Western Kabul Blast: ಪಶ್ಚಿಮ ಕಾಬೂಲ್​ನ ಶಾಲೆಗಳ ಬಳಿ ಎರಡು ಸ್ಫೋಟ; 6 ಜನರ ಸಾವು, 12ಕ್ಕೂ ಹೆಚ್ಚು ಜನರಿಗೆ ಗಾಯ

Kabul Blast | Afghanistan: ಪಶ್ಚಿಮ ಕಾಬೂಲ್‌ನ ಮುಮ್ತಾಜ್ ಶಾಲೆಯ ಭೂಪ್ರದೇಶದಲ್ಲಿ ಮೊದಲ ಸ್ಫೋಟ ಸಂಭವಿಸಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಸ್ಫೋಟದಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆ. ಕಾಬೂಲ್​ನ ದಶ್ತ್-ಎ-ಬರ್ಚಿ ಜಿಲ್ಲೆಯ ಮತ್ತೊಂದು ಶಾಲೆಯ ಬಳಿ ಎರಡನೇ ಸ್ಫೋಟ ಸಂಭವಿಸಿದೆ.

Western Kabul Blast: ಪಶ್ಚಿಮ ಕಾಬೂಲ್​ನ ಶಾಲೆಗಳ ಬಳಿ ಎರಡು ಸ್ಫೋಟ; 6 ಜನರ ಸಾವು, 12ಕ್ಕೂ ಹೆಚ್ಚು ಜನರಿಗೆ ಗಾಯ
ಪ್ರಾತಿನಿಧಿಕ ಚಿತ್ರ
Follow us
| Updated By: shivaprasad.hs

Updated on:Apr 19, 2022 | 1:17 PM

ಕಾಬೂಲ್ [ಅಫ್ಘಾನಿಸ್ತಾನ]: ಪಶ್ಚಿಮ ಕಾಬೂಲ್‌ನ (Western Kabul) ಶಾಲಾ ಪ್ರದೇಶದಲ್ಲಿ ಇಂದು ಮುಂಜಾನೆ (ಏಪ್ರಿಲ್ 19) ಎರಡು ಸ್ಫೋಟಗಳು (Bomb Blast) ಸಂಭವಿಸಿವೆ. ಪರಿಣಾಮವಾಗಿ ಆರು ಜನರು ಸಾವನ್ನಪ್ಪಿದ್ದು, ಡಜನ್ಗಟ್ಟಲೆ ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮೂಲಗಳು ವರದಿ ಮಾಡಿವೆ. ಈ ಬಗ್ಗೆ ಸ್ಪುಟ್ನಿಕ್‌ ಮಾಹಿತಿಯನ್ನು ಉಲ್ಲೇಖಿಸಿ ಎಎನ್​ಐ ವರದಿ ಮಾಡಿದೆ. ಪಶ್ಚಿಮ ಕಾಬೂಲ್‌ನ ಮುಮ್ತಾಜ್ ಶಾಲೆಯ ಭೂಪ್ರದೇಶದಲ್ಲಿ ಮೊದಲ ಸ್ಫೋಟ ಸಂಭವಿಸಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಸ್ಫೋಟದಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆ. ಕಾಬೂಲ್​ನ ದಶ್ತ್-ಎ-ಬರ್ಚಿ ಜಿಲ್ಲೆಯ ಮತ್ತೊಂದು ಶಾಲೆಯ ಬಳಿ ಎರಡನೇ ಸ್ಫೋಟ ಸಂಭವಿಸಿದೆ. ಅದರಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ ಮತ್ತು 12ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ. ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

‘ಇಂದು ಮುಂಜಾನೆ ಪಶ್ಚಿಮ ಕಾಬೂಲ್‌ನ ಎರಡು ಕಡೆಗಳಲ್ಲಿ ಸ್ಫೋಟಗಳು ವರದಿಯಾಗಿವೆ. ಆಂತರಿಕ ಸಚಿವಾಲಯವು ಅಬ್ದುಲ್ ರಹೀಮ್ ಶಹೀದ್ ಹೈಸ್ಕೂಲ್ ಬಳಿ ಸ್ಫೋಟ ನಡೆದಿರುವುದನ್ನು ದೃಢಪಡಿಸಿದೆ. ಘಟನೆಯ ಬಗ್ಗೆ ತನಿಖೆಯನ್ನು ಪ್ರಾರಂಭಿಸಲಾಗಿದೆ’ ಎಂದು ಅಫ್ಘಾನಿಸ್ತಾನದ ಟೋಲೋ ನ್ಯೂಸ್ ವರದಿ ಮಾಡಿದೆ.

ಇದನ್ನೂ ಓದಿ: 10ನೇ ತರಗತಿ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿ, ತಮ್ಮ ಪಾದ ನೆಕ್ಕಿಸಿಕೊಂಡ ಮೇಲ್ವರ್ಗದ ಮಂದಿ; ಏಳು ಜನರ ಬಂಧನ

ಉಡುಪಿಯ ಶಾಂಭವಿ ಲಾಡ್ಜ್‌ನಲ್ಲಿ ಮತ್ತೊಂದು ಆತ್ಮಹತ್ಯೆ; ನೇಣು ಬಿಗಿದುಕೊಂಡು ಮೆಡಿಕಲ್ ರೆಪ್ ಆತ್ಮಹತ್ಯೆ

Published On - 1:10 pm, Tue, 19 April 22