ಭಾರತ-ಅಫ್ಘಾನಿಸ್ತಾನ ಜಂಟಿ ಹೇಳಿಕೆಯಲ್ಲಿ ಕಾಶ್ಮೀರದ ಹೆಸರು ಉಲ್ಲೇಖಿಸಿದ್ದಕ್ಕೆ ಪಾಕಿಸ್ತಾನ ಆಕ್ಷೇಪ

ಭಯೋತ್ಪಾದನೆ ಕೇವಲ ಪಾಕಿಸ್ತಾನದ ಆಂತರಿಕ ಸಮಸ್ಯೆ ಎಂಬ ತಾಲಿಬಾನ್ ನಾಯಕ ಅಮೀರ್ ಖಾನ್ ಮುತ್ತಕಿ ಅವರ ಹೇಳಿಕೆಯನ್ನು ಪಾಕಿಸ್ತಾನ ಟೀಕಿಸಿದೆ. ಭಯೋತ್ಪಾದಕ ಅಂಶಗಳು ಅಫ್ಘಾನ್ ಮಣ್ಣಿನಿಂದ ಕಾರ್ಯನಿರ್ವಹಿಸುತ್ತವೆ ಎಂದು ಪಾಕಿಸ್ತಾನ ಹೇಳಿದೆ. ಪಾಕಿಸ್ತಾನ ಶಾಂತಿಯುತ, ಸ್ಥಿರ, ಪ್ರಾದೇಶಿಕವಾಗಿ ಸಂಪರ್ಕ ಹೊಂದಿದ ಮತ್ತು ಸಮೃದ್ಧ ಅಫ್ಘಾನಿಸ್ತಾನವನ್ನು ನೋಡಲು ಬಯಸುತ್ತದೆ ಎಂದು ಪಾಕ್ ಹೇಳಿದೆ.

ಭಾರತ-ಅಫ್ಘಾನಿಸ್ತಾನ ಜಂಟಿ ಹೇಳಿಕೆಯಲ್ಲಿ ಕಾಶ್ಮೀರದ ಹೆಸರು ಉಲ್ಲೇಖಿಸಿದ್ದಕ್ಕೆ ಪಾಕಿಸ್ತಾನ ಆಕ್ಷೇಪ
Jaishankar With Mawlawi Amir Khan Muttaqi

Updated on: Oct 12, 2025 | 1:14 PM

ಇಸ್ಲಾಮಾಬಾದ್, ಅಕ್ಟೋಬರ್ 12: ಭಾರತಕ್ಕೆ ಆಗಮಿಸಿರುವ ಅಫ್ಘಾನಿಸ್ತಾನದ (Afghanistan) ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಜೊತೆಗೆ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಜಂಟಿ ಪತ್ರಿಕಾ ಹೇಳಿಕೆ ನೀಡಿದ್ದರು. ಈ ವೇಳೆ ಜಮ್ಮು ಮತ್ತು ಕಾಶ್ಮೀರವನ್ನು ಉಲ್ಲೇಖಿಸಿ ಭಾರತ ಮತ್ತು ಅಫ್ಘಾನಿಸ್ತಾನದ ಜಂಟಿ ಹೇಳಿಕೆ ನೀಡಿದ್ದಕ್ಕೆ ಕೆರಳಿದ ಪಾಕಿಸ್ತಾನ ತನ್ನ ಆಕ್ಷೇಪ ವ್ಯಕ್ತಪಡಿಸಿದೆ. ಈ ಬಗ್ಗೆ ಅಫ್ಘಾನ್ ರಾಯಭಾರಿಯನ್ನು ಕರೆಸಿ ತನ್ನ ಆಕ್ಷೇಪಣೆಗಳನ್ನು ತಿಳಿಸಿದೆ.

ಜಮ್ಮು ಮತ್ತು ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗವೆಂದು ಉಲ್ಲೇಖಿಸಿರುವುದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (UNSC) ನಿರ್ಣಯದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

 

ಇದನ್ನೂ ಓದಿ: ಅಫ್ಘಾನ್ ಗಡಿಯಲ್ಲಿ ಸೇಡಿನ ದಾಳಿ; ತಾಲಿಬಾನ್​​ನಿಂದ 12 ಪಾಕಿಸ್ತಾನಿ ಸೈನಿಕರ ಹತ್ಯೆ

ಭಯೋತ್ಪಾದನೆ ಪಾಕಿಸ್ತಾನದ ಆಂತರಿಕ ಸಮಸ್ಯೆ ಎಂಬ ಅಫ್ಘಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರ ಹೇಳಿಕೆಗೂ ಪಾಕಿಸ್ತಾನ ಆಕ್ಷೇಪ ವ್ಯಕ್ತಪಡಿಸಿದೆ. ಪಾಕಿಸ್ತಾನ “ಶಾಂತಿಯುತ, ಸ್ಥಿರ, ಪ್ರಾದೇಶಿಕವಾಗಿ ಸಂಪರ್ಕ ಹೊಂದಿದ ಮತ್ತು ಸಮೃದ್ಧ ಅಫ್ಘಾನಿಸ್ತಾನವನ್ನು ನೋಡಲು ಬಯಸುತ್ತದೆ” ಎಂದು ಪಾಕ್ ಹೇಳಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ