ಮೊನ್ನೆ ಮೊನ್ನೆ ಟ್ರಂಪ್​ಗೆ ಶಾಂತಿ ಪುರಸ್ಕಾರ ಘೋಷಿಸಿ, ಈಗ ಶಾಂತಿ ಕದಡಿದಾಕ್ಷಣ ವರಸೆ ಬದಲಿಸಿದ ಪಾಕಿಸ್ತಾನ

ಪಾಕಿಸ್ತಾನವು ಇತ್ತೀಚೆಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ಗೆ ನೊಬೆಲ್ ಶಾಂತಿ ಪುರಸ್ಕಾರ ನೀಡುವುದಾಗಿ ಘೋಷಿಸಿತ್ತು. ಆದರೆ ಭಾನುವಾರ ಪಾಕಿಸ್ತಾನದಲ್ಲಿ ಟ್ರಂಪ್ ವಿರುದ್ಧ ಪ್ರತಿಭಟನೆ ನಡೆದಿದೆ. ಪಾಕಿಸ್ತಾನ ಹಾಗೂ ಭಾರತದ ಉದ್ವಿಗ್ನತೆ ಶಮನಕ್ಕೆ ಟ್ರಂಪ್ ಸಾಕಷ್ಟು ಪ್ರಯತ್ನ ಮಾಡಿದ್ದರು. ಇದನ್ನು ಪಾಕಿಸ್ತಾನ ಶ್ಲಾಘಿಸಿತ್ತು. ಪ್ರಧಾನಿ ಶೆಹಬಾಜ್ ಷರೀಫ್ ಸೋಮವಾರ (ಜೂನ್ 23) ರಾಷ್ಟ್ರೀಯ ಭದ್ರತಾ ಸಮಿತಿಯ ಸಭೆಯನ್ನು ಕರೆದಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಮೊನ್ನೆ ಮೊನ್ನೆ ಟ್ರಂಪ್​ಗೆ ಶಾಂತಿ ಪುರಸ್ಕಾರ ಘೋಷಿಸಿ, ಈಗ ಶಾಂತಿ ಕದಡಿದಾಕ್ಷಣ ವರಸೆ ಬದಲಿಸಿದ ಪಾಕಿಸ್ತಾನ
ಡೊನಾಲ್ಡ್​ ಟ್ರಂಪ್-ಮುನೀರ್

Updated on: Jun 23, 2025 | 11:14 AM

ಇಸ್ಲಾಮಾಬಾದ್, ಜೂನ್ 23: ಮೊನ್ನೆ ಮೊನ್ನೆಯಷ್ಟೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್(Donald Trump)​​ಗೆ ಪಾಕಿಸ್ತಾನವು ನೊಬೆಲ್ ಶಾಂತಿ ಪುರಸ್ಕಾರ ನೀಡುವುದಾಗಿ ಘೋಷಿಸಿತ್ತು. ಇದಾಗಿ ಕೆಲವೇ ದಿನಗಳಲ್ಲಿ ಅಮೆರಿಕವು ಇರಾನ್(Iran) ಮೇಲೆ ದಾಳಿ ಮಾಡಿದಾಕ್ಷಣ ತನ್ನ ವರಸೆ ಬದಲಿಸಿ ಇರಾನ್​​ಗೆ ಬೆಂಬಲ ಸೂಚಿಸಿದೆ ಅಮೆರಿಕದ ಕ್ರಮ ತಪ್ಪು ಎಂದು ಹೇಳಿದೆ.

ಪಾಕಿಸ್ತಾನ ಹಾಗೂ ಭಾರತದ ನಡುವೆ ಉದ್ವಿಗ್ನತೆ ಇದ್ದು, ಅಮೆರಿಕವು ಹಲವು ಸಂದರ್ಭಗಳಲ್ಲಿ ಪಾಕಿಸ್ತಾನಕ್ಕೆ ಸಹಾಯ ಮಾಡಿದೆ. ಮಧ್ಯಸ್ಥಿಕೆವಹಿಸಿ ಇಬ್ಬರ ನಡುವಿನ ವೈಮನಸ್ಸು ಕಡಿಮೆ ಮಾಡಲು ಸಹಕರಿಸಿದೆ. ಆದರೆ ಭಾರತವು ನಮ್ಮಿಬ್ಬರ ನಡುವೆ ಯಾರ ಮಧ್ಯಸ್ಥಿಕೆಯ ಅಗತ್ಯವೂ ಇಲ್ಲ ಎಂದು ಹೇಳುತ್ತಲೇ ಬಂದಿದೆ. ಆದರೆ ಪಾಕಿಸ್ತಾನ ಟ್ರಂಪ್​ ಸಹಕಾರ ಪಡೆಯುತ್ತಲೇ ಇದೆ.

ಪಾಕಿಸ್ತಾನವು ಉನ್ನತ ಮಟ್ಟದ ಸಭೆಯನ್ನು ಕರೆದಿದೆ. ಪ್ರಧಾನಿ ಶೆಹಬಾಜ್ ಷರೀಫ್ ಸೋಮವಾರ (ಜೂನ್ 23) ರಾಷ್ಟ್ರೀಯ ಭದ್ರತಾ ಸಮಿತಿಯ ಸಭೆಯನ್ನು ಕರೆದಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಇದು ಅತ್ಯುನ್ನತ ನಾಗರಿಕ-ಮಿಲಿಟರಿ ಸಮಿತಿಯಾಗಿದ್ದು, ಇಸ್ರೇಲ್-ಇರಾನ್ ಸಂಘರ್ಷಕ್ಕೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಲಾಗುವುದು.

ಇದನ್ನೂ ಓದಿ
ಇರಾನ್ ಅಧ್ಯಕ್ಷ ಮಸೂದ್ ಜತೆ ಪ್ರಧಾನಿ ಮೋದಿ ಮಾತುಕತೆ
ಇರಾನ್​ನಿಂದ ಪ್ರತಿದಾಳಿಯ ಆತಂಕ, ಅಮೆರಿಕದ ಪ್ರಮುಖ ನಗರಗಳಲ್ಲಿ ಕಟ್ಟೆಚ್ಚರ
ಅಮೆರಿಕದ ದಾಳಿಗೆ ಬಗ್ಗದ ಇರಾನ್, ಇಸ್ರೇಲ್ ಮೇಲೆ ಮತ್ತೆ ಕ್ಷಿಪಣಿ ದಾಳಿ
ನೀವು ಆರಂಭಿಸಿದ್ದೀರಿ ನಾವು ಕೊನೆಗೊಳಿಸುತ್ತೇವೆ ಎಂದ ಇರಾನ್

ಮತ್ತಷ್ಟು ಓದಿ: US-Iran Conflict: ಅಮೆರಿಕ-ಇರಾನ್ ನಡುವೆ ಹೆಚ್ಚಿದ ಉದ್ವಿಗ್ನತೆ, ರಷ್ಯಾದ ಮೊರೆ ಹೋದ ಇರಾನ್

ಪಾಕಿಸ್ತಾನ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ಈ ಸಭೆಗೆ ಮಾಹಿತಿ ನೀಡುವ ಸಾಧ್ಯತೆಯಿದೆ ಎಂದು ಅವರು ಹೇಳಿದರು. ಇಸ್ಲಾಮಾಬಾದ್ ಸಿಂಧೂ ಜಲ ಒಪ್ಪಂದ (ಐಡಬ್ಲ್ಯೂಟಿ) ರದ್ದತಿ ಹಾಗೂ ಕದನ ವಿರಾಮದ ನಂತರ ಭಾರತದೊಂದಿಗೆ ಉಂಟಾದ ಉದ್ವಿಗ್ನತೆಯ ಬಗ್ಗೆಯೂ ಚರ್ಚಿಸಲಿದೆ.

ಇರಾನ್ ಪರಮಾಣು ಘಟಕಗಳ ಮೇಲೆ ಬಾಂಬ್ ದಾಳಿ ಮಾಡುವ ಟ್ರಂಪ್ ನಿರ್ಧಾರವು ಅಂತಾರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸುತ್ತದೆ ಎಂದು ಟ್ರಂಪ್ ಹೇಳಿದ್ದಾರೆ. ಪಾಕಿಸ್ತಾನದ ಅತಿದೊಡ್ಡ ನಗರವಾದ ಕರಾಚಿಯಲ್ಲಿ, ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಗಳನ್ನು ವಿರೋಧಿಸಿ ಸಾವಿರಾರು ಜನರು ಮೆರವಣಿಗೆ ನಡೆಸಿದರು.

ಟ್ರಂಪ್ ಚಿತ್ರವಿರುವ ದೊಡ್ಡ ಅಮೆರಿಕದ ಧ್ವಜವನ್ನು ಇರಿಸಲಾಗಿತ್ತು. ಪ್ರತಿಭಟನಾಕಾರರು ಅಮೆರಿಕ, ಇಸ್ರೇಲ್ ಮತ್ತು ಪಾಕಿಸ್ತಾನದ ಪ್ರಾದೇಶಿಕ ಶತ್ರು ಭಾರತದ ವಿರುದ್ಧ ಘೋಷಣೆಗಳನ್ನು ಕೂಗಿದರು. ಕಳೆದ ತಿಂಗಳು ಭಾರತದೊಂದಿಗಿನ ನಾಲ್ಕು ದಿನಗಳ ಸಂಘರ್ಷವನ್ನು ಕೊನೆಗೊಳಿಸುವಲ್ಲಿ ಟ್ರಂಪ್ ಅವರ ಪಾತ್ರಕ್ಕಾಗಿ ಅವರನ್ನು ನಿಜವಾದ ಶಾಂತಿಪ್ರಿಯ ಎಂದು ಪಾಕಿಸ್ತಾನ ಕರೆದಿತ್ತು.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಪಾಕಿಸ್ತಾನದ ರಾಯಭಾರಿ ಆಸಿಮ್ ಇಫ್ತಿಕರ್ ಅಹ್ಮದ್, ಇರಾನ್‌ನ ಪರಮಾಣು ಘಟಕಗಳ ಮೇಲಿನ ಅಮೆರಿಕದ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಈ ಸಂಕಷ್ಟದ ಸಮಯದಲ್ಲಿ ಇರಾನ್ ಸರ್ಕಾರ ಮತ್ತು ಸಹೋದರ ಜನರೊಂದಿಗೆ ಪಾಕಿಸ್ತಾನ ಒಗ್ಗಟ್ಟಿನಲ್ಲಿ ನಿಲ್ಲುತ್ತದೆ ಎಂದು ಹೇಳಿದರು.

ಜೂನ್ 18 ರಂದು ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಜನರಲ್ ಆಸಿಮ್ ಮುನೀರ್ ಅವರನ್ನು ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಶ್ವೇತಭವನದಲ್ಲಿ ಊಟಕ್ಕೆ ಆಹ್ವಾನಿಸಿದ್ದರು. ಈ ಸಂದರ್ಭದಲ್ಲಿ ಟ್ರಂಪ್ ಅವರು ಅಸಿಮ್ ಮುನೀರ್ ಮತ್ತು ಪಾಕಿಸ್ತಾನವನ್ನು ಹೊಗಳಿದ್ದರು. ಇದರ ನಂತರ, ಪಾಕಿಸ್ತಾನವು ಅಧ್ಯಕ್ಷ ಟ್ರಂಪ್ ಅವರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿತ್ತು.

ಜೂನ್ 21 ರ ತಡರಾತ್ರಿ ಅಮೆರಿಕವು ಇರಾನ್‌ನ ಮೂರು ಪರಮಾಣು  ಘಟಕಗಳಾದ ಫೋರ್ಡೊ, ನಟಾಂಜ್ ಮತ್ತು ಎಸ್ಫಹಕ್ ಮೇಲೆ ಬಾಂಬ್ ದಾಳಿ ಮಾಡಿತು. ಅದರ ನಂತರ, ಅಮೆರಿಕದ  ಸೇನೆಯು ಇರಾನ್‌ನ ಪರಮಾಣು ಕೇಂದ್ರಗಳನ್ನು ನಾಶಪಡಿಸಿದೆ ಎಂದು ಅಧ್ಯಕ್ಷ ಟ್ರಂಪ್ ಹೇಳಿಕೊಂಡರು. ನಂತರ ಇರಾನ್ ಕೂಡ ಅಮೆರಿಕದ ದಾಳಿಯನ್ನು ದೃಢಪಡಿಸಿತ್ತು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ