AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕ ದಾಳಿ ಬೆನ್ನಲ್ಲೇ ಇರಾನ್ ಸಚಿವರ ಜೊತೆ ಪುಟಿನ್ ಮಾತುಕತೆ; ರಷ್ಯಾದ ನಿಲುವೇನು?

ಅಮೆರಿಕದ ದಾಳಿಯ ಕೆಲವು ದಿನಗಳ ನಂತರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇರಾನ್ ವಿದೇಶಾಂಗ ಸಚಿವರಿಗೆ ಆತಿಥ್ಯ ನೀಡಿದರು. ಇರಾನ್ ಪರಮಾಣು ತಾಣಗಳ ಮೇಲಿನ ಅಮೆರಿಕದ ದಾಳಿಗಳನ್ನು "ಅಪ್ರಚೋದಿತ ಆಕ್ರಮಣ" ಎಂದು ಪುಟಿನ್ ಖಂಡಿಸಿದ್ದಾರೆ. ಆದರೆ ಇಸ್ರೇಲ್‌ನೊಂದಿಗಿನ ಸಾಂಸ್ಕೃತಿಕ ಸಂಬಂಧಗಳಿಂದಾಗಿ ರಷ್ಯಾದ ತಟಸ್ಥ ನಿಲುವನ್ನು ವಿವರಿಸಿದರು. ಮಧ್ಯಪ್ರಾಚ್ಯ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆ ಇರಾನ್, ಅರಬ್ ಜಗತ್ತು ಮತ್ತು ಇಸ್ರೇಲ್‌ನೊಂದಿಗೆ ಸಂಬಂಧಗಳನ್ನು ಸಮತೋಲನಗೊಳಿಸಲು ರಷ್ಯಾದ ರಾಜತಾಂತ್ರಿಕ ಪ್ರಯತ್ನಗಳನ್ನು ಅವರು ಒತ್ತಿ ಹೇಳಿದರು.

ಅಮೆರಿಕ ದಾಳಿ ಬೆನ್ನಲ್ಲೇ ಇರಾನ್ ಸಚಿವರ ಜೊತೆ ಪುಟಿನ್ ಮಾತುಕತೆ; ರಷ್ಯಾದ ನಿಲುವೇನು?
Russia President Putin
ಸುಷ್ಮಾ ಚಕ್ರೆ
|

Updated on: Jun 23, 2025 | 6:08 PM

Share

ನವದೆಹಲಿ, ಜೂನ್ 23: ಇರಾನ್ ಪರಮಾಣು ಸೌಲಭ್ಯಗಳ ಮೇಲಿನ ಇತ್ತೀಚಿನ ಅಮೆರಿಕದ ದಾಳಿಗಳನ್ನು ಇಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಬಲವಾಗಿ ಖಂಡಿಸಿದ್ದಾರೆ. ಅಮೆರಿಕದ ದಾಳಿಯನ್ನು ಸಂಪೂರ್ಣವಾಗಿ ಅಪ್ರಚೋದಿತ ಆಕ್ರಮಣಶೀಲತೆ ಎಂದು ಕರೆದಿದ್ದಾರೆ. ಮಾಸ್ಕೋದಲ್ಲಿ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ ಅವರೊಂದಿಗಿನ ಸಭೆಯಲ್ಲಿ ಮಾತನಾಡಿದ ಪುಟಿನ್, ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಬಿಕ್ಕಟ್ಟಿನ ನಡುವೆ ಇರಾನ್ ಜನರನ್ನು ಬೆಂಬಲಿಸಲು ರಷ್ಯಾ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಒತ್ತಿ ಹೇಳಿದರು. ಟೆಹ್ರಾನ್‌ನೊಂದಿಗೆ ಮಾಸ್ಕೋದ ಬೆಳೆಯುತ್ತಿರುವ ಹೊಂದಾಣಿಕೆಯನ್ನು ಪ್ರತಿಬಿಂಬಿಸುವ ಪ್ರಮುಖ ಇರಾನಿನ ಪರಮಾಣು ತಾಣಗಳ ಮೇಲೆ ಯುಎಸ್ ಮತ್ತು ಇಸ್ರೇಲಿ ವಾಯುದಾಳಿಗಳು ಸಂಘಟಿತವಾಗಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಈ ಹೇಳಿಕೆಗಳು ಬಂದಿವೆ.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇಂದು ರಷ್ಯಾದ ಮಾಸ್ಕೋದಲ್ಲಿ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಖ್ಚಿ ಅವರ ಜೊತೆ ಮಾತುಕತೆ ನಡೆಸಿದರು. ಇರಾನ್ ಪರಮಾಣು ತಾಣಗಳ ಮೇಲಿನ ಅಮೆರಿಕದ ಕ್ಷಿಪಣಿ ಮತ್ತು ಬಾಂಬ್ ದಾಳಿಗಳನ್ನು ಪುಟಿನ್ ಖಂಡಿಸಿದರು. ಇರಾನ್ ಮೇಲೆ ಅಮೆರಿಕ ಬಾಂಬ್ ದಾಳಿ ನಡೆಸಿದ್ದಕ್ಕೆ ಯಾವುದೇ ಸಮರ್ಥನೆ ಇಲ್ಲ ಮತ್ತು ಮಾಸ್ಕೋ ಇರಾನ್ ಜನರಿಗೆ ಸಹಾಯ ಮಾಡಲು ಬದ್ಧವಾಗಿದೆ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.

ಇದನ್ನೂ ಓದಿ: ಇರಾನ್ ಮೇಲೆ ದಾಳಿ ನಡೆಸಿ ಸುಮ್ಮನಾದ ಟ್ರಂಪ್, ರಷ್ಯಾಗೆ ಹೊರಟ ಇರಾನ್ ವಿದೇಶಾಂಗ ಸಚಿವ, ಒಂದು ದಿನದಲ್ಲಿ ಏನೆಲ್ಲಾ ನಡೀತು

ಇದನ್ನೂ ಓದಿ
Image
ಟ್ರಂಪ್​ಗೆ ಶಾಂತಿ ಪುರಸ್ಕಾರ ಘೋಷಿಸಿ, ಈಗ ಪ್ರತಿಭಟನೆ ಮಾಡಿದ ಪಾಕಿಸ್ತಾನ
Image
ಇರಾನ್ ಮೇಲೆ ದಾಳಿ ನಡೆಸಿ ಸುಮ್ಮನಾದ ಟ್ರಂಪ್, ರಷ್ಯಾಗೆ ಹೊರಟ ಅಬ್ಬಾಸ್
Image
ಅಮೆರಿಕ-ಇರಾನ್ ನಡುವೆ ಹೆಚ್ಚಿದ ಉದ್ವಿಗ್ನತೆ, ರಷ್ಯಾದ ಮೊರೆ ಹೋದ ಇರಾನ್
Image
ಅಮೆರಿಕ ದೊಡ್ಡ ತಪ್ಪು ಮಾಡಿದೆ, ತಕ್ಕ ಶಿಕ್ಷೆ ಅನುಭವಿಸಲಿದೆ: ಖಮೇನಿ

“ಇರಾನ್ ವಿರುದ್ಧದ ಅಮೆರಿಕದ ಅಪ್ರಚೋದಿತ ಆಕ್ರಮಣಕ್ಕೆ ಯಾವುದೇ ಸಮರ್ಥನೆ ಇಲ್ಲ. ನಾವು ಇರಾನ್ ಜನರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದೇವೆ” ಎಂದು ಪುಟಿನ್ ಹೇಳಿದ್ದಾರೆ. ಇರಾನ್ ಮೇಲೆ ಅಮೆರಿಕ ಬಾಂಬ್ ದಾಳಿ ನಡೆಸಿದ್ದಕ್ಕೆ ಯಾವುದೇ ಸಮರ್ಥನೆ ಇಲ್ಲ ಮತ್ತು ಮಾಸ್ಕೋ ಇರಾನಿನ ಜನರಿಗೆ ಸಹಾಯ ಮಾಡಲು ಬದ್ಧವಾಗಿದೆ ಎಂದು ರಷ್ಯಾದ ಅಧ್ಯಕ್ಷರು ಹೇಳಿದರು.

ಸೇಂಟ್ ಪೀಟರ್ಸ್‌ಬರ್ಗ್ ಅಂತಾರಾಷ್ಟ್ರೀಯ ಆರ್ಥಿಕ ವೇದಿಕೆಯಲ್ಲಿ ಮಾತನಾಡಿದ ಪುಟಿನ್ ರಷ್ಯಾ ಇಸ್ರೇಲ್‌ನೊಂದಿಗೆ ಹಂಚಿಕೊಳ್ಳುವ ಮಹತ್ವದ ಸಾಂಸ್ಕೃತಿಕ ಮತ್ತು ಜನಸಂಖ್ಯಾ ಸಂಪರ್ಕಗಳನ್ನು ಎತ್ತಿ ತೋರಿಸಿದರು. ಸುಮಾರು 2 ಮಿಲಿಯನ್ ರಷ್ಯನ್ ಮಾತನಾಡುವ ಜನರು ಅಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಿದರು. “ಇಂದು ಇದು ಬಹುತೇಕ ರಷ್ಯನ್ ಮಾತನಾಡುವ ದೇಶವಾಗಿದೆ” ಎಂದು ಪುಟಿನ್ ಹೇಳಿದ್ದಾರೆ. ಈ ಅಂಶವು ರಷ್ಯಾದ ವಿದೇಶಾಂಗ ನೀತಿ ಪರಿಗಣನೆಗಳಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿದ್ದಾರೆ.

ಅರಬ್ ಮತ್ತು ಇಸ್ಲಾಮಿಕ್ ರಾಷ್ಟ್ರಗಳೊಂದಿಗೆ ರಷ್ಯಾದ ಐತಿಹಾಸಿಕ ಸ್ನೇಹಪರ ಸಂಬಂಧಗಳನ್ನು ಅವರು ಒತ್ತಿ ಹೇಳಿದರು. ರಷ್ಯಾದ ಜನಸಂಖ್ಯೆಯ ಶೇ. 15ರಷ್ಟು ಮುಸ್ಲಿಮರಾಗಿದ್ದಾರೆ. ಇದಲ್ಲದೆ, ಇಸ್ಲಾಮಿಕ್ ಸಹಕಾರ ಸಂಘಟನೆ (OIC)ಯಲ್ಲಿ ರಷ್ಯಾದ ವೀಕ್ಷಕ ಸ್ಥಾನವು ಮುಸ್ಲಿಂ ಜಗತ್ತಿಗೆ ಅದರ ನಿರಂತರ ಬದ್ಧತೆಯನ್ನು ಪ್ರದರ್ಶಿಸುತ್ತದೆ.

ಇದನ್ನೂ ಓದಿ: ‘ಅತ್ಯಂತ ಅಪಾಯಕಾರಿ ಹೆಜ್ಜೆ’; ಇಸ್ರೇಲ್-ಇರಾನ್ ಯುದ್ಧದಲ್ಲಿ ಮಿಲಿಟರಿ ಹಸ್ತಕ್ಷೇಪದ ವಿರುದ್ಧ ಅಮೆರಿಕಕ್ಕೆ ರಷ್ಯಾ ಎಚ್ಚರಿಕೆ

ಇರಾನ್ ತನ್ನ ಪ್ರತೀಕಾರದ ಕ್ರಮಗಳನ್ನು ಕೈಗೊಳ್ಳುವವರೆಗೆ ಶಾಂತಿ ಮಾತುಕತೆಗೆ ಹಿಂತಿರುಗುವುದಿಲ್ಲ ಎಂದು ಇರಾನ್ ವಿದೇಶಾಂಗ ಸಚಿವ ಅರಾಘ್ಚಿ ಹೇಳಿದ್ದಾರೆ. ಯುಎಸ್ ಮತ್ತು ಇಸ್ರೇಲ್ ಹಿಂದಿನ ರಾಜತಾಂತ್ರಿಕ ಪ್ರಯತ್ನಗಳನ್ನು ನಾಶಪಡಿಸಿದೆ ಎಂದು ಆರೋಪಿಸಿದ್ದಾರೆ. ಇದಕ್ಕೂ ಮೊದಲು, ಇರಾನ್ ಮತ್ತು ಇಸ್ರೇಲ್ ನಡುವಿನ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಲು ಪುಟಿನ್ ಪ್ರಸ್ತಾಪಿಸಿದರು. ಆದರೆ ಈ ಪ್ರಸ್ತಾಪವನ್ನು ಟ್ರಂಪ್ ತಿರಸ್ಕರಿಸಿದರು ಎನ್ನಲಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ