ಪಾಕಿಸ್ತಾನ: ಪ್ರಮಾಣ ವಚನ ಸ್ವೀಕರಿಸಿದ ಶೆಹಬಾಜ್ ಷರೀಫ್ ನೇತೃತ್ವದ ನೂತನ ಸಚಿವ ಸಂಪುಟ

| Updated By: ರಶ್ಮಿ ಕಲ್ಲಕಟ್ಟ

Updated on: Apr 19, 2022 | 1:38 PM

ಅಧ್ಯಕ್ಷ ಆರಿಫ್ ಅಲ್ವಿ ಸಮಾರಂಭದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದ ನಂತರ ಸೆನೆಟ್ ಅಧ್ಯಕ್ಷ ಸಾದಿಕ್ ಸಂಜ್ರಾನಿ ಅವರು ಹೊಸ ಮಂತ್ರಿಗಳಿಗೆ ಪ್ರಮಾಣ ವಚನ ಬೋಧಿಸಿದರು ಎಂದು ಪಾಕಿಸ್ತಾನ ಮೂಲದ ಡಾನ್ ಪತ್ರಿಕೆ ವರದಿ ಮಾಡಿದೆ

ಪಾಕಿಸ್ತಾನ: ಪ್ರಮಾಣ ವಚನ ಸ್ವೀಕರಿಸಿದ ಶೆಹಬಾಜ್ ಷರೀಫ್ ನೇತೃತ್ವದ ನೂತನ ಸಚಿವ ಸಂಪುಟ
ಪ್ರಮಾಣ ವಚನ ಸ್ವೀಕರಿಸಿದ ಪಾಕ್ ಸಚಿವ ಸಂಪುಟ
Follow us on

ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಅವರ ಹೊಸ ಕ್ಯಾಬಿನೆಟ್ ಸಚಿವರು ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.ಅಧ್ಯಕ್ಷ ಆರಿಫ್ ಅಲ್ವಿ (Arif Alvi )ಸಮಾರಂಭದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದ ನಂತರ ಸೆನೆಟ್ ಅಧ್ಯಕ್ಷ ಸಾದಿಕ್ ಸಂಜ್ರಾನಿ (Sadiq Sanjrani) ಅವರು ಹೊಸ ಮಂತ್ರಿಗಳಿಗೆ ಪ್ರಮಾಣ ವಚನ ಬೋಧಿಸಿದರು ಎಂದು ಪಾಕಿಸ್ತಾನ ಮೂಲದ ಡಾನ್ ಪತ್ರಿಕೆ ವರದಿ ಮಾಡಿದೆ. ಸೋಮವಾರ ರಾತ್ರಿ 8.30ಕ್ಕೆ (ಸ್ಥಳೀಯ ಕಾಲಮಾನ) ಕ್ಯಾಬಿನೆಟ್ ಪ್ರಮಾಣ ವಚನ ಸ್ವೀಕರಿಸಲು ನಿಗದಿಯಾಗಿತ್ತು. ಆದಾಗ್ಯೂ, ಪ್ರಧಾನಿ ಕಾರ್ಯಾಲಯವು ಅಧ್ಯಕ್ಷರ ಕಚೇರಿಯನ್ನು ಸಂಪರ್ಕಿಸಿದಾಗ, ಅಲ್ವಿ ಪ್ರಮಾಣ ವಚನ ಬೋಧಿಸಲು ನಿರಾಕರಿಸಿದರು ಎಂದು ಜಿಯೋ ಟಿವಿ ವರದಿ ಮಾಡಿದೆ. ನಂತರ, ಹೊಸ ಸಚಿವ ಸಂಪುಟಕ್ಕೆ ಪ್ರಮಾಣ ವಚನ ಬೋಧಿಸಲು ಮಂಗಳವಾರ ಹಂಗಾಮಿ ಅಧ್ಯಕ್ಷರಾಗಿ ಸೆನೆಟ್ ಅಧ್ಯಕ್ಷ ಸಂಜ್ರಾನಿ ಅವರನ್ನು ಕರೆಸಲಾಯಿತು ಎಂದು ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ.


ಖವಾಜಾ ಮುಹಮ್ಮದ್ ಆಸಿಫ್, ಅಹ್ಸಾನ್ ಇಕ್ಬಾಲ್, ರಾಣಾ ಸನಾವುಲ್ಲಾ, ಸರ್ದಾರ್ ಅಯಾಜ್ ಸಾದಿಕ್, ರಾಣಾ ತನ್ವೀರ್ ಹುಸೇನ್, ಖುರ್ರಂ ದಸ್ತಗೀರ್ ಖಾನ್, ಮರ್ರಿಯುಮ್ ಔರಂಗಜೇಬ್, ಖವಾಜಾ ಸಾದ್ ರಫೀಕ್, ಮಿಫ್ತಾ ಇಸ್ಮಾಯಿಲ್, ಮಿಯಾನ್ ಜಾವೇದ್ ಲತೀಫ್, ರಿಯಾಝ್ ಹುಸ್ಸಾಂ, ರಿಯಾಝ್ ಹುಸ್ಸಾಂ, ರಿಯಾಜ್ ಹುಸ್ಸಾಂ, ನಜೀರ್ ತರಾರ್, ಸೈಯದ್ ಖುರ್ಷಿದ್ ಅಹ್ಮದ್ ಶಾ, ಸೈಯದ್ ನವೀದ್ ಕಮರ್, ಶೆರ್ರಿ ರೆಹಮಾನ್, ಅಬ್ದುಲ್ ಖಾದಿರ್ ಪಟೇಲ್, ಶಾಜಿಯಾ ಮರ್ರಿ, ಸೈಯದ್ ಮುರ್ತಾಜಾ ಮಹಮೂದ್, ಸಾಜಿದ್ ಹುಸೇನ್ ತುರಿ, ಎಹ್ಸಾನ್-ಉರ್-ರೆಹಮಾನ್ ಮಜಾರಿ, ಅಬಿದ್ ಹುಸೇನ್, ಅಸದ್ ಮಹಮೂದ್, ಅಬ್ದುಲ್ ವಾಸಿ ಮತ್ತು ಮುಫ್ತಿ ಅಬ್ದುಲ್ ಶಕೂರ್ ಇಂದು ಪ್ರಮಾಣ ವಚನ ಸ್ವೀಕರಿಸಿದರು.

ತಲ್ಹಾ ಮಹಮೂದ್, ಸೈಯದ್ ಅಮಿನುಲ್ ಹಕ್, ಸೈಯದ್ ಫೈಸಲ್ ಅಲಿ ಸಬ್ಜ್ವಾರಿ, ಮುಹಮ್ಮದ್ ಇಸ್ರಾರ್ ತರೀನ್, ನವಾಬ್ಜಾದಾ ಶಾ ಝೈನ್ ಬುಗ್ತಿ ಮತ್ತು ತಾರಿಕ್ ಬಶೀರ್ ಚೀಮಾ ಅವರು ಫೆಡರಲ್ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಡಾ ಆಯೆಶಾ ಗೌಸ್ ಪಾಷಾ, ಹಿನಾ ರಬ್ಬಾನಿ ಖಾರ್ ಮತ್ತು ಅಬ್ದುಲ್ ರೆಹಮಾನ್ ಖಾನ್ ಕಂಜು ಅವರನ್ನು ರಾಜ್ಯ ಸಚಿವರನ್ನಾಗಿ ನೇಮಿಸುವುದು ಸಹ ದೃಢೀಕರಿಸಲ್ಪಟ್ಟಿದೆ. ಅದೇ ವೇಳೆ ಕಮರ್ ಜಮಾನ್ ಕೈರಾ, ಅಮೀರ್ ಮುಖಮ್ ಮತ್ತು ಔನ್ ಚೌಧರಿ ಅವರು ಸಲಹೆಗಾರರಾಗಿ ಸಂಪುಟದ ಭಾಗವಾಗಿದ್ದಾರೆ. ‘ಅನಾರೋಗ್ಯ’ ರಜೆಯ ಮೇಲೆ ತೆರಳಿದ್ದ ಅಧ್ಯಕ್ಷ ಡಾ ಆರಿಫ್ ಅಲ್ವಿ ಅವರ ಅನುಪಸ್ಥಿತಿಯಲ್ಲಿ ಸಂಜ್ರಾನಿ ಅವರು ಈ ಹಿಂದೆ ಪ್ರಧಾನ ಮಂತ್ರಿ ಶೆಹಬಾಜ್ ಷರೀಫ್ ಅವರಿಗೆ ಪ್ರಮಾಣ ವಚನ ಬೋಧಿಸಿದ್ದರು.

ಇದನ್ನೂ ಓದಿ: Western Kabul Blast: ಪಶ್ಚಿಮ ಕಾಬೂಲ್​ನ ಶಾಲೆಗಳ ಬಳಿ ಎರಡು ಸ್ಫೋಟ; 6 ಜನರ ಸಾವು, 12ಕ್ಕೂ ಹೆಚ್ಚು ಜನರಿಗೆ ಗಾಯ

 

Published On - 1:21 pm, Tue, 19 April 22