ಇರಾನ್‌ನ ಭೂಗತ ಫೋರ್ಡೋ ಪರಮಾಣು ಕೇಂದ್ರದ ಮೇಲೆ ಇಸ್ರೇಲ್ ದಾಳಿ
ಇರಾನ್‌ನ ಭೂಗತ ಫೋರ್ಡೋ ಪರಮಾಣು ಕೇಂದ್ರದ ಮೇಲೆ ಇಸ್ರೇಲ್ ದಾಳಿ ಮಾಡಿದೆ. ಇದನ್ನು ಇರಾನ್ ಮತ್ತು ಇಸ್ರೇಲಿ ಅಧಿಕಾರಿಗಳು ದೃಢಪಡಿಸಿದ್ದಾರೆ. ಏಕಕಾಲದಲ್ಲಿ, ಟೆಹ್ರಾನ್ ಮತ್ತು ಜೆರುಸಲೆಮ್‌ನಲ್ಲಿ ಸ್ಫೋಟಗಳು ನಡೆದಿವೆ. ಇರಾನ್ ರಾಜಧಾನಿ ಟೆಹ್ರಾನ್ ಮೇಲೆ ಇಂದು ಮಧ್ಯಾಹ್ನದ ಸುಮಾರಿಗೆ ಹೆಚ್ಚು ತೀವ್ರವಾದ ಇಸ್ರೇಲಿ ವೈಮಾನಿಕ ದಾಳಿಗಳು ನಡೆದಿವೆ. ಒಂದು ದಾಳಿಯು ಎವಿನ್ ಜೈಲಿನ ದ್ವಾರವನ್ನು ಧ್ವಂಸ ಮಾಡಿದೆ.

ಜೆರುಸಲೇಂ, ಜೂನ್ 23: ಇಸ್ರೇಲ್ ಮತ್ತು ಇರಾನ್ ನಡುವಿನ ದಾಳಿ (Israel-Iran War) ತೀವ್ರ ಮಟ್ಟಕ್ಕೆ ಹೋಗಿದ್ದು, ಪರಸ್ಪರ ದೇಶಗಳು ವೈಮಾನಿಕ ದಾಳಿಗಳನ್ನು ನಡೆಸುತ್ತಲೇ ಇವೆ. ಈ ನಡುವೆ ಅಮೆರಿಕ ಕೂಡ ಮಧ್ಯಪ್ರವೇಶಿಸಿ ಇರಾನ್ ಮೇಲೆ ಬಾಂಬ್ ದಾಳಿ ನಡೆಸಿದೆ. ಇಸ್ರೇಲ್ ಇಂದು ಟೆಹ್ರಾನ್‌ನ ದಕ್ಷಿಣದಲ್ಲಿರುವ ಇರಾನ್‌ನ ಅಂಡರ್ಗ್ರೌಂಡ್ ಫೋರ್ಡೋ ಪರಮಾಣು ಕೇಂದ್ರದ ಮೇಲೆ ಹೊಸದಾಗಿ ದಾಳಿಗಳನ್ನು ನಡೆಸಿದೆ ಎಂದು ಇರಾನಿನ ಮಾಧ್ಯಮಗಳು ವರದಿ ಮಾಡಿವೆ. “ಇಸ್ರೇಲ್ ಫೋರ್ಡೋ ಪರಮಾಣು ತಾಣದ ಮೇಲೆ ಮತ್ತೆ ದಾಳಿ ಮಾಡಿದೆ” ಎಂದು ತಸ್ನಿಮ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ಸ್ಥಳದಲ್ಲಿನ ಹಾನಿಯ ಬಗ್ಗೆ ತಕ್ಷಣದ ಮಾಹಿತಿ ದೊರಕಿಲ್ಲ.
ಉತ್ತರ ಟೆಹ್ರಾನ್‌ನಲ್ಲಿ ಕೂಡ ಜೋರಾಗಿ ಸ್ಫೋಟಗಳು ಕೇಳಿಬಂದವು. ಇಸ್ರೇಲ್ ಸೇನೆಯು ಇರಾನಿನ ಕ್ಷಿಪಣಿ ದಾಳಿಗಳ ಬಗ್ಗೆ ಎಚ್ಚರಿಕೆ ನೀಡಿದ ನಂತರ ಜೆರುಸಲೆಮ್‌ನಲ್ಲಿಯೂ ಸ್ಫೋಟಗಳು ಕೇಳಿಬಂದವು. ಭಾನುವಾರ, ಯುನೈಟೆಡ್ ಸ್ಟೇಟ್ಸ್ ಇರಾನ್‌ನ ಫೋರ್ಡೋ ಇಂಧನ ಪುಷ್ಟೀಕರಣ ಘಟಕದ ಮೇಲೆ ತನ್ನ ಬೃಹತ್ “ಬಂಕರ್-ಬಸ್ಟರ್” ಬಾಂಬ್‌ಗಳನ್ನು ಹಾರಿಸಿತು. ಇದನ್ನು ಪರ್ವತದ ಆಳದಲ್ಲಿ ನಿರ್ಮಿಸಲಾದ ಮತ್ತು ಇಸ್ರೇಲ್‌ನ ವಾರಪೂರ್ತಿ ದಾಳಿಯ ಸಮಯದಲ್ಲಿ ಮುಟ್ಟದೆ ಇರುವ ಸೌಲಭ್ಯವನ್ನು ಹಾನಿಗೊಳಿಸಲು ಅಥವಾ ನಾಶಮಾಡಲು ಉತ್ತಮ ಅವಕಾಶವೆಂದು ವ್ಯಾಪಕವಾಗಿ ಪರಿಗಣಿಸಲಾಗಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
This will be an interesting site for archaeologists: these are reportedly the entry holes left by American GBU-57 super-bombs on their way to the underground uranium enrichment facility at the Fordow nuclear center in central Iran !!! UPDATE: More Israeli air strikes are… pic.twitter.com/NghCGTRT8Z
— Dana Levi דנה🇮🇱🇺🇸 (@Danale) June 23, 2025
ಫೋರ್ಡೋ ಇರಾನ್‌ನ ನಟಾಂಜ್ ನಂತರ ಎರಡನೇ ಬೃಹತ್ ಪರಮಾಣು ಸೌಲಭ್ಯವಾಗಿದೆ. ಫೋರ್ಡೋವ್ ನಟಾಂಜ್ ಗಿಂತ ಚಿಕ್ಕದಾಗಿದ್ದು, ಟೆಹ್ರಾನ್ ನಿಂದ ನೈಋತ್ಯಕ್ಕೆ ಸುಮಾರು 60 ಮೈಲುಗಳು (95 ಕಿಲೋಮೀಟರ್) ದೂರದಲ್ಲಿರುವ ಕೋಮ್ ನಗರದ ಬಳಿಯ ಪರ್ವತದ ಬದಿಯಲ್ಲಿ ಇದನ್ನು ನಿರ್ಮಿಸಲಾಗಿದೆ. ಇದರ ನಿರ್ಮಾಣ ಕಾರ್ಯವು 2006ರ ಸುಮಾರಿಗೆ ಪ್ರಾರಂಭವಾಯಿತು. ಇದು 2009ರಲ್ಲಿ ಕಾರ್ಯರೂಪಕ್ಕೆ ಬಂದಿತು.
Evin Prison is the most feared regime political prison in Iran. The site of notorious torture of countless human rights activists.
Israel just blew open the gates to the prison. Not a single person can say this is not justified pic.twitter.com/aPMKzH89Rv
— Drew Pavlou 🇦🇺🇺🇦🇹🇼 (@DrewPavlou) June 23, 2025
ಇದನ್ನೂ ಓದಿ: ಅಮೆರಿಕ ದಾಳಿ ಬೆನ್ನಲ್ಲೇ ಇರಾನ್ ಸಚಿವರ ಜೊತೆ ಪುಟಿನ್ ಮಾತುಕತೆ; ರಷ್ಯಾದ ನಿಲುವೇನು?
ಬಂಡೆ ಮತ್ತು ಮಣ್ಣಿನ ಅಡಿಯಲ್ಲಿ ಅಂದಾಜು 80 ಮೀಟರ್ (260 ಅಡಿ) ಆಳದಲ್ಲಿರುವುದರ ಜೊತೆಗೆ, ಈ ಸ್ಥಳವು ಇರಾನಿನ ಮತ್ತು ರಷ್ಯಾದ ಮೇಲ್ಮೈಯಿಂದ ಗಾಳಿಗೆ ಹಾರುವ ಕ್ಷಿಪಣಿ ವ್ಯವಸ್ಥೆಗಳಿಂದ ರಕ್ಷಿಸಲ್ಪಟ್ಟಿದೆ ಎಂದು ವರದಿಯಾಗಿದೆ. ಆದರೂ ಆ ವಾಯು ರಕ್ಷಣಾ ವ್ಯವಸ್ಥೆಗಳನ್ನು ಇಸ್ರೇಲ್ ಕಾರ್ಯಾಚರಣೆಯಲ್ಲಿ ಈಗಾಗಲೇ ಹೊಡೆದುರುಳಿಸಲಾಗಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:38 pm, Mon, 23 June 25








