Pakistan Accident: ಪಾಕಿಸ್ತಾನದಲ್ಲಿ ಭೀಕರ ರಸ್ತೆ ಅಪಘಾತ, 30 ಮಂದಿ ಸಾವು, 15 ಜನರಿಗೆ ಗಂಭೀರ ಗಾಯ

|

Updated on: Feb 08, 2023 | 10:51 AM

ಪಾಕಿಸ್ತಾನದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ, ಬಸ್ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಪರಿಣಾಮ 30 ಮಂದಿ ಮೃತಪಟ್ಟಿದ್ದು, 15 ಜನರಿಗೆ ಗಂಭೀರ ಗಾಯಗಳಾಗಿವೆ.

Pakistan Accident: ಪಾಕಿಸ್ತಾನದಲ್ಲಿ ಭೀಕರ ರಸ್ತೆ ಅಪಘಾತ, 30 ಮಂದಿ ಸಾವು, 15 ಜನರಿಗೆ ಗಂಭೀರ ಗಾಯ
ಅಪಘಾತ
Follow us on

ಪಾಕಿಸ್ತಾನದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ, ಬಸ್ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಪರಿಣಾಮ 30 ಮಂದಿ ಮೃತಪಟ್ಟಿದ್ದು, 15 ಜನರಿಗೆ ಗಂಭೀರ ಗಾಯಗಳಾಗಿವೆ. ಖೈಬರ್ ಪಖ್ತುಂಖ್ವಾದ ಕೊಹಿಸ್ತಾನ್ ಜಿಲ್ಲೆಯ ಕಾರಕೋರಂ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಗಿಲ್ಗಿಟ್‌ನಿಂದ ರಾವಲ್ಪಿಂಡಿಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕ ಬಸ್ ಪ್ರಾಂತ್ಯದ ಶಿತಿಯಾಲ್ ಪ್ರದೇಶದಲ್ಲಿ ಎದುರು ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ.

ಮಾಹಿತಿ ಪಡೆದ ಪೊಲೀಸರು ಮತ್ತು ರಕ್ಷಣಾ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಗಾಯಾಳುಗಳು ಮತ್ತು ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಕತ್ತಲೆಯಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ತೊಂದರೆಯಾಗುತ್ತಿದೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ. ಪಾಕಿಸ್ತಾನದ ಅಧ್ಯಕ್ಷ ಡಾ. ಆರಿಫ್ ಅಲ್ವಿ, ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ್ ಮುಖ್ಯಮಂತ್ರಿ ಬಸ್ ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರಿಗೆ ಸಂತಾಪ ಸೂಚಿಸಿದರು. ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಮತ್ತಷ್ಟು ಓದಿ:ಮಂಡ್ಯ: ಎರಡು ಕಾರುಗಳ ನಡುವೆ ಭೀಕರ ಅಪಘಾತ: ನಾಲ್ವರ ಸಾವು

ಪಾಕಿಸ್ತಾನದಲ್ಲಿ ರಸ್ತೆ ಅಪಘಾತಗಳು ಸಾಮಾನ್ಯ. ಜನವರಿ 29ರಂದು ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಪ್ರಯಾಣಿಕರ ಬಸ್ ಕಣಿವೆಗೆ ಬಿದ್ದ ಪರಿಣಾಮ 41 ಮಂದಿ ಸಾವನ್ನಪ್ಪಿದ್ದರು. ಕ್ವೆಟ್ಟಾದಿಂದ ಕರಾಚಿಗೆ 48 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಲಾಸ್ಬೆಲಾ ಬಳಿ ಸೇತುವೆಯ ಪಿಲ್ಲರ್‌ಗೆ ಡಿಕ್ಕಿ ಹೊಡೆದು ಕಣಿವೆಗೆ ಬಿದ್ದು ಬೆಂಕಿ ಹೊತ್ತಿಕೊಂಡಿದೆ ಎಂದು ಲಾಸ್ಬೆಲಾದ ಸಹಾಯಕ ಕಮಿಷನರ್ ಹಮ್ಜಾ ಅಂಜುಮ್ ಹೇಳಿದ್ದಾರೆ.

ಅಪಘಾತದ ಸ್ಥಳದಿಂದ ಗಾಯಾಳುಗಳನ್ನು ಸ್ಥಳಾಂತರಿಸಲು ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವಂತೆ ಖಾಲಿದ್ ಖುರ್ಷಿದ್ ಆಡಳಿತ ಮತ್ತು ಎಲ್ಲಾ ಸಂಬಂಧಿತ ಇಲಾಖೆಗಳಿಗೆ ಸೂಚನೆ ನೀಡಿದರು.

ತುರ್ತು ಪ್ರತಿಕ್ರಿಯೆಯ ಉತ್ತಮ ಸಮನ್ವಯ ಮತ್ತು ಮೇಲ್ವಿಚಾರಣೆಗಾಗಿ ವಿಶೇಷ ನಿಯಂತ್ರಣ ಕೊಠಡಿಯನ್ನು ರಚಿಸಲು ಅವರು ನಿರ್ದೇಶನ ನೀಡಿದರು.

ಜನವರಿ 29 ರಂದು ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಪ್ರಯಾಣಿಕರ ಕೋಚ್ ಕಂದರಕ್ಕೆ ಬಿದ್ದು 41 ಜನರು ಸಾವನ್ನಪ್ಪಿದ್ದರು ಎಂದು ಡಾನ್ ವರದಿ ಮಾಡಿದೆ. ಬಲೂಚಿಸ್ತಾನದ ಲಾಸ್ಬೆಲಾ ಜಿಲ್ಲೆಯಲ್ಲಿ ಈ ಘಟನೆ ನಡೆದಿತ್ತು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ