Russia-Ukraine War: ಕೀವ್ ವಶಪಡಿಸಿಕೊಳ್ಳಲು ವಿಫಲವಾದ ಹಿನ್ನೆಲೆ; ರಷ್ಯಾದಿಂದ ಉಕ್ರೇನ್‌ಗೆ ಹೊಸ ಸೇನಾ ಕಮಾಂಡರ್ ನೇಮಕ
ಕೀವ್ ನಗರವನ್ನು ವಶಪಡಿಸಿಕೊಳ್ಳಲು ಮಾಸ್ಕೋದ ಮಿಲಿಟರಿ ವಿಫಲವಾದ ಕಾರಣ ಉಕ್ರೇನ್‌ನಲ್ಲಿ ಯುದ್ಧವನ್ನು ಮುನ್ನಡೆಸಲು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಅಲೆಕ್ಸಾಂಡರ್ ಡ್ವೊರ್ನಿಕೋವ್ ಅವರನ್ನು ಉಕ್ರೇನ್‌ನ ಯುದ್ಧ ಮುನ್ನಡೆಸಲು ಕಮಾಂಡರ್ ಆಗಿ ನೇಮಿಸಿದ್ದಾರೆ.
ಕೀವ್: ಉಕ್ರೇನ್ ಮೇಲೆ ರಷ್ಯಾದ ದಾಳಿ ಶುರುವಾಗಿ 45 ದಿನಗಳಾಗಿವೆ. ಇನ್ನೂ ರಷ್ಯಾ ಮತ್ತು ಉಕ್ರೇನ್ (Russia- Ukraine War) ನಡುವೆ ಯುದ್ಧ ಮುಂದುವರೆದಿದೆ. ಉಕ್ರೇನ್ ಬಹುಪಾಲು ನಾಶವಾಗಿದ್ದು, ಉಕ್ರೇನ್‌ನ ದೊಡ್ಡ ನಗರವಾದ ಕೀವ್ (Kyiv) ನಗರವನ್ನು ಸಂಪೂರ್ಣ ವಶಪಡಿಸಿಕೊಳ್ಳಲು ರಷ್ಯಾ ಸೇನೆಯಿಂದ ಪ್ರಯತ್ನ ಮುಂದುವರೆದಿದೆ. ಈ ನಡುವೆಯೇ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin) ಕೀವ್ ನಗರಕ್ಕೆ ಹೊಸ ಸೇನಾ ಕಮಾಂಡರ್ ನೇಮಕಗೊಳಿಸಿದ್ದಾರೆ. ಕೀವ್ ನಗರವನ್ನು ವಶಪಡಿಸಿಕೊಳ್ಳಲು ಮಾಸ್ಕೋದ ಮಿಲಿಟರಿ ವಿಫಲವಾದ ಕಾರಣ ಉಕ್ರೇನ್‌ನಲ್ಲಿ ಯುದ್ಧವನ್ನು ಮುನ್ನಡೆಸಲು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ರಷ್ಯಾದ ದಕ್ಷಿಣ ಮಿಲಿಟರಿ ಜಿಲ್ಲೆಯ ಕಮಾಂಡರ್ ಅಲೆಕ್ಸಾಂಡರ್ ಡ್ವೊರ್ನಿಕೋವ್ ಅವರನ್ನು ಹೊಸ ಸೇನಾ ಜನರಲ್ ಆಗಿ ನೇಮಿಸಿದ್ದಾರೆ.
ಡ್ವೊರ್ನಿಕೋವ್ ಅವರನ್ನು ಉಕ್ರೇನ್‌ನಲ್ಲಿ ರಷ್ಯಾದ ಮಿಲಿಟರಿ ಕಾರ್ಯಾಚರಣೆಯ ಥಿಯೇಟರ್ ಕಮಾಂಡರ್ ಎಂದು ಹೆಸರಿಸಲಾಗಿದೆ. ಮೇ 9ರಂದು ನಡೆಯಲಿರುವ ‘ವಿಕ್ಟರಿ ಡೇ’ಗೆ ಮುಂಚಿತವಾಗಿ ಪುಟಿನ್ ಅವರನ್ನು ಪ್ರತಿನಿಧಿಸುವ ಗುರಿಯನ್ನು ರಷ್ಯಾದ ಜನರಲ್ ಹೊಂದಿದ್ದಾರೆ ಎಂಬ ಊಹಾಪೋಹವಿದೆ. ಮಿಲಿಟರಿ ವಿಶ್ಲೇಷಕರು ಮತ್ತು ಗುಪ್ತಚರ ಮೌಲ್ಯಮಾಪನಗಳೊಂದಿಗೆ ಪರಿಚಿತವಾಗಿರುವ ಅಮೆರಿಕದ ಅಧಿಕಾರಿಗಳನ್ನು ಉಲ್ಲೇಖಿಸಿ CNN ವರದಿ ಮಾಡಿದೆ.
ಎರಡನೇ ಮಹಾಯುದ್ಧದಲ್ಲಿ ಜರ್ಮನಿಯ ಮೇಲೆ ಸೋವಿಯತ್ ಒಕ್ಕೂಟದ ವಿಜಯೋತ್ಸವದ ವಾರ್ಷಿಕೋತ್ಸವವನ್ನು ಗುರುತಿಸುವ ಮೂಲಕ ಮೇ 9ರಂದು ರಷ್ಯಾದಲ್ಲಿ ‘ವಿಕ್ಟರಿ ಡೇ’ ಆಚರಿಸಲಾಗುತ್ತದೆ. ಉಕ್ರೇನ್‌ನ ಸ್ಥಳೀಯ ಮಾಧ್ಯಮದ ಪ್ರಕಾರ, ಶನಿವಾರ ರಷ್ಯಾದ 13 ವೈಮಾನಿಕ ಗುರಿಗಳನ್ನು ನಾಶಪಡಿಸಲಾಗಿದೆ ಎಂದು ಉಕ್ರೇನ್‌ನ ವಾಯುಪಡೆಯು ಮಾಹಿತಿ ನೀಡಿದೆ.
“ಉಕ್ರೇನಿಯನ್ ವಾಯುಪಡೆ ರಷ್ಯಾದ 13 ವೈಮಾನಿಕ ಗುರಿಗಳನ್ನು ನಾಶಪಡಿಸಿದೆ. ಉಕ್ರೇನಿಯನ್ ಸಶಸ್ತ್ರ ಪಡೆಗಳ ವಾಯುಪಡೆಯ ಕಮಾಂಡ್ ಪ್ರಕಾರ ಏಪ್ರಿಲ್ 9ರಂದು ರಷ್ಯಾ ಐದು ಯುಎವಿಗಳು, ನಾಲ್ಕು ಕ್ಷಿಪಣಿಗಳು, ಮೂರು ವಿಮಾನಗಳು ಮತ್ತು ಒಂದು ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಲಾಗಿದೆ.
ಇದರ ಬೆನ್ನಲ್ಲೇ ಶನಿವಾರ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಕೀವ್‌ನಲ್ಲಿ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಭೇಟಿಯಾಗಿದ್ದಾರೆ. ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿಯನ್ನು ಖುದ್ದಾಗಿ ಭೇಟಿ ಮಾಡಲು ಮತ್ತು ಉಕ್ರೇನಿಯನ್ ಜನರೊಂದಿಗೆ ಒಗ್ಗಟ್ಟು ಪ್ರದರ್ಶಿಸಲು ಉಕ್ರೇನ್‌ಗೆ ಪ್ರಯಾಣಿಸಿದ್ದೇನೆ ಎಂದು ಜಾನ್ಸನ್ ಹೇಳಿದ್ದರು.
ಉಕ್ರೇನ್ ಜನರಿಗೆ ನಮ್ಮ ಬೆಂಬಲದ ಪ್ರದರ್ಶನವಾಗಿ ಇಂದು ನಾನು ಕೀವ್‌ನಲ್ಲಿ ನನ್ನ ಸ್ನೇಹಿತ ಅಧ್ಯಕ್ಷ ಝೆಲೆನ್ಸ್ಕಿಯನ್ನು ಭೇಟಿಯಾದೆ. ನಾವು ಆರ್ಥಿಕ ಮತ್ತು ಮಿಲಿಟರಿ ನೆರವಿನ ಹೊಸ ಪ್ಯಾಕೇಜ್ ಅನ್ನು ಹೊಂದಿಸುತ್ತಿದ್ದೇವೆ ಎಂದು ಜಾನ್ಸನ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ತಲೆ ಕೂದಲನ್ನು ಚಿಕ್ಕದಾಗಿ ಕಟ್ ಮಾಡಿಕೊಳ್ಳುತ್ತಿರುವ ಉಕ್ರೇನ್ ಯುವತಿಯರು; ಅತ್ಯಾಚಾರದಿಂದ ಪಾರಾಗಲು ಈ ನಿರ್ಧಾರ
Published On - 12:07 pm, Sun, 10 April 22