ಪಾಕಿಸ್ತಾನವು ಆರ್ಥಿಕ ದಿವಾಳಿಯತ್ತ ಸಾಗುತ್ತಿದೆ, ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆಯಾಗಲಿದೆ. ಕೇವಲ ಪೆಟ್ರೋಲ್, ಡೀಸೆಲ್ ಬೆಲೆ ಮಾತ್ರವಲ್ಲದೆ ಬ್ರೆಡ್, ಹಾಲಿನಿಂದ ಹಿಡಿದು ಚಹಾದವರೆಗೂ ಎಲ್ಲದರ ಬೆಲೆಯಲ್ಲಿ ಹೆಚ್ಚಳವಾಗುತ್ತಿದೆ. ಪೆಟ್ರೋಲ್ ಪಂಪ್ ಬಳಿ ಜನಜಂಗುಳಿ, ಜಗಳ ಸಾಮಾನ್ಯವಾಗಿಬಿಟ್ಟಿದೆ. ವಾಸ್ತವವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಅದು ಫೆಬ್ರವರಿ 17 ರಿಂದ ಜಾರಿಗೆ ಬರಲಿದೆ. ಪೆಟ್ರೋಲ್ ಬೆಲೆಯನ್ನು 22 ರೂ. ಏರಿಕೆ ಮಾಡಲು ನಿರ್ಧರಿಸಲಾಗಿದೆ.
ಪಾಕಿಸ್ತಾನದ ವಿದೇಶಿ ವಿನಿಮಯ ಮೀಸಲು (Pakistan Forex Reserve ) ಶ್ರೀಲಂಕಾದಂತೆ ಬಹುತೇಕ ಖಾಲಿಯಾಗಿದೆ. ಕಳೆದ ವಾರದಲ್ಲಿ, ಇದು 3 ಬಿಲಿಯನ್‌ಗಿಂತ ಕಡಿಮೆಯಾಗಿದೆ, ಅಂದರೆ ಸರಳವಾಗಿ ಹೇಳುವುದಾದರೆ ದೇಶವನ್ನು ಒಂದು ತಿಂಗಳುಗಳ ಕಾಲ ನಡೆಸಲು ಸಾಕಾಗುವುದಿಲ್ಲ. ಆಹಾರ ಪದಾರ್ಥಗಳಿಂದ ಹಿಡಿದು ಪೆಟ್ರೋಲಿಯಂ ಉತ್ಪನ್ನಗಳವರೆಗೆ ಎಲ್ಲವನ್ನೂ ಆಮದು ಮಾಡಿಕೊಳ್ಳಲು ಪಾಕಿಸ್ತಾನಕ್ಕೆ ಸಾಧ್ಯವಾಗುತ್ತಿಲ್ಲ.
ಇದರಿಂದಾಗಿ ದೇಶದಲ್ಲಿ ಹಣದುಬ್ಬರ ತಲ್ಲಣ ಸೃಷ್ಟಿಸಿದೆ. ಜನವರಿ 29ರಂದು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಹೆಚ್ಚಿಸಲಾಯಿತು. ಪೆಟ್ರೋಲ್ ಬೆಲೆ ಲೀಟರ್ಗೆ 249.80 ರೂ.ಗೆ ತಲುಪಿದ್ದರೆ, ಡೀಸೆಲ್ ಲೀಟರ್ಗೆ 262.80 ರೂ.ಗೆ ತಲುಪಿದೆ. ಈಗ ಮತ್ತೆ 22 ರೂ. ಹೆಚ್ಚಾಗುವ ನಿರೀಕ್ಷೆ ಇದೆ.
ರಾಯಿಟರ್ಸ್ ವರದಿ ಪ್ರಕಾರ , ಪಾಕಿಸ್ತಾನದಲ್ಲಿ ಪೆಟ್ರೋಲ್ ಬೆಲೆಯನ್ನು 22.20 ರೂ. ಹೆಚ್ಚಿಸಲು ನಿರ್ಧರಿಸಲಾಗಿದೆ. ಇದಾದ ಬಳಿಕ ದೇಶದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ಲೀಟರ್ಗೆ 272 ರೂ.ಗೆ ಏರಿಕೆಯಾಗುತ್ತದೆ.
ಮತ್ತಷ್ಟು ಓದಿ: Pakistan Economic Crisis: ಪಾಕಿಸ್ತಾನಕ್ಕೆ ಆರ್ಥಿಕ ಸಂಕಷ್ಟ, ಹಣಕಾಸು ನೆರವಿನ ಕುರಿತು ನಿರ್ಧಾರಕ್ಕೆ ಬರಲು ಸಮಯ ಬೇಕು ಎಂದ ಐಎಂಎಫ್
ಇದರೊಂದಿಗೆ ಹೈಸ್ಪೀಡ್ ಡೀಸೆಲ್ ಬೆಲೆಯನ್ನು ಲೀಟರ್ಗೆ 17.20 ರೂ.ಗೆ ಹೆಚ್ಚಿಸಲಾಗುತ್ತಿದ್ದು, ನಂತರ ಪ್ರತಿ ಲೀಟರ್ಗೆ 280 ರೂ. ಈ ಬೆಲೆಗಳು ಫೆಬ್ರವರಿ 16 ರ ಮಧ್ಯರಾತ್ರಿ 12 ಗಂಟೆಯಿಂದ ಅನ್ವಯವಾಗಲಿದೆ. ಮೂಡೀಸ್ ಅನಾಲಿಟಿಕ್ಸ್‌ನ ಹಿರಿಯ ಅರ್ಥಶಾಸ್ತ್ರಜ್ಞರೊಬ್ಬರು ಈ ವರ್ಷದ ಮೊದಲಾರ್ಧದಲ್ಲಿ ದೇಶದ ಹಣದುಬ್ಬರವು ಸರಾಸರಿ 33 ಪ್ರತಿಶತದಷ್ಟು ಇರಬಹುದು ಎಂದು ಹೇಳಿದರು ಮತ್ತು ಐಎಂಎಫ್‌ನ ಬೇಲ್‌ಔಟ್ ಆರ್ಥಿಕತೆಯನ್ನು ಮರಳಿ ಟ್ರ್ಯಾಕ್‌ಗೆ ತರುವುದು ಅಸಂಭವವಾದ್ದು ಎಂದು ಹೇಳಿದರು.
ಆರ್ಥಿಕತೆಯನ್ನು ಮರಳಿ ಟ್ರ್ಯಾಕ್‌ಗೆ ತರಲು IMF ಬೇಲ್‌ಔಟ್ ಮಾತ್ರ ಸಾಕಾಗುವುದಿಲ್ಲ ಎಂಬುದು ನಮ್ಮ ಅಭಿಪ್ರಾಯ. ಆರ್ಥಿಕತೆಗೆ ನಿಜವಾಗಿಯೂ ಬೇಕಾಗಿರುವುದು ನಿರಂತರ ಮತ್ತು ಉತ್ತಮ ಆರ್ಥಿಕ ನಿರ್ವಹಣೆಯಾಗಿದೆ ಎಂದು ಹಿರಿಯ ಅರ್ಥಶಾಸ್ತ್ರಜ್ಞ ಕತ್ರಿನಾ ಎಲ್ ರಾಯಿಟರ್ಸ್‌ಗೆ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ