.ಇದಾದ ನಂತರ ನವಾಜ್ ಷರೀಫ್ ಭಾರತದೊಂದಿಗೆ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಸಲಹೆ ನೀಡಿದರು.

ಮೂರು ಬಾರಿ ಪಾಕಿಸ್ತಾನದ ಪ್ರಧಾನಿಯಾಗಿದ್ದ ನವಾಜ್ ಷರೀಫ್, ಪ್ರಸ್ತುತ ಪ್ರಧಾನಿ ಶಹಬಾಜ್ ಷರೀಫ್ ಅವರ ಹಿರಿಯ ಸಹೋದರ. ಪಾಕಿಸ್ತಾನದ ಅತ್ಯಂತ ಹಿರಿಯ ನಾಯಕರಲ್ಲಿ ಒಬ್ಬರಾದ ನವಾಜ್, ತಮ್ಮ ಸಹೋದರ ಮತ್ತು ಪ್ರಧಾನಿ ಶಹಬಾಜ್ ಅವರಿಗೆ ಭಾರತದ ಜೊತೆ ಯುದ್ಧಕ್ಕೆ ಇಳಿಯಬೇಡಿ, ರಾಜತಾಂತ್ರಿಕ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಉದ್ವಿಗ್ನತೆಯನ್ನು ಕಡಿಮೆ ಮಾಡಿಕೊಳ್ಳುವಂತೆ ಸ್ಪಷ್ಟವಾಗಿ ಹೇಳಿದ್ದಾರೆ.

ಜಮ್ಮು ಕಾಶ್ಮೀರದ ಪಹಲ್ಗಾಮ್​ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 26 ಮಂದಿ ಪ್ರಾಣ ಕಳೆದುಕೊಂಡಿದ್ದರು. ಉಗ್ರರು ಹಿಂದೂಗಳೆಂದು ಖಚಿತಪಡಿಸಿಕೊಂಡ ಬಳಿಕವೇ ಅವರ ಮೇಲೆ ಗುಂಡು ಹಾರಿಸಿದ್ದರು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ