PM Narendra Modi: ಸಿಇಒಗಳ ಜತೆ ಪ್ರಧಾನಿ ಮೋದಿ ಸಂವಾದ: ಭಾರತವನ್ನ ನೆನೆದ ಕಮಲಾ ಹ್ಯಾರಿಸ್
ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕಾ ಪ್ರವಾಸದಲ್ಲಿದ್ದಾರೆ. ಮೂರನೆಯ ದಿನವಾದ ಇಂದು (ಜೂ.23) ವೈಟ್ಹೌಸ್ನಲ್ಲಿ ಸಿಇಒಗಳ ಜತೆ ಪ್ರಧಾನಿ ಮೋದಿ ಸಂವಾದ ನಡೆಸಿದರು.
ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಅಮೆರಿಕಾ (America) ಪ್ರವಾಸದಲ್ಲಿದ್ದಾರೆ. ಮೂರನೆಯ ದಿನವಾದ ಇಂದು (ಜೂ.23) ವ್ಯಾಪಾರ, ತಂತ್ರಜ್ಞಾನ, ಫ್ಯಾಷನ್ ಮತ್ತು ಮನರಂಜನೆಯ ಪ್ರಮುಖ ಭಾರತೀಯ ಮತ್ತು ಅಮೆರಿಕನ್ ವ್ಯಕ್ತಿಗಳು ಪ್ರಧಾನಿ ಮೋದಿಯವರೊಂದಿಗೆ ಗೌರವಾರ್ಥ ವೈಟ್ ಹೌಸ್ (White house) ಔತಣ ಕೂಟದಲ್ಲಿ ಭಾಗವಹಿಸಿದ್ದರು. ಇದಾದ ಬಳಿಕ ವೈಟ್ಹೌಸ್ನಲ್ಲಿ ಸಿಇಒಗಳ ಜತೆ ಪ್ರಧಾನಿ ಮೋದಿ ಸಂವಾದ ನಡೆಸಿದರು. ಈ ಸಂವಾದದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಪ್ರಧಾನಿ ನರೇಂದ್ರ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ, ಗೂಗಲ್ನ ಸಿಇಒ ಸುಂದರ್ ಪಿಚೈ, ಫೇಸ್ಬುಕ್ ಸಿಇಒ ಮಾರ್ಕ್ ಜುಕರ್ಬರ್ಗ್, ಲಿಸಾ ಸು, ಟಿಮ್ ಕುಕ್, ಮುಕೇಶ್ ಅಂಬಾನಿ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದಾರೆ.
#WATCH | Washington, DC | PM Narendra Modi met top CEOs and Chairmen from the US and India at the White House earlier today.
Microsoft CEO Satya Nadella, Google CEO Sundar Pichai, NASA astronaut Sunita Williams, Mahindra Group Chairman Anand Mahindra, Reliance Industries… pic.twitter.com/QXC9Ji68nk
— ANI (@ANI) June 23, 2023
ಈ ವೇಳೆ ಮಾತನಾಡಿದ ಅವರು ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರಿಗೆ ಅಭಿನಂದನೆ ಸಲ್ಲಿಸುವೆ. ಕಮಲಾ ಹ್ಯಾರಿಸ್ ಪೂರ್ವಜರು ಭಾರತದಿಂದ ಬಂದವರು ಎಂದರು.
ನನ್ನ ಜೀವನದಲ್ಲಿ ಭಾರತ ಪ್ರಮುಖಪಾತ್ರ ವಹಿಸುತ್ತಿದೆ. ಪ್ರಧಾನಿ ಮೋದಿ ಜಾಗತಿಕ ನಾಯಕನಾಗಿ ಮುನ್ನಡೆಸುತ್ತಿದ್ದಾರೆ ಎಂದು ವೈಟ್ಹೌಸ್ನಲ್ಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಭಾರತದ ಮೂಲವನ್ನು ಮೆಲುಕು ಹಾಕಿದರು.