ಪಾಕ್​ ಪ್ರಧಾನಿ ಇಮ್ರಾನ್ ಖಾನ್​ ಪತ್ನಿ ಮೇಲೆ ಗುಂಡಿನ ದಾಳಿ; ಮಾಜಿ ಪತಿಯನ್ನು ಟೀಕಿಸಿ, ಹೇಡಿಗಳ ರಾಜ್ಯವೆಂದ ರೇಹಮ್​ ಖಾನ್​

| Updated By: Lakshmi Hegde

Updated on: Jan 03, 2022 | 9:30 AM

ನನಗೆ ಗಾಯವಾಗದೆ ಇದ್ದರೂ ಘಟನೆಯಿಂದ ತುಂಬ ಕೋಪ ಬಂದಿದೆ. ಹಾಗೇ, ಜನಸಾಮಾನ್ಯರ ಬಗ್ಗೆ ಆತಂಕವಾಗುತ್ತಿದೆ. ಇದೊಂದು ಹೇಡಿತನದ ಕೃತ್ಯ ಎಂದು ಹೇಳಿದ್ದಾರೆ.  ರೇಹಮ್​ ಖಾನ್​ ಅವರು ಬ್ರಿಟಿಷ್​-ಪಾಕಿಸ್ತಾನಿ ಮೂಲದವರು.

ಪಾಕ್​ ಪ್ರಧಾನಿ ಇಮ್ರಾನ್ ಖಾನ್​ ಪತ್ನಿ ಮೇಲೆ ಗುಂಡಿನ ದಾಳಿ; ಮಾಜಿ ಪತಿಯನ್ನು ಟೀಕಿಸಿ, ಹೇಡಿಗಳ ರಾಜ್ಯವೆಂದ ರೇಹಮ್​ ಖಾನ್​
ರಹೇಮ್ ಖಾನ್​
Follow us on

ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ (Imrah Khan)​ ಮಾಜಿ ಪತ್ನಿ ರೇಹಮ್​ ಖಾನ್​ ಪ್ರಯಾಣಿಸುತ್ತಿದ್ದ ವಾಹನದ ಮೇಲೆ ಗುಂಡಿನ ದಾಳಿಯಾಗಿದೆ. ಈ ಬಗ್ಗೆ ರೇಹಮ್​ ಟ್ವೀಟ್ ಮಾಡಿ ತಿಳಿಸಿದ್ದಾರೆ. ಹಾಗೇ, ತಮ್ಮ ಮಾಜಿ ಪತಿ ಇಮ್ರಾನ್​ ಖಾನ್​ ವಿರುದ್ಧ ಕಟು ವಾಗ್ದಾಳಿ ನಡೆಸಿದ್ದಾರೆ. ಟ್ವೀಟ್ ಮಾಡಿರುವ ರೇಹಮ್​ ಖಾನ್​, ನಾನು ನನ್ನ ಸಂಬಂಧಿಯೊಬ್ಬರ ವಿವಾಹ ಸಮಾರಂಭದಿಂದ ಭಾನುವಾರ ರಾತ್ರಿ ವಾಪಸ್​ ಬರುತ್ತಿದ್ದೆ. ಆಗ ನನ್ನ ಕಾರಿನ ಮೇಲೆ ಗುಂಡಿನ ದಾಳಿಯಾಗಿದೆ. ಮೋಟರ್​ ಸೈಕಲ್​ ಮೇಲೆ ಬಂದ ಇಬ್ಬರು ಅಪರಿಚಿತರು ಗುಂಡು ಹಾರಿಸಿದ್ದಾರೆ. ನನ್ನ ವೈಯಕ್ತಿಕ ಕಾರ್ಯದರ್ಶಿ ಮತ್ತು ಚಾಲಕ ಕೂಡ ಕಾರಿನಲ್ಲಿ ಇದ್ದರು. ಅದೃಷ್ಟಕ್ಕೆ ಏನೂ ಅಪಾಯ ಆಗಲಿಲ್ಲ. ಈ ಇಮ್ರಾನ್​ ಖಾನ್​ ಆಡಳಿತದ ಹೊಸ ಪಾಕಿಸ್ತಾನ !.ಈಗ ಇದು ಹೇಡಿಗಳು, ಕೊಲೆಗೆಡುಕರು, ದುರಾಸೆಬುರುಕರ ರಾಜ್ಯವಾಗಿದೆ ಎಂದು ಹೇಳಿದ್ದಾರೆ. ಈ ಮೂಲಕ ಇಮ್ರಾನ್​ ಖಾನ್​​ರನ್ನು ಟೀಕಿಸಿದ್ದಾರೆ. 

ನನಗೆ ಗಾಯವಾಗದೆ ಇದ್ದರೂ ಘಟನೆಯಿಂದ ತುಂಬ ಕೋಪ ಬಂದಿದೆ. ಹಾಗೇ, ಜನಸಾಮಾನ್ಯರ ಬಗ್ಗೆ ಆತಂಕವಾಗುತ್ತಿದೆ. ಇದೊಂದು ಹೇಡಿತನದ ಕೃತ್ಯ ಎಂದು ಹೇಳಿದ್ದಾರೆ.  ರೇಹಮ್​ ಖಾನ್​ ಅವರು ಬ್ರಿಟಿಷ್​-ಪಾಕಿಸ್ತಾನಿ ಮೂಲದವರು. ಮಾಜಿ ಟಿವಿ ನಿರೂಪಕಿ. 2014ರ ಅಕ್ಟೋಬರ್​ 30ರಂದು ಇಮ್ರಾನ್ ಖಾನ್​ರನ್ನು ಮದುವೆಯಾಗಿದ್ದರು. ನಂತರ 2015ರಲ್ಲಿ ವಿಚ್ಛೇದನ ನೀಡಿದ್ದಾರೆ. ಅವರಂತೂ ತಮ್ಮ ಮಾಜಿ ಪತಿಯನ್ನು ಸದಾ ಟೀಕಿಸುತ್ತಾರೆ.  ಇಮ್ರಾನ್​ ಖಾನ್ ಆಡಳಿತ, ಅವರ ಸಾರ್ವಜನಿಕ ನಿಯಮಗಳ ವಿರುದ್ಧ ಪದೇಪದೆ ವಾಗ್ದಾಳಿ ನಡೆಸುತ್ತಾರೆ. 2019ರಲ್ಲಿ ಪುಲ್ವಾಮಾ ದಾಳಿಯಾದಾಗಲೂ ಕೂಡ ಇಮ್ರಾನ್​ ಖಾನ್​ರನ್ನು ಹೀಗಳೆದಿದ್ದರು. ಇಮ್ರಾನ್ ಖಾನ್​ ಮಿಲಿಟರಿಯ ಕೈಗೊಂಬೆಯಾಗಿದ್ದಾರೆ. ಸಿದ್ಧಾಂತದಲ್ಲಿ ರಾಜಿಮಾಡಿಕೊಂಡು ಅಧಿಕಾರಕ್ಕೆ ಬಂದವರು ಎಂದು ಟೀಕಿಸಿದ್ದರು.

ಇದನ್ನ ಓದಿ: ಹಿಂಸಾಚಾರಕ್ಕೆ ತಿರುಗಿದ ಉಷ್ಣ ವಿದ್ಯುತ್​ ಸ್ಥಾವರ ಕಾರ್ಮಿಕರ ಪ್ರತಿಭಟನೆ; 20 ಪೊಲೀಸರಿಗೆ ಗಾಯ, ವಾಹನಗಳೆಲ್ಲ ಧ್ವಂಸ