ಅಮೆರಿಕ ಅಧ್ಯಕ್ಷ ಜೋ ಬೈಡನ್ ಕೀವ್ಗೆ ತೆರಳಲಿದ್ದಾರಾ?- ಪ್ರಶ್ನೆಗೆ ಉತ್ತರ ನೀಡಿದ ಶ್ವೇತ ಭವನ
ಅಮೆರಿಕ ಅಧ್ಯಕ್ಷ ಜೋ ಬೈಡನ್ ಉಕ್ರೇನ್ ರಾಜಧಾನಿ ಕೀವ್ಗೆ ಭೇಟಿ ಕೊಡುವ ಬಗ್ಗೆ ಯೋಚಿಸಿಲ್ಲ. ಸದ್ಯ ಅಲ್ಲಿಗೆ ಹೋಗುವುದಿಲ್ಲ ಎಂದು ಶ್ವೇತಭವನ ಸೋಮವಾರ ತಿಳಿಸಿದೆ. ರಷ್ಯಾ ಸಾರಿರುವ ಯುದ್ಧದಿಂದ ಉಕ್ರೇನ್ ಪರಿಸ್ಥಿತಿ ಹದಗೆಟ್ಟಿದೆ. ಈ ಮಧ್ಯೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಕ್ಸಿ ಯುಎಸ್ ಸಹಾಯವನ್ನು ಪದೇಪದೆ ಕೇಳುತ್ತಿದ್ದಾರೆ. ಅಲ್ಲದೆ, ಯುಎಸ್ ನೇತೃತ್ವದ ನ್ಯಾಟೋ ನಮ್ಮನ್ನು ಕೈಬಿಟ್ಟಿದೆ ಎಂದು ಆಕ್ರೋಶವನ್ನೂ ವ್ಯಕ್ತಪಡಿಸಿದ್ದಾರೆ. ಇದೆಲ್ಲದರ ಮಧ್ಯೆ ಬೈಡನ್ ಕೀವ್ಗೆ ಹೋಗಲಿದ್ದಾರಾ ಎಂಬ ಪ್ರಶ್ನೆ ಎದ್ದಿತ್ತು. ಆದರೆ ಸದ್ಯಕ್ಕಂತೂ ಅಂಥ ಭೇಟಿ […]
ಅಮೆರಿಕ ಅಧ್ಯಕ್ಷ ಜೋ ಬೈಡನ್ ಉಕ್ರೇನ್ ರಾಜಧಾನಿ ಕೀವ್ಗೆ ಭೇಟಿ ಕೊಡುವ ಬಗ್ಗೆ ಯೋಚಿಸಿಲ್ಲ. ಸದ್ಯ ಅಲ್ಲಿಗೆ ಹೋಗುವುದಿಲ್ಲ ಎಂದು ಶ್ವೇತಭವನ ಸೋಮವಾರ ತಿಳಿಸಿದೆ. ರಷ್ಯಾ ಸಾರಿರುವ ಯುದ್ಧದಿಂದ ಉಕ್ರೇನ್ ಪರಿಸ್ಥಿತಿ ಹದಗೆಟ್ಟಿದೆ. ಈ ಮಧ್ಯೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಕ್ಸಿ ಯುಎಸ್ ಸಹಾಯವನ್ನು ಪದೇಪದೆ ಕೇಳುತ್ತಿದ್ದಾರೆ. ಅಲ್ಲದೆ, ಯುಎಸ್ ನೇತೃತ್ವದ ನ್ಯಾಟೋ ನಮ್ಮನ್ನು ಕೈಬಿಟ್ಟಿದೆ ಎಂದು ಆಕ್ರೋಶವನ್ನೂ ವ್ಯಕ್ತಪಡಿಸಿದ್ದಾರೆ. ಇದೆಲ್ಲದರ ಮಧ್ಯೆ ಬೈಡನ್ ಕೀವ್ಗೆ ಹೋಗಲಿದ್ದಾರಾ ಎಂಬ ಪ್ರಶ್ನೆ ಎದ್ದಿತ್ತು. ಆದರೆ ಸದ್ಯಕ್ಕಂತೂ ಅಂಥ ಭೇಟಿ ಇಲ್ಲ ಎಂದು ಅಧಿಕೃತಗೊಳಿಸಲಾಗಿದೆ.
ಒಂದಷ್ಟು ಯುರೋಪಿಯನ್ ನಾಯಕರು ಈಗಾಗಲೇ ಕೀವ್ಗೆ ತೆರಳಿ, ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿಯವರನ್ನು ಭೇಟಿಯಾಗಿದ್ದಾರೆ. ಆದರೆ ಜೋ ಬೈಡನ್ ಭೇಟಿ ಅಷ್ಟು ಸುಲಭವಲ್ಲ. ಬೈಡನ್ ಭೇಟಿ ವಿಷಯದಲ್ಲಿ ಭದ್ರತೆ ಸವಾಲುಗಳೂ ಸಂಕೀರ್ಣವಾಗಿವೆ. ಹೀಗಾಗಿ ಜೋ ಬೈಡನ್ ಕೀವ್ಗೆ ತೆರಳುವ ಬಗ್ಗೆ ಯಾವುದೇ ಯೋಜನೆ ರೂಪುಗೊಂಡಿಲ್ಲ. ಅದರ ಬದಲು ಉನ್ನತ ಶ್ರೇಣಿಯ ಅಧಿಕಾರಿಗಳನ್ನು ಅಲ್ಲಿಗೆ ಕಳಿಸಲಾಗುವುದು. ಯುಎಸ್ ರಾಜ್ಯ ಕಾರ್ಯದರ್ಶಿ ಅಂಟೋನಿ ಬ್ಲಿಂಕನ್ ಅಥವಾ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಕೀವ್ಗೆ ತೆರಳಲಿದ್ದಾರೆ ಎಂದು ವೈಟ್ ಹೌಸ್ ತಿಳಿಸಿದೆ. ಕಳೆದ ವಾರ ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಜೋ ಬೈಡನ್, ನಾನು ಕೀವ್ಗೆ ಹೋಗುವ ಬಗ್ಗೆ ಯೋಚಿಸುತ್ತೇನೆ, ಶೀಘ್ರದಲ್ಲೇ ನಿರ್ಣಯ ತೆಗೆದುಕೊಳ್ಳುತ್ತೇನೆ ಎಂದು ಹೇಳುವ ಮೂಲಕ ಈ ವಿಚಾರದಲ್ಲಿ ಕುತೂಹಲ ಮೂಡಿಸಿದ್ದರು.
ಹಾಗೇ, ಬೈಡನ್ ಭೇಟಿಯ ಬಗ್ಗೆ ಝೆಲೆನ್ಸ್ಕಿ ಕೂಡ ಆಶಯ ವ್ಯಕ್ತಪಡಿಸಿದ್ದರು. ಯುನೈಟೆಡ್ ಸ್ಟೇಟ್ಸ್ಗೇ ನಾಯಕ ಅವರು. ಅಂದಮೇಲೆ ಇಲ್ಲೊಮ್ಮೆ ಬಂದು ಯಾಕೆ ಇಲ್ಲಿನ ಪರಿಸ್ಥಿತಿ ವೀಕ್ಷಿಸಬಾರದು? ಎಂದೂ ಪ್ರಶ್ನಿಸಿದ್ದರು. ಉಕ್ರೇನಿಯನ್ ವಿದೇಶಾಂಗ ಇಲಾಖೆ ಸಚಿವ ಡಿಮಿಟ್ರೋ ಕುಲೆಬಾ ಕೂಡ ಬೈಡನ್ರನ್ನು ಹೊಗಳಿದ್ದರು. ಬೈಡನ್ ಉಕ್ರೇನ್ಗೆ ಬೆಂಬಲ ನೀಡುತ್ತಿದ್ದಾರೆ ಎಂದು ಹೇಳಿದ್ದ ಅವರು, ಒಮ್ಮೆ ಅವರು ಇಲ್ಲಿಗೆ ಭೇಟಿ ಕೊಟ್ಟು ಹೋದರೆ ಉಕ್ರೇನ್ಗೆ ಇನ್ನಷ್ಟು ಬಲಬಂದಂತೆ ಆಗುತ್ತದೆ ಎಂದಿದ್ದರು.
ಇದನ್ನೂ ಓದಿ: ಉಂಡ ಮನೆಗೆ ಮೂರು ಬಗೆದ ನೈಜ ಕಳ್ಳ ಯಾರು?- ಸಿದ್ದರಾಮಯ್ಯ ವಿರುದ್ಧ ಮತ್ತೆ ಗುಡುಗಿದ ಹೆಚ್ಡಿ ಕುಮಾರಸ್ವಾಮಿ
Published On - 9:56 am, Tue, 19 April 22