ಯಾರಾಗ್ತಾರೆ ಪಾಕಿಸ್ತಾನದ ಮುಂದಿನ ಪ್ರಧಾನಿ?- ರೇಸ್​​ನಲ್ಲಿದ್ದಾರೆ ಶೆಹಬಾಜ್​ ಶರೀಫ್​- ಶಾ ಮೊಹಮ್ಮದ್​ ಖುರೇಶಿ

ಇಮ್ರಾನ್ ಖಾನ್​ ಸರ್ಕಾರವನ್ನು ಉರುಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಈ ಶೆಹಬಾಜ್ ಶರೀಫ್​. ಇವರ ನೇತೃತ್ವದಲ್ಲಿಯೇ ಪ್ರತಿಪಕ್ಷಗಳು ವಿವಿಧ ತಂತ್ರ ರೂಪಿಸಿದ್ದು. ಹೀಗಾಗಿ ಎಲ್ಲ ವಿಪಕ್ಷಗಳೂ ಜಂಟಿಯಾಗಿ ಶರೀಫ್​ ಅವರೇ ತಮ್ಮ ಪ್ರಧಾನಿ ಅಭ್ಯರ್ಥಿ ಎಂದು ಒಪ್ಪಿಕೊಂಡಿವೆ.

ಯಾರಾಗ್ತಾರೆ ಪಾಕಿಸ್ತಾನದ ಮುಂದಿನ ಪ್ರಧಾನಿ?- ರೇಸ್​​ನಲ್ಲಿದ್ದಾರೆ ಶೆಹಬಾಜ್​ ಶರೀಫ್​- ಶಾ ಮೊಹಮ್ಮದ್​ ಖುರೇಶಿ
ಶೆಹಬಾಜ್ ಶರೀಫ್​ ಮತ್ತು ಶಾ ಮೊಹಮ್ಮದ್​ ಖುರೇಶಿ
Follow us
TV9 Web
| Updated By: Lakshmi Hegde

Updated on: Apr 10, 2022 | 4:27 PM

ಇಮ್ರಾನ್​ ಖಾನ್ ಪಾಕಿಸ್ತಾನದ ಪ್ರಧಾನಿ ಹುದ್ದೆಯಿಂದ ನಿನ್ನೆ ರಾತ್ರಿ ಕೆಳಗಿಳಿದ ಬೆನ್ನಲ್ಲೇ ದೇಶಕ್ಕೆ ಬೇರೆ ಪ್ರಧಾನಿಯನ್ನು ನೇಮಕ ಮಾಡುವ ಪ್ರಕ್ರಿಯೆ ಚುರುಕುಗೊಂಡಿದೆ. ಪ್ರತಿಪ್ರಕ್ಷಗಳೆಲ್ಲ ಸೇರಿ ಪಾಕಿಸ್ತಾನ ಮುಸ್ಲಿಂ ಲೀಗ್​-ನವಾಜ್​​ ಪಕ್ಷದ ನಾಯಕ ಶೆಹಬಾಜ್​ ಶರೀಫ್​​ರನ್ನು ಪ್ರಧಾನಿ ಹುದ್ದೆಗೆ ನಾಮನಿರ್ದೇಶನ ಮಾಡಿವೆ. ಇತ್ತ ಇಮ್ರಾನ್ ಖಾನ್​​ರ ಪಾಕಿಸ್ತಾನ್​ ತೆಹ್ರೀಕ್​ ಇ ಇನ್ಸಾಫ್​ ಪಾರ್ಟಿ, ಶಾ ಮೊಹಮ್ಮದ್ ಖುರೇಶಿ  ತಮ್ಮ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದೆ. ಸದ್ಯ ಪ್ರಧಾನಿ ಹುದ್ದೆಯ ರೇಸ್​​ನಲ್ಲಿ ಶೆಹಬಾಜ್​ ಶರೀಫ್​ ಮತ್ತು ಖುರೇಷಿ ಇದ್ದು, ನಾಳೆಯಷ್ಟರಲ್ಲಿ ನೂತನ ಪಿಎಂ ಆಯ್ಕೆ ಚುನಾವಣೆ ನಡೆಯಲಿದೆ. ಶೆಹಬಾಜ್​ ಶರೀಫ್​ ಅವರು ಪಾಕಿಸ್ತಾನದ ಮಾಜಿ ಪ್ರಧಾನಿ (ಮೂರು ಸಲ ಪ್ರಧಾನಿಯಾದವರು) ನವಾಜ್​ ಶರೀಫ್​ರ ತಮ್ಮ. ಪಾಕಿಸ್ತಾನದ ಮುಂದಿನ ಪ್ರಧಾನಮಂತ್ರಿ ಇವರೇ ಎಂದೇ ಹೇಳಲಾಗುತ್ತಿದೆ.  

ಪ್ರತಿಪಕ್ಷಗಳೆಲ್ಲ ಸೇರಿ ತಮ್ಮನ್ನು ಪ್ರಧಾನಿ ಹುದ್ದೆಗೆ ನಾಮನಿರ್ದೇಶನ ಮಾಡಿದ ಬಳಿಕ ಟ್ವೀಟ್ ಮಾಡಿದ ಶೆಹಬಾಜ್ ಶರೀಫ್​, ನಾನು ನಾಗರಿಕ ಸಮಾಜಕ್ಕೆ, ಮಾಧ್ಯಮದವರಿಗೆ, ವಕೀಲರಿಗೆ, ನನ್ನ ಸಹೋದರ ನವಾಜ್​ ಶರೀಫ್​ ಸೇರಿ ಎಲ್ಲರಿಗೂ ವಿಶೇಷ ಕೃತಜ್ಞತೆ ಸಲ್ಲಿಸುತ್ತೇನೆ. ಸಂವಿಧಾನಕ್ಕೆ ಬದ್ಧವಾಗಿ ನಿಂತ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದ್ದಾರೆ.  ಇನ್ನು ನವಾಜ್ ಶರೀಫ್​ ಪಾಕಿಸ್ತಾನದಲ್ಲಿ ಮೂರು ಸಲ ಪ್ರಧಾನಿಯಾದರೂ ಕೊನೆಗೆ ಸುತ್ತಿಕೊಂಡಿದ್ದ ಭ್ರಷ್ಟಾಚಾರ ಆರೋಪ. ಅವರನ್ನು 2017ರಲ್ಲಿ ಪ್ರಧಾನಿ ಹುದ್ದೆಯಿಂದ ವಜಾಗೊಳಿಸಲಾಯಿತು. ಜೈಲಿಗೂ ಸೇರಿದ್ದರು. ಸದ್ಯ ಅವರು ಲಂಡನ್​ನಲ್ಲಿ ಆಶ್ರಯ ಪಡೆದಿದ್ದಾರೆ.

ಇಮ್ರಾನ್ ಖಾನ್​ ಸರ್ಕಾರವನ್ನು ಉರುಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಈ ಶೆಹಬಾಜ್ ಶರೀಫ್​. ಇವರ ನೇತೃತ್ವದಲ್ಲಿಯೇ ಪ್ರತಿಪಕ್ಷಗಳು ವಿವಿಧ ತಂತ್ರ ರೂಪಿಸಿದ್ದು. ಹೀಗಾಗಿ ಎಲ್ಲ ವಿಪಕ್ಷಗಳೂ ಜಂಟಿಯಾಗಿ ಶರೀಫ್​ ಅವರೇ ತಮ್ಮ ಪ್ರಧಾನಿ ಅಭ್ಯರ್ಥಿ ಎಂದು ಒಪ್ಪಿಕೊಂಡಿವೆ. ಹಾಗೇ, ಶರೀಫ್ ಪ್ರಧಾನಿಯಾದರೆ, ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಮುಖ್ಯಸ್ಥ ಬಿಲಾವಾಲ್​ ಬುಟ್ಟೋ ಜರ್ದಾರಿ ವಿದೇಶಾಂಗ ವ್ಯವಹಾರಗಳ ಇಲಾಖೆ ಸಚಿವರಾಗಿ ನೇಮಕಗೊಳ್ಳಲಿದ್ದಾರೆ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಪಾಕಿಸ್ತಾನದ ಮಾಧ್ಯಮವೊಂದು ವರದಿ ಮಾಡಿದ್ದಾಗಿ ಪಿಟಿಐ ತಿಳಿಸಿದೆ.

ಖುರೇಶಿ ನಾಮ ನಿರ್ದೇಶನ

ಇತ್ತ ಇಮ್ರಾನ್ ಖಾನ್ ಪಕ್ಷವಾದ ಪಾಕಿಸ್ತಾನ್​ ತೆಹ್ರೀನ್​ ಇ ಇನ್ಸಾಫ್​ ಮೊಹಮ್ಮದ್ ಖುರೇಶಿಯವರನ್ನು ಪ್ರಧಾನಿ ಅಭ್ಯರ್ಥಿಯೆಂದು ಘೋಷಿಸಿದೆ. ಇವರು ಇಮ್ರಾನ್ ಖಾನ್ ಸರ್ಕಾರದಲ್ಲಿ ವಿದೇಶಾಂಗ ವ್ಯವಹಾರಗಳ ಇಲಾಖೆ ಸಚಿವರಾಗಿದ್ದರು. ನಿನ್ನೆ ಅವಿಶ್ವಾಸ ನಿರ್ಣಯ ಮಂಡನೆ ವೇಳೆ ಸದನದಿಂದ ಹೊರನಡೆದಿದ್ದು. ಅವರ ಈ ನಡೆಯನ್ನು ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಮುಖ್ಯಸ್ಥ ಬುಟ್ಟೋ ಟೀಕಿಸಿದ್ದಾರೆ.

ಇದನ್ನೂ ಓದಿ: Srinagar Encounter: ಶ್ರೀನಗರದಲ್ಲಿ ಸಿಆರ್​​ಪಿಎಫ್ ಸಿಬ್ಬಂದಿ ಮೇಲೆ ದಾಳಿ ಮಾಡಿದ್ದ ಇಬ್ಬರು ಪಾಕಿಸ್ತಾನಿ ಉಗ್ರರ ಎನ್​ಕೌಂಟರ್​

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?