ಅಮೆರಿಕದ ದಾಳಿ, ಎಚ್ಚರಿಕೆಗೆ ಬಗ್ಗದ ಇರಾನ್, ಇಸ್ರೇಲ್ ಮೇಲೆ ಮತ್ತೆ ಕ್ಷಿಪಣಿ ದಾಳಿ
ಅಮೆರಿಕದ ದಾಳಿಯಿಂದ ಕುಗ್ಗದ ಇರಾನ್(Iran) ಇಸ್ರೇಲ್(Israel) ಮೇಲೆ ಮತ್ತೆ ಕ್ಷಿಪಣಿಗಳನ್ನು ಪ್ರಯೋಗಿಸಿದೆ. ಸ್ವಲ್ಪ ಸಮಯದ ಹಿಂದಷ್ಟೇ ಅಮೆರಿಕವು ಇರಾನ್‌ನ ಮೂರು ಪರಮಾಣು ಕೇಂದ್ರಗಳ ಮೇಲೆ ದಾಳಿ ನಡೆಸಿತ್ತು. ಅಷ್ಟೇ ಅಲ್ಲದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಶಾಂತಿ ಸ್ಥಾಪನೆಯಾಗದಿದ್ದರೆ, ದೊಡ್ಡ ಪರಿಣಾಮವನ್ನು ಎದುರಿಸಬೇಕಾದೀತು ಎಂದು ಇರಾನ್ಗೆ ಎಚ್ಚರಿಕೆ ನೀಡಿದ್ದರು. ಆದರೂ ಇರಾನ್ ತನ್ನ ದಾಳಿಯನ್ನು ಮುಂದುವರೆಸಿದೆ. ಅಮೆರಿಕದ ದಾಳಿಯಿಂದ ಇರಾನ್‌ನಲ್ಲಿ ಪರಮಾಣು ಸೋರಿಕೆಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ.

ಇರಾನ್, ಜೂನ್ 22: ಅಮೆರಿಕದ ದಾಳಿಯಿಂದ ಕುಗ್ಗದ ಇರಾನ್(Iran) ಇಸ್ರೇಲ್(Israel) ಮೇಲೆ ಮತ್ತೆ ಕ್ಷಿಪಣಿಗಳನ್ನು ಪ್ರಯೋಗಿಸಿದೆ. ಸ್ವಲ್ಪ ಸಮಯದ ಹಿಂದಷ್ಟೇ ಅಮೆರಿಕವು ಇರಾನ್‌ನ ಮೂರು ಪರಮಾಣು ಕೇಂದ್ರಗಳ ಮೇಲೆ ದಾಳಿ ನಡೆಸಿತ್ತು. ಅಷ್ಟೇ ಅಲ್ಲದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಶಾಂತಿ ಸ್ಥಾಪನೆಯಾಗದಿದ್ದರೆ, ದೊಡ್ಡ ಪರಿಣಾಮವನ್ನು ಎದುರಿಸಬೇಕಾದೀತು ಎಂದು ಇರಾನ್ಗೆ ಎಚ್ಚರಿಕೆ ನೀಡಿದ್ದರು. ಆದರೂ ಇರಾನ್ ತನ್ನ ದಾಳಿಯನ್ನು ಮುಂದುವರೆಸಿದೆ. ಅಮೆರಿಕದ ದಾಳಿಯಿಂದ ಇರಾನ್‌ನಲ್ಲಿ ಪರಮಾಣು ಸೋರಿಕೆಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ.
ಇಸ್ರೇಲ್ನ ಟೆಲ್ ಅವೀವ್, ಜೆರುಸಲೇಂನಲ್ಲಿ ದೊಡ್ಡ ಸ್ಫೋಟದ ಸದ್ದುಗಳು ಕೇಳಿಬಂದಿವೆ. ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಯ ಪ್ರಮುಖ ಉಲ್ಬಣದಲ್ಲಿ, ಫೋರ್ಡೋ, ನಟಾಂಜ್ ಮತ್ತು ಇಸ್ಫಹಾನ್ ಸೇರಿದಂತೆ ಇರಾನ್‌ನಲ್ಲಿರುವ ಮೂರು ಪರಮಾಣು ತಾಣಗಳ ಮೇಲೆ ಅಮೆರಿಕವು ಅತ್ಯಂತ ಯಶಸ್ವಿ ದಾಳಿಯನ್ನು ಪೂರ್ಣಗೊಳಿಸಿದೆ ಎಂದು ಹೇಳಿಕೊಂಡಿದ್ದರು. ಇರಾನ್‌ನಲ್ಲಿ, ಸಂಘರ್ಷದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಈಗ 400 ದಾಟಿದೆ.
ಇರಾನ್ ಆರೋಗ್ಯ ಸಚಿವಾಲಯವು 430 ಸಾವುಗಳನ್ನು ವರದಿ ಮಾಡಿದೆ. ಆರೋಗ್ಯ ಅಧಿಕಾರಿಗಳ ಪ್ರಕಾರ, ಈ ಪ್ರದೇಶದಲ್ಲಿ ಇಸ್ರೇಲಿ ದಾಳಿಗಳು ಮತ್ತು ದಾಳಿಗಳಿಂದಾಗಿ 3,500 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಕಳೆದ ವಾರ ಸಂಘರ್ಷ ಉಲ್ಬಣಗೊಂಡ ನಂತರ ಇಸ್ರೇಲ್‌ನಲ್ಲಿ ಕನಿಷ್ಠ 24 ಸಾವುಗಳು ಸಂಭವಿಸಿವೆ ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ.
ಇದೀಗ ಮತ್ತೆ ಇರಾನ್ ತನ್ನ ದಾಳಿ ಮುಂದುವರೆಸಿದ್ದು, ಟೆಲ್ ಅವೀವ್, ಹೈಫಾ ಮತ್ತು ಜೆರುಸಲೆಮ್‌ನಲ್ಲಿ ಸ್ಫೋಟಗಳ ಸದ್ದು ಕೇಳಿಬಂದಿದೆ. ಇರಾನ್‌ನ ಇತ್ತೀಚಿನ ದಾಳಿಯಲ್ಲಿ ಸುಮಾರು 25 ಕ್ಷಿಪಣಿಗಳು ಇದ್ದವು ಎಂದು ಇಸ್ರೇಲಿ ಮಾಧ್ಯಮಗಳು ವರದಿ ಮಾಡಿವೆ.
ಬಲದಿಂದ ಮಾತ್ರ ಶಾಂತಿ ಸ್ಥಾಪಿಸಲು ಸಾಧ್ಯ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಅಮೆರಿಕವು ಇರಾನ್ ಮೇಲೆ ನಡೆಸಿದ ವಾಯು ದಾಳಿ ಕುರಿತು ನೆತನ್ಯಾಹು ಸಂತಸ ವ್ಯಕ್ತಪಡಿಸಿದ್ದಾರೆ. ಇಸ್ರೇಲ್ ಹಾಗೂ ಇರಾನ್ ನಡುವಿನ ಸಂಘರ್ಷದಲ್ಲಿ ನೇರವಾಗಿ ಅಮೆರಿಕ ಎಂಟ್ರಿ ಕೊಟ್ಟಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಫೋರ್ಡೊ, ನಟಾಂಜ್ ಮತ್ತು ಎಸ್ಫಹಾನ್ ಸೇರಿದಂತೆ ಇರಾನ್‌ನ ಮೂರು ಪರಮಾಣು ತಾಣಗಳ ಮೇಲೆ ಯುಎಸ್ ಸೈನ್ಯವು ತನ್ನ ಅತ್ಯಂತ ಯಶಸ್ವಿ ದಾಳಿಯನ್ನು ಪೂರ್ಣಗೊಳಿಸಿದೆ ಎಂದು ಹೇಳಿಕೊಂಡಿದ್ದಾರೆ.
ಮತ್ತಷ್ಟು ಓದಿ: ಅಮೆರಿಕ ನಡೆಸಿದ ದಾಳಿಯಿಂದ ಪರಮಾಣು ಸೋರಿಕೆಯಾಗಿಲ್ಲ: ಇರಾನ್ ಸ್ಪಷ್ಟನೆ
ಈ ಕ್ರಮದ ನಂತರ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕಕ್ಕೆ ಧನ್ಯವಾದ ಅರ್ಪಿಸಿದರು. ಅಮೆರಿಕ ನಿಜವಾಗಿಯೂ ವಿಶಿಷ್ಟವಾಗಿದೆ. ಭೂಮಿಯ ಮೇಲಿನ ಯಾವುದೇ ದೇಶ ಮಾಡಲು ಸಾಧ್ಯವಾಗದ ಕೆಲಸವನ್ನು ಅದು ಮಾಡಿದೆ ಎಂದು ಹೇಳಿದ್ದಾರೆ.
ಆಪರೇಷನ್ ರೈಸಿಂಗ್ ಲಯನ್‌ನಲ್ಲಿ ಇಸ್ರೇಲ್ ನಿಜವಾಗಿಯೂ ಅದ್ಭುತವಾದ ಕೆಲಸಗಳನ್ನು ಮಾಡಿದೆ, ಆದರೆ ಇರಾನ್‌ನ ಪರಮಾಣು ಕೇಂದ್ರಗಳ ವಿರುದ್ಧದ ಕಾರ್ಯಾಚರಣೆಯಲ್ಲಿ, ಅಮೆರಿಕ ನಿಜವಾಗಿಯೂ ಎಲ್ಲವನ್ನೂ ಮೀರದ ಕೆಲಸಗಳನ್ನು ಮಾಡಿದೆ. ಭೂಮಿಯ ಮೇಲಿನ ಯಾವುದೇ ದೇಶವು ಮಾಡಲಾಗದ ಕೆಲಸವನ್ನು ಅದು ಮಾಡಿದೆ ಎಂದು ಅವರು ಹೇಳಿದರು. ಒಂದೊಮ್ಮೆ ನೀವು ಕೂಡ ಇಷ್ಟಕ್ಕೆ ಸುಮ್ಮನಾದರೆ ಸರಿ ಏನಾದರೂ ಪ್ರತೀಕಾರ ತೀರಿಸಿಕೊಳ್ಳಲು ಬಯಸಿದರೆ ಇದಕ್ಕಿಂತ ದೊಡ್ಡ ದಾಳಿಯನ್ನು ಎದುರಿಸಬೇಕಾದೀತು ಎಂದು ಟ್ರಂಪ್ ಇರಾನ್ಗೆ ಎಚ್ಚರಿಕೆ ನೀಡಿದ್ದಾರೆ.
ಇರಾನ್‌ನ ಮೂರು ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ಸೇನೆಯು ವೈಮಾನಿಕ ದಾಳಿ ನಡೆದಿದೆ. ಈ ಕುರಿತು ಖುದ್ದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಹಿತಿ ನೀಡಿದ್ದು, ಇದೀಗ ಶಾಂತಿಯ ಸಮಯ ಎಂದಿದ್ದಾರೆ. ಒಂದೊಮ್ಮೆ ಈಗ ಶಾಂತಿ ಸ್ಥಾಪಿಸದಿದ್ದರೆ ಮತ್ತೊಮ್ಮೆ ದಾಳಿ ನಡೆಸುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದಾರೆ. ಈಗ ಅಮೆರಿಕ ಕೂಡ ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಬಹಿರಂಗವಾಗಿ ಸೇರಿಕೊಂಡಿದೆ.
ಒಂದೊಮ್ಮೆ ಈಗ ಇರಾನ್ ಶಾಂತಿ ಕಾಪಾಡದೆ ಪ್ರತ್ಯುತ್ತರ ನೀಡಲು ಪ್ರಯತ್ನಿಸಿದರೆ ಸಂಪೂರ್ಣ ವಿನಾಶ ಮಾಡುವವರೆಗೂ ನಾವು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಸಾಮಾನ್ಯವಾಗಿ ಯಾವುದೇ ದೇಶಗಳು ತಮ್ಮ ಮೇಲೆ ಬೇರೆ ದೇಶಗಳು ದಾಳಿ ಮಾಡಿದಾಗ ನೋಡಿಕೊಂಡು ಶಾಂತವಾಗಿರಲು ಸಾಧ್ಯವೇ ಎನ್ನುವ ಪ್ರಶ್ನೆ ಮೂಡಿತ್ತು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:48 am, Sun, 22 June 25








