ಭಾರತ-ಪಾಕಿಸ್ತಾನ ಗಡಿಯಲ್ಲಿ ಮಗುವಿಗೆ ಜನ್ಮ ನೀಡಿದ ಪಾಕ್​ ಮಹಿಳೆ; ನವಜಾತ ಶಿಶುವಿಗೆ ಬಾರ್ಡರ್​ ಎಂದು ಹೆಸರಿಟ್ಟ ದಂಪತಿ !

| Updated By: Lakshmi Hegde

Updated on: Dec 06, 2021 | 12:10 PM

ಬಾಲಂ ರಾಮ್​ ಹೊರತಾಗಿ ಇದೇ ಗಡಿಯಲ್ಲಿ ಸಿಲುಕಿರುವ ಲಾಗ್ಯಾ ರಾಮ್​​ ತನ್ನ ಮಗುವಿಗೆ ಭರತ್​ ಎಂದು ನಾಮಕರಣ ಮಾಡಿದ್ದಾರೆ. ಲಾಗ್ಯಾ ರಾಮ್​ ತನ್ನ ಸೋದರನನ್ನು ಭೇಟಿ ಮಾಡಲು 2020ರಲ್ಲಿ ಜೋಧ್​ಪುರಕ್ಕೆ ತೆರಳಿದ್ದರು. ಅಲ್ಲಿಯೇ ಪತ್ನಿ ಮಗುವಿಗೆ ಜನ್ಮ ನೀಡಿದ್ದರು.

ಭಾರತ-ಪಾಕಿಸ್ತಾನ ಗಡಿಯಲ್ಲಿ ಮಗುವಿಗೆ ಜನ್ಮ ನೀಡಿದ ಪಾಕ್​ ಮಹಿಳೆ; ನವಜಾತ ಶಿಶುವಿಗೆ ಬಾರ್ಡರ್​ ಎಂದು ಹೆಸರಿಟ್ಟ ದಂಪತಿ !
ನವಜಾತ ಶಿಶುವಿನೊಂದಿಗೆ ಬಾಲಂ ರಾಮ್​
Follow us on

ಕಳೆದ 70 ದಿನಗಳಿಂದಲೂ ಭಾರತ-ಪಾಕಿಸ್ತಾನ ಅಟ್ಟಾರಿ ಗಡಿಯಲ್ಲಿ ಸಿಲುಕಿರುವ ಪಾಕಿಸ್ತಾನಿ ದಂಪತಿ, ತಮ್ಮ ನವಜಾತ ಶಿಶುವಿಗೆ ‘ಬಾರ್ಡರ್​’ ಎಂದು ಹೆಸರಿಟ್ಟಿದ್ದಾರೆ. ಗಡಿಯಲ್ಲೇ ವಾಸವಾಗಿರುವ ನಿಂಬು ಬಾಯಿ ಮತ್ತು ಬಾಲಂ ರಾಮ್​ ದಂಪತಿಗೆ ಡಿಸೆಂಬರ್​ 2ರಂದು ಮಗು ಜನಿಸಿದೆ. ಪಾಕಿಸ್ತಾನದ ಪಂಜಾಬ್​ ಪ್ರಾಂತ್ಯದ ರಾಜನ್​ಪುರ ಜಿಲ್ಲೆಯವರಾಗಿರುವ ಇವರು, ಸುಮಾರು 97 ಪಾಕಿಸ್ತಾನಿ ಪ್ರಜೆಗಳೊಟ್ಟಿಗೆ ಕಳೆದ 70 ದಿನಗಳಿಂದಲೂ ಇಲ್ಲಿಯೇ ಇದ್ದಾರೆ.  ನಿಂಬು ಬಾಯಿಗೆ ಡಿಸೆಂಬರ್​ 2ರಂದು ಹೆರಿಗೆ ನೋವು ಕಾಣಿಸಿಕೊಂಡಿತ್ತು. ಅಲ್ಲಿನ ಸ್ಥಳೀಯ ಹಳ್ಳಿಗಳ ಮಹಿಳೆಯರೇ ಆಕೆಗೆ ಸಹಾಯ ಮಾಡಿದ್ದರು. ಮಹಿಳೆ ಮತ್ತು ಆಕೆಯ ನವಜಾತ ಶಿಶುವಿಗೆ ವೈದ್ಯಕೀಯ ಸೌಲಭ್ಯವನ್ನೂ ಒದಗಿಸಿಕೊಟ್ಟಿದ್ದರು. 

ಅವರು ಗಡಿಯಲ್ಲಿ ಸಿಲುಕಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಬಾಲಂ ರಾಮ್​, ನಾವು ತೀರ್ಥಯಾತ್ರೆಗಾಗಿ ಭಾರತಕ್ಕೆ ಬಂದಿದ್ದೆವು. ಆದರೆ ಇದೀಗ ವಾಪಸ್​ ಹೋಗಲು ಗಡಿಯ ಬಳಿ ಬಂದರೆ ಒಂದಷ್ಟು ದಾಖಲೆಗಳನ್ನು ಕೇಳುತ್ತಿದ್ದಾರೆ. ಆ ಅಗತ್ಯ ದಾಖಲೆಗಳು ನಮ್ಮ ಬಳಿ ಇಲ್ಲ. ಇಲ್ಲೀಗ ನಾವು 97 ಮಂದಿ ಸಿಲುಕಿದ್ದೇವೆ. ಅದರಲ್ಲಿ 47 ಮಂದಿ ಮಕ್ಕಳೇ ಆಗಿದ್ದಾರೆ. ಅವರಲ್ಲೂ ಆರು ಮಕ್ಕಳು ಒಂದುವರ್ಷಕ್ಕಿಂತಲೂ ಕೆಳಗಿನವು. ಭಾರತದಲ್ಲಿ ಹುಟ್ಟಿವೆ ಎಂದು ತಿಳಿಸಿದ್ದಾರೆ.

ಬಾಲಂ ರಾಮ್​ ಹೊರತಾಗಿ ಇದೇ ಗಡಿಯಲ್ಲಿ ಸಿಲುಕಿರುವ ಲಾಗ್ಯಾ ರಾಮ್​​ ತನ್ನ ಮಗುವಿಗೆ ಭರತ್​ ಎಂದು ನಾಮಕರಣ ಮಾಡಿದ್ದಾರೆ. ಲಾಗ್ಯಾ ರಾಮ್​ ತನ್ನ ಸೋದರನನ್ನು ಭೇಟಿ ಮಾಡಲು 2020ರಲ್ಲಿ ಜೋಧ್​ಪುರಕ್ಕೆ ತೆರಳಿದ್ದರು. ಅಲ್ಲಿಯೇ ಪತ್ನಿ ಮಗುವಿಗೆ ಜನ್ಮ ನೀಡಿದ್ದರು. ಆ ಮಗುವಿಗೆ ಭರತ್ ಎಂದು ಹೆಸರಿಡಲಾಗಿದೆ. ಜೋಧ್​ಪುರದಿಂದ ಅಟ್ಟಾರಿ ಗಡಿಯವರೆಗೆ ಬಂದರೆ ಅವರಿಗೂ ಇನ್ನೂ ಪಾಕ್​ಗೆ ಮರಳಲು ಸಾಧ್ಯವಾಗಲಿಲ್ಲ.  ಇನ್ನೂ ಹಲವರು ಇದೇ ಗಡಿಯ ಅಂತಾರಾಷ್ಟ್ರೀಯ ಚೆಕ್​ಪೋಸ್ಟ್​ ಬಳಿ ಬೀಡುಬಿಟ್ಟಿದ್ದಾರೆ. ಪಾಕಿಸ್ತಾನಿ ರೇಂಜರ್​ಗಳು ಅಗತ್ಯ ದಾಖಲೆ ತೋರಿಸಿದ ವಿನಃ ಯಾರನ್ನೂ ಬಿಡುವುದಿಲ್ಲ ಎನ್ನುತ್ತಿದ್ದಾರೆ. ಕೊರೊನಾ ಕಾರಣಕ್ಕೆ ಗಡಿ ನಿಯಮಗಳಲ್ಲೆ ಇನ್ನಷ್ಟು ಬಿಗಿಯಾಗಿದ್ದು, ಇವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಇದನ್ನೂ ಓದಿ: ಶಾಲೆ, ಕಾಲೇಜುಗಳಲ್ಲಿ ಕೋವಿಡ್ ಸೋಂಕು ಹೆಚ್ಚಳ ಆತಂಕ ತಂದಿದೆ: ಅಲಾರಂ ಬೆಲ್​​ ಹೊಡೆದ ಶಿಕ್ಷಣ ಸಚಿವ ಬಿ ಸಿ ನಾಗೇಶ್