ಮಹಿಳಾ ಸಿಬ್ಬಂದಿ ಕೈಯಲ್ಲಿದ್ದ ಛತ್ರಿ ತೆಗೆದುಕೊಂಡು ನಡೆದ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್; ನೆಟ್ಟಿಗರಿಂದ ಟ್ರೋಲ್

|

Updated on: Jun 23, 2023 | 8:14 PM

ಪ್ಯಾರಿಸ್ ಶೃಂಗಸಭೆಗಾಗಿ ಬರುತ್ತಿರುವ ಪಾಕ್ ಪ್ರಧಾನಿ, ಅವರನ್ನು ಸ್ವಾಗತಿಸಿ ಅವರಿಗಾಗಿ ಛತ್ರಿ ಹಿಡಿದ ಮಹಿಳಾ ಸಿಬ್ಬಂದಿ ಕೈಯಿಂದ ಛತ್ರಿ ತೆಗೆದುಕೊಂಡು ಒಬ್ಬರೇ ನಡೆದುಕೊಂಡು ಬರುತ್ತಿದ್ದಾರೆ. ಪಾಪ, ಮಹಿಳಾ ಸಿಬ್ಬಂದಿ ಮಳೆ ನೆನೆಯುತ್ತಾ ಅವರ ಹಿಂದೆಯೇ ಬಿರುಸು ಹೆಜ್ಜೆ ಹಾಕಿ ನಡೆಯುತ್ತಿರುವುದು ವಿಡಿಯೊದಲ್ಲಿದೆ.

ಮಹಿಳಾ ಸಿಬ್ಬಂದಿ ಕೈಯಲ್ಲಿದ್ದ ಛತ್ರಿ ತೆಗೆದುಕೊಂಡು ನಡೆದ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್; ನೆಟ್ಟಿಗರಿಂದ ಟ್ರೋಲ್
ಶೆಹಬಾಜ್ ಷರೀಫ್
Follow us on

ಗ್ಲೋಬಲ್ ಫೈನಾನ್ಸಿಂಗ್ ಪ್ಯಾಕ್ಟ್‌ನ ಎರಡು ದಿನಗಳ ಶೃಂಗಸಭೆಗಾಗಿ ಪಾಕಿಸ್ತಾನದ ಪ್ರಧಾನಿ (Pakistan PM) ಶೆಹಬಾಜ್ ಷರೀಫ್ (Shehbaz Sharif) ಪ್ಯಾರಿಸ್‌ನಲ್ಲಿದ್ದಾರೆ. ಮುಂದಿನ ವಾರದಲ್ಲಿ ಕ್ರೆಡಿಟ್ ಲೈನ್ ಅವಧಿ ಮುಗಿಯುವ ಮೊದಲು ತಡೆಹಿಡಿಯಲಾದ ಹಣವನ್ನು ಪಡೆಯಲಿರುವ ಕೊನೆಯ ಪ್ರಯತ್ನವನ್ನು ಷರೀಫ್ ಇಲ್ಲಿ ಮಾಡಲಿದ್ದಾರೆ. ಆದರೆ ಸೌದಿ ದೊರೆ ಸಲ್ಮಾನ್ ಬಿನ್ ಅಬ್ದುಲಜೀಜ್, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಮತ್ತು ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿಯಂತಹ ಜಾಗತಿಕ ನಾಯಕರೊಂದಿಗಿನ ಅವರ ಸಭೆಗಳಿಗಿಂತ, ಪಲೈಸ್ ಬ್ರಾಂಗ್ನಿಯಾರ್ಟ್‌ಗೆ ಅವರು ಆಗಮಿಸಿದ ವಿಡಿಯೊವೊಂದು ಈಗ ಟ್ರೆಂಡ್ ಆಗಿದೆ.

ಪ್ಯಾರಿಸ್ ಶೃಂಗಸಭೆಗಾಗಿ ಬರುತ್ತಿರುವ ಪಾಕ್ ಪ್ರಧಾನಿ, ಅವರನ್ನು ಸ್ವಾಗತಿಸಿ ಅವರಿಗಾಗಿ ಛತ್ರಿ ಹಿಡಿದ ಮಹಿಳಾ ಸಿಬ್ಬಂದಿ ಕೈಯಿಂದ ಛತ್ರಿ ತೆಗೆದುಕೊಂಡು ಒಬ್ಬರೇ ನಡೆದುಕೊಂಡು ಬರುತ್ತಿದ್ದಾರೆ. ಪಾಪ, ಮಹಿಳಾ ಸಿಬ್ಬಂದಿ ಮಳೆ ನೆನೆಯುತ್ತಾ ಅವರ ಹಿಂದೆಯೇ ಬಿರುಸು ಹೆಜ್ಜೆ ಹಾಕಿ ನಡೆಯುತ್ತಿರುವುದು ವಿಡಿಯೊದಲ್ಲಿದೆ.

ಆದಾಗ್ಯೂ, ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯಾಗಿದ್ದು, ಪಾಕ್ ಪ್ರಧಾನಿಯ ಈ ಅಸಭ್ಯ ವರ್ತನೆಯಿಂದ ನೆಟ್ಟಿಗರು ಕೋಪಗೊಂಡಿದ್ದಾರೆ.

ಇದನ್ನೂ ಓದಿ: ರಾಷ್ಟ್ರಕ್ಕಾಗಿ ಮಾತನಾಡುವಾಗ ಎಲ್ಲರೂ ಒಂದಾಗಬೇಕು: ಅಮೆರಿಕದಲ್ಲಿ ರಾಹುಲ್ ಗಾಂಧಿಗೆ ಮೋದಿ ಟಾಂಗ್?

 ಕೆಲವು ಟ್ವಿಟರ್ ಪ್ರತಿಕ್ರಿಯೆಗಳು ಇಲ್ಲಿವೆ

ಮಹಿಳೆಯನ್ನು ಮಳೆಯಲ್ಲೇ ಬಿಟ್ಟು ಬಂದಿದ್ದೇಕೆ? ಶೆಹಬಾಜ್ ಷರೀಫ್ ಮುಜುಗರವನ್ನುಂಟು ಮಾಡುತ್ತಿದ್ದಾರೆ. ಯಾವ ಕಾರ್ಟೂನ್ ನ್ನು ಪ್ರಧಾನಿ ಮಾಡಿದ್ದೀರಪ್ಪಾ ಎಂದು ಸೈತ್ ಅಬ್ದುಲ್ಲಾ ಎಂಬ ಟ್ವೀಟಿಗರು ಟ್ವೀಟ್ ಮಾಡಿದ್ದಾರೆ.

ಮತ್ತೊಬ್ಬ ಟ್ವೀಟಿಗರು ಮಿಸ್ಟರ್ ಬೀನ್  ಪಾಕಿಸ್ತಾನಿ ವರ್ಷನ್ ಎಂದು ಕಾಲೆಳೆದಿದ್ದಾರೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ