ಪಾಕಿಸ್ತಾನದಲ್ಲಿ ಕೈಕೊಟ್ಟ ವಿದ್ಯುತ್ : ಟ್ವಿಟರ್​ನಲ್ಲೂ ಟ್ರೆಂಡ್ !

ಪಾಕಿಸ್ತಾನದಲ್ಲಿ ನಿನ್ನೆ ರಾತ್ರಿಯಿಡೀ ವಿದ್ಯುತ್ ಕೈಕೊಟ್ಟಿತ್ತು. ಈ ಘಟನೆ ಟ್ವಿಟರ್​ನಲ್ಲೂ ಟ್ರೆಂಡ್ ಆಗಿದ್ದು, ಪಾಕಿಸ್ತಾನ ಸರ್ಕಾರ ವ್ಯಂಗ್ಯಕ್ಕೆ ಗುರಿಯಾಗಿದೆ.

ಪಾಕಿಸ್ತಾನದಲ್ಲಿ ಕೈಕೊಟ್ಟ ವಿದ್ಯುತ್ : ಟ್ವಿಟರ್​ನಲ್ಲೂ ಟ್ರೆಂಡ್ !
ಪಾಕ್ ಪ್ರಧಾನಿ ಇಮ್ರಾನ್ ಖಾನ್
Edited By:

Updated on: Jan 10, 2021 | 4:09 PM

ಇಸ್ಲಾಮಾಬಾದ್: ಪಾಕಿಸ್ತಾನಕ್ಕೆ ಪಾಕಿಸ್ತಾನವೇ ನಿನ್ನೆ ರಾತ್ರಿ ಕತ್ತಲಲ್ಲಿ ಕುಳಿತಿತ್ತು. ರಾಜಧಾನಿ ಇಸ್ಲಾಮಾಬಾದ್​ ಸೇರಿ ಪಾಕ್​ನ ಪ್ರಮುಖ ನಗರಗಳಲ್ಲಿ ನಿನ್ನೆ ರಾತ್ರಿ ವಿದ್ಯುತ್ ಕೈಕೊಟ್ಟಿತ್ತು. ವಿದ್ಯುತ್ ಪೂರೈಕೆ ವ್ಯವಸ್ಥೆಯಲ್ಲಿನ ದೋಷದಿಂದ ಕರಾಚಿ, ಇಸ್ಲಾಮಾಬಾದ್, ರಾವಲ್ಪಿಂಡಿ, ಲಾಹೋರ್, ಮುಲ್ತಾನ್ ನಗರಗಳಲ್ಲಿ ವಿದ್ಯುತ್ ಇರಲಿಲ್ಲ. ಆದರೆ, ಕೆಲ ಘಂಟೆಗಳ ನಂತರ ವಿದ್ಯುತ್ ವ್ಯವಸ್ಥೆಯಲ್ಲಿನ ದೋಷವನ್ನು ಸರಿಪಡಿಸಲಾಗಿದೆ. ಪಾಕ್​ನಲ್ಲಿನ ವಿದ್ಯುತ್ ದೋಷ ಟ್ವಿಟರ್​ನಲ್ಲೂ ಟ್ರೆಂಡ್ ಆಗಿದೆ. ಈ ವಿಷಯದಲ್ಲಾದರೂ ಪಾಕಿಸ್ತಾನದ ಒಗ್ಗಟ್ಟು ತೋರಿಸಿದೆ ಎಂದು ಮೀಮ್​ಗಳು ಹರಿದಾಡುತ್ತಿವೆ.

ರಾಷ್ಟ್ರೀಯ ಪವರ್ ಗ್ರಿಡ್ ನಲ್ಲಿ ತಾಂತ್ರಿಕ ದೋಷ ಕಂಡು ಬಂದಿತ್ತು. ಹಾಗಾಗಿ, ಪವರ್ ಟ್ರಿಪ್ (Power Trip) ಆಗಿತ್ತು. ತಾಂತ್ರಿಕ ದೋಷ ನಿವಾರಣೆಗೆ ಪಾಕಿಸ್ತಾನದ ರಾಷ್ಟ್ರೀಯ ಪವರ್ ಗ್ರಿಡ್ ಮುಂದಾಗಿದ್ದು, ಶೀಘ್ರದಲ್ಲೇ ವಿದ್ಯುತ್ ಸೇವೆ ದೊರೆಯಲಿದೆ ಎಂದು ಸಚಿವ ಒಮರ್ ಅಯೂಬ್ ಖಾನ್ ತಕ್ಷಣ ಭರವಸೆ ನೀಡಿದ್ದರು.