ಪಾಕಿಸ್ತಾನ ಚುನಾವಣೆ: ಅಭ್ಯರ್ಥಿ ಕಚೇರಿಯ ಹೊರಗೆ ಬಾಂಬ್​​ ಸ್ಫೋಟ, 12 ಮಂದಿ ಸಾವು

|

Updated on: Feb 07, 2024 | 3:11 PM

Pakistan Bomb blast : ಪಾಕಿಸ್ತಾನದಲ್ಲಿ ಚುನಾವಣೆ ಹತ್ತಿರವಾಗುತ್ತಿದಂತೆ, ಅನೇಕ ಅಹಿತಕರ ಘಟನೆಗಳು ನಡೆದಿದೆ. ಇಂದು (ಫೆ.7) ಬಲೂಚಿಸ್ತಾನ ಪಿಶಿನ್‌ನಲ್ಲಿರುವ ಸ್ವತಂತ್ರ ಅಭ್ಯರ್ಥಿಯ ಪಕ್ಷದ ಕಚೇರಿಯ ಹೊರಗೆ ಬಾಂಬ್​​ ಸ್ಫೋಟಗೊಂಡಿದ್ದು, ಹನ್ನೆರಡು ಜನ ಸಾವನ್ನಪ್ಪಿದ್ದಾರೆ. 30 ಜನ ಗಾಯಗಗೊಂಡಿದ್ದಾರೆ

ಪಾಕಿಸ್ತಾನ ಚುನಾವಣೆ: ಅಭ್ಯರ್ಥಿ ಕಚೇರಿಯ ಹೊರಗೆ ಬಾಂಬ್​​ ಸ್ಫೋಟ, 12 ಮಂದಿ ಸಾವು
ಸಾಂದರ್ಭಿಕ ಚಿತ್ರ
Follow us on

ಬಲೂಚಿಸ್ತಾನ, ಫೆ.7: ಪಾಕಿಸ್ತಾನದಲ್ಲಿ (Pakistan) ಚುನಾವಣೆ ವೇಳೆ ಬಾಂಬ್​​​​ಗಳ ಸದ್ದು ಹೆಚ್ಚಾಗಿದೆ. ಪಾಕಿಸ್ತಾನದ ಬಲೂಚಿಸ್ತಾನ ಪಿಶಿನ್‌ನಲ್ಲಿರುವ ಸ್ವತಂತ್ರ ಅಭ್ಯರ್ಥಿಯ ಪಕ್ಷದ ಕಚೇರಿಯ ಹೊರಗೆ ಇಂದು (ಫೆ.7) ಬಾಂಬ್​​ ಸ್ಫೋಟಗೊಂಡಿದ್ದು, ಹನ್ನೆರಡು ಜನ ಸಾವನ್ನಪ್ಪಿದ್ದಾರೆ. 30 ಜನ ಗಾಯಗಗೊಂಡಿದ್ದಾರೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ. ಪಾಕಿಸ್ತಾನದ ಪಿಶಿನ್‌ನ ಖನೋಜೈ ಪ್ರದೇಶದಲ್ಲಿ ಸ್ವತಂತ್ರ ಅಭ್ಯರ್ಥಿ ಅಸ್ಫಂಡ್ ಯಾರ್ ಖಾನ್ ಕಾಕರ್ ಅವರ ಕಚೇರಿಯ ಹೊರಗೆ ಬಾಂಬ್​​​ ಸ್ಫೋಟ ಮಾಡಲಾಗಿದೆ. ಇನ್ನು ಸ್ಫೋಟದ ಸಂದರ್ಭದಲ್ಲಿ ಸ್ವತಂತ್ರ ಅಭ್ಯರ್ಥಿ ಅಸ್ಫಂಡ್ ಯಾರ್ ಖಾನ್ ಕಾಕರ್ ಅವರು ತಮ್ಮ ಕಚೇರಿಯಲ್ಲಿ ಇರಲಿಲ್ಲ.

ಈ ಘಟನೆಯ ಕುರಿತು ಪಾಕಿಸ್ತಾನದ ಚುನಾವಣಾ ಆಯೋಗವು ಪ್ರಾಂತೀಯ ಮುಖ್ಯ ಕಾರ್ಯದರ್ಶಿ ಮತ್ತು ಪ್ರಾಂತೀಯ ಪೊಲೀಸ್ ಮುಖ್ಯಸ್ಥರಿಂದ ತಕ್ಷಣದ ವರದಿಗಳನ್ನು ಕೇಳಿದೆ. ಈ ಘಟನೆಯಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಆದೇಶವನ್ನು ನೀಡಲಾಗಿದೆ ಎಂದು ಹೇಳಲಾಗಿದೆ. ಅಸ್ಫಂಡ್ ಯಾರ್ ಖಾನ್ ಕಾಕರ್ ಅವರ ಮೋಟಾರ್‌ ಬೈಕ್‌ನಲ್ಲಿ ಬಾಂಬ್ ಇಡಲಾಗಿತ್ತು ಎಂದು ಜಿಲ್ಲಾಧಿಕಾರಿ ಜುಮಾ ದಾದ್ ತಿಳಿಸಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನ ಚುನಾವಣೆಗೆ ಕೆಲವೇ ದಿನ ಬಾಕಿ: ಬಲೂಚಿಸ್ತಾನದ ಚುನಾವಣಾ ಆಯೋಗದ ಹೊರಗೆ ಸ್ಫೋಟ

ಸ್ಫೋಟದಲ್ಲಿ ಗಾಯಗೊಂಡಿರುವ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕೆರದುಕೊಂಡು ಹೋಗಲಾಗಿದೆ. ಬಲೂಚಿಸ್ತಾನದ ಗೃಹ ಮತ್ತು ಬುಡಕಟ್ಟು ವ್ಯವಹಾರಗಳ ಉಸ್ತುವಾರಿ ಸಚಿವ ಮಿರ್ ಜುಬೇರ್ ಖಾನ್ ಜಮಾಲಿ ಸಾವು ಮತ್ತು ಗಾಯಗಳ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ ಮತ್ತು ಜಿಲ್ಲಾಧಿಕಾರಿಯಿಂದ ವರದಿಯನ್ನು ಕೇಳಿದ್ದಾರೆ.

ಪಾಕಿಸ್ತಾನ ಚುನಾವಣಾ ಆಯೋಗದ ಕಚೇರಿಯ ಹೊರಗೆ ಬಾಂಬ್ ಸ್ಫೋಟ

ಬಲೂಚಿಸ್ತಾನದ ನುಷ್ಕಿ ಜಿಲ್ಲೆಯ ಪಾಕಿಸ್ತಾನ ಚುನಾವಣಾ ಆಯೋಗದ (ಇಸಿಪಿ) ಕಚೇರಿಯ ಹೊರಗೆ ಮತ್ತೊಂದು ಬಾಂಬ್ ಸ್ಫೋಟ(Blast) ಸಂಭವಿಸಿದೆ. ಇದುವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಪೊಲೀಸ್ ಹೇಳಿಕೆಯ ಪ್ರಕಾರ, ಇಸಿಪಿ ಕಚೇರಿಯ ಗೇಟ್‌ನ ಹೊರಗೆ ಸ್ಫೋಟಿಸಲಾಗಿದೆ. ಪ್ರದೇಶವನ್ನು ಸುತ್ತುವರಿದಿದ್ದು, ಆರೋಪಿಗಳನ್ನು ಸೆರೆಹಿಡಿಯಲು ಶೋಧ ಕಾರ್ಯ ನಡೆಯುತ್ತಿದೆ. ARY ನ್ಯೂಸ್ ವರದಿ ಮಾಡಿದಂತೆ ಸ್ಫೋಟದ ಸ್ವರೂಪವನ್ನು ನಿರ್ಧರಿಸಲು ವಿಚಾರಣೆಯನ್ನು ಸಹ ಪ್ರಾರಂಭಿಸಲಾಗಿದೆ. ಸಾರ್ವತ್ರಿಕ ಚುನಾವಣೆಗೂ ಮುನ್ನ ಸಂಭವಿಸಿದ ಸ್ಫೋಟ ಇದೇ ಮೊದಲಲ್ಲ. ಕಳೆದ ವಾರ, ಪಾಕಿಸ್ತಾನದ ಚುನಾವಣಾ ಆಯೋಗದ (ECP) ಕರಾಚಿ ಕಚೇರಿಯ ಹೊರಗೆ ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:08 pm, Wed, 7 February 24