ಪಾಕಿಸ್ತಾನದಲ್ಲಿ ಉಗ್ರರಿಂದ ಪ್ಯಾಸೆಂಜರ್​​ ರೈಲು ಹೈಜಾಕ್; 11 ಸೈನಿಕರ ಹತ್ಯೆ, 182 ಜನರು ಒತ್ತೆಯಾಳು

|

Updated on: Mar 11, 2025 | 10:26 PM

ಪಾಕಿಸ್ತಾನದಲ್ಲಿ ಉಗ್ರರ ಜೊತೆಗಿನ ಚಕಮಕಿ ವೇಳೆ 11 ಪಾಕ್​ ಯೋಧರು ಸಾವನ್ನಪ್ಪಿದ್ದಾರೆ. 182 ಪ್ರಯಾಣಿಕರನ್ನು ಒತ್ತೆಯಾಗಿರಿಸಿಕೊಂಡಿರುವ ಭಯೋತ್ಪಾದಕರು ಈ ಕೃತ್ಯ ಎಸಗಿದ್ದಾರೆ. ಪಾಕಿಸ್ತಾನದ ಪ್ಯಾಸೆಂಜರ್ ರೈಲು ಅಪಹರಣವಾಗಿದ್ದು, 9 ಬೋಗಿಗಳಲ್ಲಿ ಸುಮಾರು 400 ಪ್ರಯಾಣಿಕರನ್ನು ಹೊತ್ತ ಜಾಫರ್ ಎಕ್ಸ್‌ಪ್ರೆಸ್ ಪಾಕಿಸ್ತಾನದ ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದ ಕ್ವೆಟ್ಟಾದಿಂದ ಖೈಬರ್ ಪಖ್ತುಂಖ್ವಾದ ಪೇಶಾವರಕ್ಕೆ ತೆರಳುತ್ತಿತ್ತು.

ಪಾಕಿಸ್ತಾನದಲ್ಲಿ ಉಗ್ರರಿಂದ ಪ್ಯಾಸೆಂಜರ್​​ ರೈಲು ಹೈಜಾಕ್; 11 ಸೈನಿಕರ ಹತ್ಯೆ, 182 ಜನರು ಒತ್ತೆಯಾಳು
Pakistan Train Hijack
Follow us on

ಇಸ್ಲಾಮಾಬಾದ್, (ಮಾರ್ಚ್ 11): ಪಾಕಿಸ್ತಾನದಲ್ಲಿ ಬಲೂಚ್ ಸೇನೆಯು ಇಡೀ ರೈಲನ್ನು ಅಪಹರಿಸಿದೆ. ಈ ರೈಲಿನಲ್ಲಿ ಸುಮಾರು 400 ಜನರಿದ್ದರು. ಅವರನ್ನು ಭಯೋತ್ಪಾದಕರು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ. ಪಾಕಿಸ್ತಾನಿ ಸೇನೆಯು ರೈಲನ್ನು ಅಪಹರಣಕಾರರಿಂದ ಮುಕ್ತಗೊಳಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿತು. ಆದರೆ, ಈ ವೇಳೆ 11 ಸೈನಿಕರು ಸಾವನ್ನಪ್ಪಿದ್ದಾರೆ. ಉಗ್ರರು ರೈಲಿನಲ್ಲಿದ್ದ ಸುಮಾರು 182 ಜನರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ. ಪಾಕಿಸ್ತಾನದಲ್ಲಿ ಪ್ರತ್ಯೇಕತಾವಾದಿಗಳು ಪ್ಯಾಸೆಂಜರ್​​​​ ರೈಲನ್ನು ಹೈಜಾಕ್ ಮಾಡಿದ್ದಾರೆ. ರೈಲಿನಲ್ಲಿದ್ದ ಪಾಕಿಸ್ತಾನದ 11 ಪಾಕ್ ಸೈನಿಕರನ್ನು ಹತ್ಯೆಗೈದ ಪ್ರತ್ಯೇಕತಾವಾದಿಗಳು 182 ಪ್ರಯಾಣಿಕರನ್ನು ಒತ್ತೆಯಾಗಿರಿಸಿಕೊಂಡಿದ್ದಾರೆ. ಗುಂಡು ಹಾರಿಸಿ ಜಾಫರ್​​​​ ರೈಲು ಹೈಜಾಕ್​ ಮಾಡಿದ ಪ್ರತ್ಯೇಕತಾವಾದಿಗಳು ಈ ಕೃತ್ಯ ಎಸಗಿದ್ದಾರೆ. ಕ್ವೆಟ್ಟಾದಿಂದ ಪೇಶಾವರ್‌ಗೆ ತೆರಳುತ್ತಿದ್ದ ಜಾಫರ್ ರೈಲು ಹೈಜಾಕ್ ಮಾಡಲಾಗಿದ್ದು, ಪಾಕ್​ ಸೇನೆ ದಾಳಿಗೆ ಮುಂದಾದರೆ ಎಲ್ಲ ಪ್ರಯಾಣಿಕರನ್ನು ಕೊಂದು ಹಾಕ್ತೇವೆ ಎಂದು ಉಗ್ರರು ಪಾಕ್​ ಸೇನೆಗೆ ಎಚ್ಚರಿಕೆ ನೀಡಿದ್ದಾರೆ. ಪ್ರತ್ಯೇಕತಾವಾದಿಗಳ ಮೇಲೆ ಪ್ರಯಾಣಿಕರ ರಕ್ಷಣೆಗೆ ಪಾಕಿಸ್ತಾನದ ಸೇನೆಯಿಂದ ವೈಮಾನಿಕ ದಾಳಿ ನಡೆಸಲಾಗಿದೆ.

ಪಾಕಿಸ್ತಾನದಿಂದ ಬಲೂಚಿಸ್ತಾನ್‌ಗೆ ಸ್ವಾತಂತ್ರ್ಯ ಕೋರುವ ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಒಂದು ರೈಲಿನ ನಿಯಂತ್ರಣವನ್ನು ತೆಗೆದುಕೊಂಡು ನೂರಾರು ಪ್ರಯಾಣಿಕರನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡಿದೆ. ಒಂಬತ್ತು ಬೋಗಿಗಳಲ್ಲಿ 400ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊಂದಿದ್ದ ಜಾಫರ್ ಎಕ್ಸ್‌ಪ್ರೆಸ್, ಪಾಕಿಸ್ತಾನದ ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದ ಕ್ವೆಟ್ಟಾದಿಂದ ಖೈಬರ್ ಪಖ್ತುಂಖ್ವಾದ ಪೇಶಾವರಕ್ಕೆ ತೆರಳುತ್ತಿದ್ದಾಗ ಅದರ ಮೇಲೆ ಗುಂಡು ಹಾರಿಸಲಾಯಿತು ಎಂದು ರೈಲ್ವೆ ಅಧಿಕಾರಿಗಳು ಸುದ್ದಿ ಸಂಸ್ಥೆ ರಾಯಿಟರ್ಸ್‌ಗೆ ತಿಳಿಸಿದ್ದಾರೆ.

Pak Terror Attack

ಇದನ್ನೂ ಓದಿ: London: ಲಂಡನ್​ನಲ್ಲಿ ಸಚಿವ ಎಸ್​ ಜೈಶಂಕರ್ ಮೇಲೆ ಖಲಿಸ್ತಾನಿ ಉಗ್ರರಿಂದ ದಾಳಿಗೆ ಯತ್ನ

ಪಾಕಿಸ್ತಾನದ ಪಡೆಗಳು ಕಾರ್ಯಾಚರಣೆ ಆರಂಭಿಸಿದರೆ ಒತ್ತೆಯಾಳುಗಳನ್ನು ಕೊಲ್ಲಲಾಗುವುದು ಎಂದು ಬಿಎಲ್‌ಎ ತನ್ನ ವಕ್ತಾರ ಜೀಯಾಂಡ್ ಬಲೂಚ್ ಸಹಿ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ. ರೈಲಿನ ನಿಯಂತ್ರಣವನ್ನು ತಾವು ತೆಗೆದುಕೊಂಡಿರುವುದಾಗಿ ಉಗ್ರಗಾಮಿ ಗುಂಪು ಹೇಳಿಕೊಂಡಿದ್ದು, 11 ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಆದರೆ 182ಕ್ಕೂ ಹೆಚ್ಚು ಪ್ರಯಾಣಿಕರನ್ನು ಒತ್ತೆಯಾಳಾಗಿ ಇರಿಸಲಾಗಿದೆ ಎಂದಿದೆ.

Terrorists Attack

ಜಾಫರ್ ಎಕ್ಸ್‌ಪ್ರೆಸ್ ಪಾಕಿಸ್ತಾನದ ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದ ಕ್ವೆಟ್ಟಾದಿಂದ ಖೈಬರ್ ಪಖ್ತುಂಖ್ವಾದ ಪೇಶಾವರಕ್ಕೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ. “ನಮ್ಮ ಗುಂಪಿನವರು ರೈಲ್ವೆ ಹಳಿಯನ್ನು ಸ್ಫೋಟಿಸಿದ್ದಾರೆ. ಜಾಫರ್ ಎಕ್ಸ್‌ಪ್ರೆಸ್ ರೈಲನ್ನು ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ. ಹೋರಾಟಗಾರರು ತಕ್ಷಣ ರೈಲಿನ ನಿಯಂತ್ರಣವನ್ನು ತೆಗೆದುಕೊಂಡಿದ್ದಾರೆ. ಬಳಿಕ ಎಲ್ಲಾ ಪ್ರಯಾಣಿಕರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ” ಎಂದು ಉಗ್ರರ ಗುಂಪು ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಲಂಡನ್​ನಲ್ಲಿ ಜೈಶಂಕರ್​ ಮೇಲೆ ದಾಳಿಗೆ ಉಗ್ರರ ಯತ್ನ, ಭದ್ರತಾ ವೈಫಲ್ಯ ಖಂಡಿಸಿದ ಭಾರತ

ಈ ಹಿನ್ನೆಲೆಯಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ತುರ್ತು ಕ್ರಮಗಳನ್ನು ವಿಧಿಸಲಾಗಿದೆ. ಕಳೆದ ವರ್ಷದಿಂದ ಬಲೂಚಿಸ್ತಾನದಲ್ಲಿ ಭಯೋತ್ಪಾದಕ ದಾಳಿಗಳು ಹೆಚ್ಚಾಗಿವೆ. ನವೆಂಬರ್ 2024ರಲ್ಲಿ ಕ್ವೆಟ್ಟಾ ರೈಲು ನಿಲ್ದಾಣದಲ್ಲಿ ಆತ್ಮಹತ್ಯಾ ಬಾಂಬ್ ದಾಳಿ ನಡೆದ ನಂತರ 26 ಜನರು ಸಾವನ್ನಪ್ಪಿದ್ದರು, 62 ಜನರು ಗಾಯಗೊಂಡಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:57 pm, Tue, 11 March 25