Omicron Variant ಒಮಿಕ್ರಾನ್ ರೂಪಾಂತರದ ಸಮುದಾಯ ಪ್ರಸರಣ ದೃಢೀಕರಿಸಿದ ಆಸ್ಟ್ರೇಲಿಯಾ

ನ್ಯೂ ಸೌತ್ ವೇಲ್ಸ್ ರಾಜ್ಯವು 15 ಒಮಿಕ್ರಾನ್ ಸೋಂಕುಗಳನ್ನು ದೃಢಪಡಿಸಿದೆ ಮತ್ತು ಹೆಚ್ಚಿನ ಪ್ರಕರಣಗಳ ಸಾಧ್ಯತೆಗಳಿವೆ ಎಂದು ಚಾಂಟ್ ಹೇಳಿದರು. ದಕ್ಷಿಣ ಆಫ್ರಿಕಾದಲ್ಲಿದ್ದ ದೋಹಾದಿಂದ ಬಂದ ವಿಮಾನದಲ್ಲಿ ಸೋಂಕಿತ ಪ್ರಯಾಣಿಕರಿಂದ ಏಕಾಏಕಿ ಸೋಂಕು ಕಾಣಿಸಿಕೊಂಡಿದೆ.

Omicron Variant ಒಮಿಕ್ರಾನ್ ರೂಪಾಂತರದ ಸಮುದಾಯ ಪ್ರಸರಣ ದೃಢೀಕರಿಸಿದ ಆಸ್ಟ್ರೇಲಿಯಾ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Dec 06, 2021 | 3:29 PM

ದೆಹಲಿ: ಆಸ್ಟ್ರೇಲಿಯಾದ ಅತಿದೊಡ್ಡ ನಗರವಾದ ಸಿಡ್ನಿಯಲ್ಲಿ ಐದು ಜನರು ಸ್ಥಳೀಯವಾಗಿ ಕೊರೊನಾವೈರಸ್ ಒಮಿಕ್ರಾನ್ ರೂಪಾಂತರಿಯಿಂದ (Omicron Variant) ಸೋಂಕಿತರಾಗಿದ್ದಾರೆ ಎಂದು ನ್ಯೂ ಸೌತ್ ವೇಲ್ಸ್ (New South Wales) ಆರೋಗ್ಯ ಅಧಿಕಾರಿಗಳು ದೃಢಪಡಿಸಿದ್ದಾರೆ. ಈ ಪ್ರಕರಣಗಳು ಸಿಡ್ನಿಯ ಪಶ್ಚಿಮ ಉಪನಗರಗಳಲ್ಲಿ ಎರಡು ಶಾಲೆಗಳು ಮತ್ತು ಕ್ಲೈಂಬಿಂಗ್ ಜಿಮ್‌ಗೆ ಸಂಬಂಧಿಸಿವೆ. ಇದು ಆಸ್ಟ್ರೇಲಿಯಾದ ರಾಜಧಾನಿ ಪ್ರದೇಶದಲ್ಲಿ ದೃಢಪಡಿಸಿದ ಒಮಿಕ್ರಾನ್ ಸೋಂಕಿನ ಮೂಲವಾಗಿರಬಹುದು ಎಂದು ಎನ್ಎಸ್​​ಡಬ್ಲ್ಯೂ(NSW) ಮುಖ್ಯ ಆರೋಗ್ಯ ಅಧಿಕಾರಿ ಕೆರ್ರಿ ಚಾಂಟ್ (Kerry Chant) ಭಾನುವಾರ ಹೇಳಿದ್ದಾರೆ. ಸ್ಥಳಗಳಿಗೆ ಸಂಬಂಧಿಸಿದ ಹಲವಾರು ಇತರ ಪ್ರಕರಣಗಳಿಗೆ ತುರ್ತು ಜೀನೋಮ್ ಪರೀಕ್ಷೆ ನಡೆಯುತ್ತಿದೆ. ಮುಂಬರುವ ದಿನಗಳಲ್ಲಿ ಇದು ಲಭ್ಯವಿರುತ್ತದೆ ಎಂದು ಅವರು ವಿಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.  ನ್ಯೂ ಸೌತ್ ವೇಲ್ಸ್ ರಾಜ್ಯವು 15 ಒಮಿಕ್ರಾನ್ ಸೋಂಕುಗಳನ್ನು ದೃಢಪಡಿಸಿದೆ ಮತ್ತು ಹೆಚ್ಚಿನ ಪ್ರಕರಣಗಳ ಸಾಧ್ಯತೆಗಳಿವೆ ಎಂದು ಚಾಂಟ್ ಹೇಳಿದರು. ದಕ್ಷಿಣ ಆಫ್ರಿಕಾದಲ್ಲಿದ್ದ ದೋಹಾದಿಂದ ಬಂದ ವಿಮಾನದಲ್ಲಿ ಸೋಂಕಿತ ಪ್ರಯಾಣಿಕರಿಂದ ಏಕಾಏಕಿ ಸೋಂಕು ಕಾಣಿಸಿಕೊಂಡಿದೆ. ದಕ್ಷಿಣ ಆಫ್ರಿಕಾದಲ್ಲಿ ಮೊದಲು ಗುರುತಿಸಲಾದ ಕೊವಿಡ್-19 ನ ಒಮಿಕ್ರಾನ್ ರೂಪಾಂತರವು ಈಗ ಯುಎಸ್‌ನಿಂದ ದಕ್ಷಿಣ ಕೊರಿಯಾದವರೆಗಿನ ದೇಶಗಳಲ್ಲಿ ಪತ್ತೆಯಾಗಿದೆ. ವಿಶ್ವಾದ್ಯಂತ ಸಂಶೋಧಕರು ಹೊಸ ರೂಪಾಂತರಿಯು ಸಂಪೂರ್ಣ ಪರಿಣಾಮವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಒಮಿಕ್ರಾನ್ ಲಸಿಕೆಗಳ ರಕ್ಷಣೆಯನ್ನು ತಪ್ಪಿಸಬಹುದು ಮತ್ತು ಹೊಸ ಉಲ್ಬಣಗಳಿಗೆ ಉತ್ತೇಜನ ನೀಡಬಹುದು ಎಂಬ ಆತಂಕದ ಮೇಲೆ ದಕ್ಷಿಣ ಆಫ್ರಿಕಾ ಮತ್ತು ಹತ್ತಿರದ ದೇಶಗಳ ಪ್ರಯಾಣಿಕರನ್ನು ಸರ್ಕಾರಗಳು ನಿಷೇಧಿಸಿವೆ.

ದಕ್ಷಿಣ ಆಸ್ಟ್ರೇಲಿಯಾ ರಾಜ್ಯವು ಶನಿವಾರದಂದು ಒಮಿಕ್ರಾನ್ ಭಯದ ಮೇಲೆ ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ನಿರ್ಬಂಧಗಳನ್ನು ಹೆಚ್ಚಿಸಿದೆ. ದಕ್ಷಿಣ ಆಫ್ರಿಕಾದಿಂದ ಮಾತ್ರವಲ್ಲದೆ ಎಲ್ಲಾ ದೇಶದ ಪ್ರಯಾಣಿಕರು 14 ದಿನಗಳವರೆಗೆ ಕ್ವಾರಂಟೈನ್ ಮಾಡುವ ಅಗತ್ಯವಿದೆ. ಆಸ್ಟ್ರೇಲಿಯದ ಆಗ್ನೇಯ ರಾಜ್ಯಗಳಿಂದ ಆಗಮಿಸುವ ಪ್ರಯಾಣಿಕರು ಆಗಮನದ ಪರೀಕ್ಷೆಯನ್ನು ನಡೆಸಬೇಕಾಗುತ್ತದೆ ಮತ್ತು ನಕಾರಾತ್ಮಕ ಫಲಿತಾಂಶವನ್ನು ಪಡೆಯುವವರೆಗೆ ಪ್ರತ್ಯೇಕವಾಗಿರಬೇಕಾಗುತ್ತದೆ ಎಂದು ರಾಜ್ಯದ ಪ್ರಧಾನಿ ಸ್ಟೀವನ್ ಮಾರ್ಷಲ್ ಹೇಳಿದ್ದಾರೆ.

ದಕ್ಷಿಣ ಆಸ್ಟ್ರೇಲಿಯಾದ ಅಧಿಕಾರಿಗಳು ಸಿಡ್ನಿಯಲ್ಲಿ ಏಕಾಏಕಿ ಮತ್ತು ಎಸಿಟಿಯಲ್ಲಿನ ಪ್ರಕರಣದ ಬಗ್ಗೆ “ಅಸಾಧಾರಣ ಕಾಳಜಿ” ಹೊಂದಿದ್ದಾರೆ, ಆದರೆ ಈ ಹಂತದಲ್ಲಿ ಅದರ ಗಡಿಯನ್ನು ತೆರೆದಿಡುತ್ತಾರೆ ಎಂದು ಮಾರ್ಷಲ್ ಶನಿವಾರ ಸುದ್ದಿಗಾರರಿಗೆ ತಿಳಿಸಿದರು. ಗಡಿಯನ್ನು ಮುಚ್ಚುವ ಕುರಿತು ಚರ್ಚಿಸಲು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಅವರು “ಈ ಹಂತದಲ್ಲಿ ಒಮಿಕ್ರಾನ್ ರೂಪಾಂತರದ ಬಗ್ಗೆ ನಮಗೆ ಸಾಕಷ್ಟು ತಿಳಿದಿಲ್ಲ” ಎಂದು ಹೇಳಿದರು. ಒಮಿಕ್ರಾನ್ “ಇಲ್ಲಿ ಆಸ್ಟ್ರೇಲಿಯಾದಲ್ಲಿದೆ” ಎಂದು ಅವರು ಹೇಳಿದರು.

ಇದನ್ನೂ ಓದಿ: Omicron ಡೆಲ್ಟಾ ಮತ್ತು ಬೀಟಾ ರೂಪಾಂತರಿಗಳಿಗಿಂತ ಮರುಸೋಂಕಿನ ಹೆಚ್ಚಿನ ಅಪಾಯವನ್ನು ಹೊಂದಿದೆ ಒಮಿಕ್ರಾನ್: ಸಿಂಗಾಪುರ್ ಆರೋಗ್ಯ ಸಚಿವಾಲಯ

ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ