ವಿಶ್ವಾಸಮತ ಯಾಚನೆಗೂ ಮುನ್ನವೇ ಅಧಿಕೃತ ನಿವಾಸ ಖಾಲಿ ಮಾಡಿದ್ದರು ಇಮ್ರಾನ್ ಖಾನ್: ಪಾಕ್ ನಾಯಕನ ಟ್ವೀಟ್

ಪ್ರಧಾನಿ ಭವನದಿಂದ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಈಗಷ್ಟೇ ಬರಮಾಡಿಕೊಂಡಿದ್ದೇನೆ. ಅವರು ಹೊರನಡೆದರು,  ತಲೆಬಾಗಲಿಲ್ಲ. ಅವರು ಇಡೀ ರಾಷ್ಟ್ರವನ್ನು ಮೇಲೆತ್ತಿದ್ದರು. ಒಬ್ಬ ಪಾಕಿಸ್ತಾನಿ ಎಂದು ಹೆಮ್ಮೆಪಡುತ್ತೇನೆ ಮತ್ತು ಅವರಂತಹ ನಾಯಕನನ್ನು ಹೊಂದಿದ್ದು ಸೌಭಾಗ್ಯ..

ವಿಶ್ವಾಸಮತ ಯಾಚನೆಗೂ ಮುನ್ನವೇ ಅಧಿಕೃತ ನಿವಾಸ ಖಾಲಿ ಮಾಡಿದ್ದರು ಇಮ್ರಾನ್ ಖಾನ್: ಪಾಕ್ ನಾಯಕನ ಟ್ವೀಟ್
ಇಮ್ರಾನ್ ಖಾನ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Apr 10, 2022 | 2:15 PM

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್  (Imran Khan ) ಅವರು ಅವಿಶ್ವಾಸ ಮತದಲ್ಲಿ (No-confidence vote) ಮತ ಚಲಾಯಿಸುವ ಕೆಲವೇ ನಿಮಿಷಗಳ ಮೊದಲು ತಮ್ಮ ಅಧಿಕೃತ ನಿವಾಸವನ್ನು ಖಾಲಿ ಮಾಡಿದ್ದರು ಎಂದು  ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (PTI) ನಾಯಕ ಫೈಸಲ್ ಜಾವೇದ್ ಖಾನ್ ಅವರು 69 ವರ್ಷದ ಕ್ರಿಕೆಟಿಗ-ರಾಜಕಾರಣಿ ಬನಿ ಗಲ್ಲಾದಲ್ಲಿರುವ ತಮ್ಮ ನಿವಾಸವನ್ನು ತೊರೆದ ಬಗ್ಗೆ ಟ್ವೀಟ್ ಮಾಡಿದ್ದಾರೆ. “ಪ್ರಧಾನಿ ಭವನದಿಂದ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಈಗಷ್ಟೇ ಬರಮಾಡಿಕೊಂಡಿದ್ದೇನೆ. ಅವರು ಹೊರನಡೆದರು, ತಲೆಬಾಗಲಿಲ್ಲ. ಅವರು ಇಡೀ ರಾಷ್ಟ್ರವನ್ನು ಮೇಲೆತ್ತಿದ್ದರು. ಒಬ್ಬ ಪಾಕಿಸ್ತಾನಿ ಎಂದು ಹೆಮ್ಮೆಪಡುತ್ತೇನೆ ಮತ್ತು ಅವರಂತಹ ನಾಯಕನನ್ನು ಹೊಂದಿದ್ದು ಸೌಭಾಗ್ಯ. ಪಾಕಿಸ್ತಾನ್ ಖಾನ್ – ಇಮ್ರಾನ್ ಖಾನ್,” ಎಂದು ಪಿಟಿಐ ನಾಯಕ ಟ್ವೀಟ್ ಮಾಡಿದ್ದಾರೆ. ಇಮ್ರಾನ್ ಖಾನ್ ಅವರು ದೇಶದ ರಾಜಕೀಯದಲ್ಲಿ ಅವಿಶ್ವಾಸ ಗೊತ್ತುವಳಿಯಲ್ಲಿ ಸೋತ ಮೊದಲ ಪಾಕಿಸ್ತಾನದ ಪ್ರಧಾನಿಯಾಗಿದ್ದಾರೆ.   ಪ್ರಧಾನಿ ಇಮ್ರಾನ್ ಖಾನ್ ವಿರುದ್ಧದ ನಿರ್ಣಯವನ್ನು ಅಂಗೀಕರಿಸಲಾಗಿದೆ ಎಂದು ಸ್ಪೀಕರ್ ಅಸಾದ್ ಕೈಸರ್ ರಾಜೀನಾಮೆ ನೀಡಿದ ನಂತರ ಮತದಾನವನ್ನು ನಿರ್ವಹಿಸಿದ ಅಯಾಜ್ ಸಾದಿಕ್ ಅವರು ಸದನದಲ್ಲಿ ಘೋಷಿಸಿದರು. ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮತದಾನದ ಸಮಯದಲ್ಲಿ ಖಾನ್ ಅವರು ಇರಲಿಲ್ಲ. ಅವರ ಶಾಸಕರು ಮತದಾನದ ಸಮಯದಲ್ಲಿ ವಾಕ್‌ಔಟ್ ಮಾಡಿದರು.

ಅವಿಶ್ವಾಸ ಮತದ ವೇಳೆ ಭಿನ್ನಮತೀಯ ಶಾಸಕರು ಹಾಜರಿದ್ದರು. ಮಾಜಿ ಕ್ರಿಕೆಟ್ ನಾಯಕ ಇಮ್ರಾನ್ ಖಾನ್ ಮೂರು ವರ್ಷ, ಏಳು ತಿಂಗಳು ಮತ್ತು 23 ದಿನಗಳ ಕಾಲ ದೇಶವನ್ನು ಆಳಿದರು. ಈ ಅಧಿಕಾರಾವಧಿಯು ಆರ್ಥಿಕ ಕುಸಿತದಿಂದ ಕೂಡಿದೆ. ಚುನಾವಣಾ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತವೆ.

ಕಳೆದ ವರ್ಷ ಐಎಸ್ಐ ಗೂಢಚಾರಿಕೆ ಸಂಸ್ಥೆಯ ಮುಖ್ಯಸ್ಥರ ನೇಮಕವನ್ನು ಅನುಮೋದಿಸಲು ನಿರಾಕರಿಸಿದ ನಂತರ ಖಾನ್ ಅವರು ಪ್ರಬಲ ಪಾಕಿಸ್ತಾನಿ ಸೇನೆಯ ಬೆಂಬಲವನ್ನು ಕಳೆದುಕೊಂಡರು. ಅವರು ಒಪ್ಪಿಗೆ ನೀಡಿದರೂ ಮೂರು ದಶಕಗಳಿಗೂ ಹೆಚ್ಚು ಕಾಲ ದೇಶವನ್ನು ಆಳಿದ ಶಕ್ತಿಶಾಲಿ ಸೈನ್ಯದೊಂದಿಗಿನ ಅವರ ಸಂಬಂಧವನ್ನು ಅದು ಹದಗೆಡಿಸಿತು.

ಪಾಕಿಸ್ತಾನದಲ್ಲಿ ಶನಿವಾರ ಮತ್ತು ಭಾನುವಾರ (ಏಪ್ರಿಲ್ 9-10) ಹಲವು ನಾಟಕೀಯ ಬೆಳವಣಿಗೆಗಳು ನಡೆದವು. ವಿಶ್ವಾಸಮತಯಾಚನೆಗೆ ಮಧ್ಯರಾತ್ರಿ ಸಮಯ ನಿಗದಿಪಡಿಸಲಾಗಿತ್ತು. ಕಲಾಪವನ್ನು ಪದೇಪದೆ ಮುಂದೂಡಿದ್ದರಿಂದ ಪ್ರತಿಪಕ್ಷಗಳು ಗದ್ದಲ ಎಬ್ಬಿಸಿದವು. ಸಂಸತ್‌ನ ಸ್ಪೀಕರ್ ಅಸದ್ ಕೈಸರ್ ಮತ್ತು ಡೆಪ್ಯುಟಿ ಸ್ಪೀಕರ್ ಖಾಸಿಂ ಖಾನ್ ಸೂರಿ ಸಹ ರಾಜೀನಾಮೆ ಸಲ್ಲಿಸಿದರು. ಇದಕ್ಕೂ ಮುನ್ನ ಅವಿಶ್ವಾಸ ನಿರ್ಣಯದ ಮೇಲೆ ಮತದಾನ ಪ್ರಕ್ರಿಯೆ ಆರಂಭವಾದಾಗಲೇ ಆಡಳಿತಾರೂಢ ಪಿಟಿಐ ಪಕ್ಷದ ಸಂಸದರು ಸಭಾತ್ಯಾಗ ಮಾಡಿದರು.

ಬಹುಮತ ಸಾಬೀತುಪಡಿಸುವಲ್ಲಿ ವಿಫಲರಾಗಿ ಅಧಿಕಾರ ಕಳೆದುಕೊಂಡ ಇಮ್ರಾನ್‌ ಖಾನ್ ಪಾಕಿಸ್ತಾನದ ಸಂಸತ್ ಭವನದಲ್ಲಿರುವ ಪ್ರಧಾನಿ ಕಚೇರಿಯಿಂದ ನಿರ್ಗಮಿಸಿದರು. ನಂತರ ಪ್ರಧಾನಿಯ ಅಧಿಕೃತ ನಿವಾಸದಿಂದಲೂ ಹೊರ ನಡೆದರು.

ಹುಚ್ಚನ ಕೈಲಿ ಬೆಂಕಿಕಡ್ಡಿ: ಇಮ್ರಾನ್ ಖಾನ್ ವಿರುದ್ಧ ವಾಗ್ದಾಳಿ

ಪಾಕಿಸ್ತಾನದ ವಿರೋಧ ಪಕ್ಷದ ನಾಯಕಿ ಮರ್ಯಮ್ ನವಾಜ್ ಷರೀಫ್ ಸಹ ಇಮ್ರಾನ್ ಖಾನ್ ವಿರುದ್ಧ ವಾಗ್ದಾಳಿ ನಡೆಸಿದರು. ಭಯದಿಂದ ಬಳಲುತ್ತಿರುವ ಮಾನಸಿಕ ಅಸ್ವಸ್ಥನ ಕೈಯಲ್ಲಿ ಬೆಂಕಿಕಡ್ಡಿ ಇದೆ, ಅವನು ಎಲ್ಲಾ ಕಡೆ ಬೆಂಕಿ ಹಚ್ಚಲು ಬಯಸುತ್ತಾನೆ, ಅವನು ಮತ್ತಷ್ಟು ಹಾನಿ ಮಾಡುವ ಮೊದಲು ಅವನನ್ನು ಬಂಧಿಸಬೇಕು. ಅಂತಹವನ ಇಚ್ಛೆಗೆ 22 ಕೋಟಿ ಜನರ ಜೀವನ ನೀಡಲು ಸಾಧ್ಯವಿಲ್ಲ ಎಂದು ಮರ್ಯಮ್ ಆಕ್ರೋಶ ವ್ತಕ್ತಪಡಿಸಿದ್ದರು.

ಕಲಾಪವನ್ನು ಪದೇಪದೇ ಮುಂದೂಡಿದ ಸ್ಪೀಕರ್ ಅಸಾದ್ ಕೈಸರ್ ವಿರುದ್ಧವೂ ವಿರೋಧ ಪಕ್ಷಗಳು ವಾಗ್ದಾಳಿ ನಡೆಸಿದವು. ಇಮ್ರಾನ್ ಖಾನ್​ಗೆ ಸ್ಪೀಕರ್ ನಿಷ್ಠೆ ತೋರುತ್ತಿದ್ದಾರೆ, ಪಾಕಿಸ್ತಾನಕ್ಕೆ ಅವರ ನಿಷ್ಠೆ ವ್ಯಕ್ತವಾಗುತ್ತಿಲ್ಲ. ಎಂದು ಮರ್ಯಮ್ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿIndia Pakistan: ಪಾಕಿಸ್ತಾನದ ರಾಜಕೀಯ ವಿದ್ಯಮಾನ; ಭಾರತದ ಮೇಲೇನು ಪರಿಣಾಮ

Published On - 1:56 pm, Sun, 10 April 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್