Pakistan: ಪಾಕಿಸ್ತಾನದಲ್ಲಿ ಸಿಂಧೂ ನದಿಗೆ ಉರುಳಿಬಿದ್ದ ಬಸ್, 26 ಮಂದಿ ಸಾವು

ಮದುವೆ ಮನೆಯಿಂದ ಜನರನ್ನು ಹೊತ್ತು ಬರುತ್ತಿದ್ದ ಬಸ್ ಸಿಂಧೂ ನದಿಗೆ ಉರುಳಿದ ಪರಿಣಾಮ 26 ಮಂದಿ ಸಾವನ್ನಪ್ಪಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.

Pakistan: ಪಾಕಿಸ್ತಾನದಲ್ಲಿ ಸಿಂಧೂ ನದಿಗೆ ಉರುಳಿಬಿದ್ದ ಬಸ್, 26 ಮಂದಿ ಸಾವು
ಬಸ್
Image Credit source: Diplomat Times

Updated on: Nov 13, 2024 | 10:45 AM

ಮದುವೆ ಮನೆಯಿಂದ ಜನರನ್ನು ಹೊತ್ತು ಬರುತ್ತಿದ್ದ ಬಸ್ ಸಿಂಧೂ ನದಿಗೆ ಉರುಳಿದ ಪರಿಣಾಮ 26 ಮಂದಿ ಸಾವನ್ನಪ್ಪಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಪಾಕಿಸ್ತಾನದ ಉತ್ತರ ಗಿಲ್ಗಿಟ್-ಬಾಲ್ಟಿಸ್ತಾನ್ (ಜಿಬಿ) ಪ್ರದೇಶದಲ್ಲಿ ಈ ಘಟನೆ ನಡೆದಿದೆ. 28 ಜನರನ್ನು ಹೊತ್ತೊಯ್ಯುತ್ತಿದ್ದ ಬಸ್​ ಡೈಮರ್ ಜಿಲ್ಲೆಯ ಥಾಲಿಚಿ ಪ್ರದೇಶದಲ್ಲಿ ನದಿಗೆ ಬಿದ್ದಿದೆ ಎಂದು ಹೇಳಿದರು.

ಸ್ಥಳೀಯ ಜನರು ಮತ್ತು ರಕ್ಷಣಾ ತಂಡಗಳು ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು. ಇಬ್ಬರ ಜೀವ ಉಳಿಸುವಲ್ಲಿ ಯಶಸ್ವಿಯಾದರು. ರಕ್ಷಣಾ ತಂಡ 16 ಮೃತದೇಹಗಳನ್ನು ಮೊದಲು ಹೊರ ತೆಗೆದಿತ್ತು. ಅತಿಥಿಗಳು ಜಿಬಿ ಪ್ರದೇಶದ ಆಸ್ಟರ್ ಪ್ರದೇಶದಿಂದ ಈ ಬಸ್ ಮೂಲಕ ಪೂರ್ವ ಚಕ್ವಾಲ್ ಜಿಲ್ಲೆಗೆ ಹೋಗುತ್ತಿದ್ದರು.

ಈ ದುರಂತ ಘಟನೆಗೆ ಪಾಕಿಸ್ತಾನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಸಂತಾಪ ವ್ಯಕ್ತಪಡಿಸಿದ್ದು, ಸಂತ್ರಸ್ತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಅಲ್ಲದೆ ನಾಪತ್ತೆಯಾದವರ ಪತ್ತೆಗೆ ಎಲ್ಲ ರೀತಿಯ ಪ್ರಯತ್ನ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

Pakistan Accident: ಪಾಕಿಸ್ತಾನದಲ್ಲಿ ಭೀಕರ ರಸ್ತೆ ಅಪಘಾತ, 30 ಮಂದಿ ಸಾವು, 15 ಜನರಿಗೆ ಗಂಭೀರ ಗಾಯ

ಖೈಬರ್ ಪಖ್ತುಂಕ್ವಾ ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ್‌ನಲ್ಲಿ ರಸ್ತೆ ಅಪಘಾತಗಳು ಆಗಾಗ ಸಂಭವಿಸುತ್ತಿರುತ್ತವೆ. ಕೆಟ್ಟ ಹವಾಮಾನ, ಕೆಟ್ಟ ರಸ್ತೆಗಳು,. ಓವರ್​ಲೋಡ್ ವಾಹನಗಳಿಂದ ಅಪಘಾತ ಸಂಭವಿಸುತ್ತದೆ. ಕಿರಿದಾದ, ಅಂಕುಡೊಂಕಾದ ಮಾರ್ಗಗಳು ಮತ್ತು ಚಾಲಕನ ಆಯಾಸವು ಅಪಾಯವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಈ ಪ್ರದೇಶಗಳನ್ನು ವಿಶೇಷವಾಗಿ ಅಪಘಾತ-ಪೀಡಿತವಾಗಿಸುತ್ತದೆ.

ಅಕ್ಟೋಬರ್‌ನಲ್ಲಿ ಖೈಬರ್ ಪಖ್ತುಂಕ್ವಾದ ಅಪ್ಪರ್ ಕೊಹಿಸ್ತಾನ್ ಪ್ರದೇಶದಲ್ಲಿ ರಾವಲ್ಪಿಂಡಿಗೆ ತೆರಳುತ್ತಿದ್ದ ಪ್ರಯಾಣಿಕರ ಬಸ್ ಕಂದಕಕ್ಕೆ ಬಿದ್ದಿದ್ದರಿಂದ ಇಬ್ಬರು ಸಾವನ್ನಪ್ಪಿದ್ದರು ಮತ್ತು 36 ಮಂದಿ ಗಾಯಗೊಂಡಿದ್ದರು.

 

ಅಂತಾರಾಷ್ಟ್ರೀಯ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:45 am, Wed, 13 November 24