AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಸ್ಲಾಮಾಬಾದ್‌: ಆತ್ಮಾಹುತಿ ಬಾಂಬ್ ದಾಳಿ ನಡೆಸಿರುವುದಾಗಿ ಒಪ್ಪಿಕೊಂಡ ಪಾಕಿಸ್ತಾನಿ ತಾಲಿಬಾನ್, ಮತ್ತಷ್ಟು ದಾಳಿಗಳ ಎಚ್ಚರಿಕೆ

ಇಸ್ಲಾಮಾಬಾದ್​​ನಲ್ಲಿ ಕನಿಷ್ಠ 12 ಜನರ ಸಾವಿಗೆ ಕಾರಣವಾದ ಆತ್ಮಾಹುತಿ ಬಾಂಬ್ ದಾಳಿಯ ಹೊಣೆಯನ್ನು ಪಾಕಿಸ್ತಾನಿ ತಾಲಿಬಾನ್ ಹೊತ್ತಿದೆ. ಮತ್ತಷ್ಟು ದಾಳಿಗಳನ್ನು ನಡೆಸುವ ಎಚ್ಚರಿಕೆಯನ್ನೂ ನೀಡಿದೆ. ಇದು ದೇಶದ ರಾಜಧಾನಿಯ ಮೇಲೆ ಉಗ್ರಗಾಮಿ ಗುಂಪು ನಡೆಸಿದ ಅಪರೂಪದ ದಾಳಿಯಾಗಿದೆ. ಪಾಕಿಸ್ತಾನದ ಇಸ್ಲಾಮಿಕ್ ಅಲ್ಲದ ಕಾನೂನುಗಳ ಅಡಿಯಲ್ಲಿ ತೀರ್ಪುಗಳನ್ನು ಜಾರಿಗೊಳಿಸಿದ ನ್ಯಾಯಮೂತರ್ತಗಳು, ವಕೀಲರು ಮತ್ತು ಅಧಿಕಾರಿಗಳನ್ನು ಗುರಿಯಾಗಿಸಲಾಗಿತ್ತು.

ಇಸ್ಲಾಮಾಬಾದ್‌: ಆತ್ಮಾಹುತಿ ಬಾಂಬ್ ದಾಳಿ ನಡೆಸಿರುವುದಾಗಿ ಒಪ್ಪಿಕೊಂಡ ಪಾಕಿಸ್ತಾನಿ ತಾಲಿಬಾನ್, ಮತ್ತಷ್ಟು  ದಾಳಿಗಳ ಎಚ್ಚರಿಕೆ
ಕಾರು ಸ್ಫೋಟ
ನಯನಾ ರಾಜೀವ್
|

Updated on: Nov 12, 2025 | 7:36 AM

Share

ಇಸ್ಲಾಮಾಬಾದ್, ನವೆಂಬರ್ 12: ಇಸ್ಲಾಮಾಬಾದ್​​ನಲ್ಲಿ ಕನಿಷ್ಠ 12 ಜನರ ಸಾವಿಗೆ ಕಾರಣವಾದ ಆತ್ಮಾಹುತಿ ಬಾಂಬ್ ದಾಳಿ(Bomb Attack)ಯ ಹೊಣೆಯನ್ನು ಪಾಕಿಸ್ತಾನಿ ತಾಲಿಬಾನ್ ಹೊತ್ತಿದೆ. ಮತ್ತಷ್ಟು ದಾಳಿಗಳನ್ನು ನಡೆಸುವ ಎಚ್ಚರಿಕೆಯನ್ನೂ ನೀಡಿದೆ. ಇದು ದೇಶದ ರಾಜಧಾನಿಯ ಮೇಲೆ ಉಗ್ರಗಾಮಿ ಗುಂಪು ನಡೆಸಿದ ಅಪರೂಪದ ದಾಳಿಯಾಗಿದೆ. ಪಾಕಿಸ್ತಾನದ ಇಸ್ಲಾಮಿಕ್ ಅಲ್ಲದ ಕಾನೂನುಗಳ ಅಡಿಯಲ್ಲಿ ತೀರ್ಪುಗಳನ್ನು ಜಾರಿಗೊಳಿಸಿದ ನ್ಯಾಯಮೂತರ್ತಗಳು, ವಕೀಲರು ಮತ್ತು ಅಧಿಕಾರಿಗಳನ್ನು ಗುರಿಯಾಗಿಸಲಾಗಿತ್ತು.

ಇಸ್ಲಾಮಾಬಾದ್‌ನಲ್ಲಿ ನ್ಯಾಯಾಲಯದ ಮೇಲೆ ದಾಳಿ ಮಾಡಲಾಗಿತ್ತು. ಎಲ್ಲರೂ ಗಾಬರಿಯಿಂದ ಒಳಗೆ ಓಡಲು ಪ್ರಾರಂಭಿಸಿದರು. ಮುಂಭಾಗದ ಗೇಟ್‌ನಲ್ಲಿ ಕನಿಷ್ಠ ಐದು ಮೃತದೇಹಗಳು ಬಿದ್ದಿರುವುದನ್ನು ನಾನು ನೋಡಿದ್ದೇನೆ ಎಂದು ವಕೀಲ ಮತ್ತು ಪ್ರತ್ಯಕ್ಷದರ್ಶಿ ಮೊಹಮ್ಮದ್ ಶಹಜಾದ್ ತಿಳಿಸಿದ್ದಾರೆ.

ಸೋಮವಾರ ದೆಹಲಿಯಲ್ಲಿ ಸಂಭವಿಸಿದ ಕಾರು ಸ್ಫೋಟದಲ್ಲಿ 10ಕ್ಕೂ ಅಧಿಕ ಜನರು ಸಾವನ್ನಪ್ಪಿ 20 ಜನರು ಗಾಯಗೊಂಡ ನಂತರ ಈ ಘಟನೆ ಸಂಭವಿಸಿದೆ. ಪಾಕಿಸ್ತಾನದಲ್ಲಿ ಕೊನೆಯ ಆತ್ಮಹತ್ಯಾ ದಾಳಿ ನಡೆದಿದ್ದು ಡಿಸೆಂಬರ್ 2022 ರಲ್ಲಿ. ಅಫ್ಘಾನ್ ನೆಲದಲ್ಲಿ ಆಶ್ರಯ ಪಡೆದಿದ್ದಾರೆ ಎನ್ನಲಾದ ಸಶಸ್ತ್ರ ಗುಂಪುಗಳನ್ನು ಸರ್ಕಾರ ದೂಷಿಸುತ್ತಿದೆ.

ಮತ್ತಷ್ಟು ಓದಿ: ಇಸ್ಲಮಾಬಾದ್​​ನಲ್ಲಿ 12 ಜನರನ್ನು ಬಲಿ ಪಡೆದ ಬಾಂಬ್ ದಾಳಿಗೆ ಭಾರತವೇ ಕಾರಣವೆಂದ ಪಾಕಿಸ್ತಾನ!

ಜನರ ಸಾವಿಗೆ ಕಾರಣವಾದ ಇಸ್ಲಾಮಾಬಾದ್ ನ್ಯಾಯಾಲಯದ ಹೊರಗೆ ನಡೆದ ಆತ್ಮಾಹುತಿ ಬಾಂಬ್ ದಾಳಿಗೆ ಪಾಕಿಸ್ತಾನದ  ಪ್ರಧಾನಿ ಶೆಹಬಾಜ್ ಷರೀಫ್ ಭಾರತವೇ ಕಾರಣವೆಂದು ಆರೋಪ ಮಾಡಿದ್ದಾರೆ. ಅಫ್ಘಾನಿಸ್ತಾನದ ಗಡಿಯ ಬಳಿಯ ವಾನಾದ ಕ್ಯಾಡೆಟ್ ಕಾಲೇಜಿನ ಮೇಲೆ ಸೋಮವಾರ ನಡೆದ ದಾಳಿಯಲ್ಲಿ ಭಾರತದ ಪಾತ್ರವಿದೆ ಎಂದು ಅವರು ಆರೋಪಿಸಿದ್ದಾರೆ.

ಪಾಕಿಸ್ತಾನ ಸರ್ಕಾರದ ಸುದ್ದಿ ಸಂಸ್ಥೆಯಾದ ಅಸೋಸಿಯೇಟೆಡ್ ಪ್ರೆಸ್ ಆಫ್ ಪಾಕಿಸ್ತಾನ (APP) ಪ್ರಕಾರ, ಈ ಅವಳಿ ದಾಳಿಗಳಿಗೆ ಭಾರತ ಪ್ರಾಯೋಜಿತ ಭಯೋತ್ಪಾದಕ ಪ್ರಾಕ್ಸಿಗಳು ಕಾರಣ ಎಂದು ಪಾಕ್ ಪ್ರಧಾನಿ ಆರೋಪಿಸಿದ್ದಾರೆ. “ಈ ದಾಳಿಗಳು ಪಾಕಿಸ್ತಾನವನ್ನು ಅಸ್ಥಿರಗೊಳಿಸುವ ಗುರಿಯನ್ನು ಹೊಂದಿರುವ ಭಾರತದ ರಾಜ್ಯ ಪ್ರಾಯೋಜಿತ ಭಯೋತ್ಪಾದನೆಯ ಮುಂದುವರಿಕೆಯಾಗಿದೆ” ಎಂದು ಅವರು ಮಾಧ್ಯಮಗಳೆದುರು ಹೇಳಿದ್ದಾರೆ. ಆದರೆ, ಈ ಹುಸಿ ಆರೋಪಕ್ಕೆ ಯಾವುದೇ ಪುರಾವೆಗಳನ್ನು ಅವರು ನೀಡಿಲ್ಲ.

ದಕ್ಷಿಣ ಏಷ್ಯಾದಲ್ಲಿ ಭಯೋತ್ಪಾದನೆಯ ತಾಣವಾಗಿರುವ ಪಾಕಿಸ್ತಾನವು ಬಹಳ ಹಿಂದಿನಿಂದಲೂ ಭಯೋತ್ಪಾದನೆಯ ರಫ್ತುದಾರನಾಗಿದೆ. ತಾನೇ ಭಯೋತ್ಪಾದಕರಿಗೆ ಆಶ್ರಯ ನೀಡುತ್ತದೆ. ಆ ಉಗ್ರರು ಪಾಕಿಸ್ತಾನದ ಮೇಲೆ ದಾಳಿ ನಡೆಸಿದಾಗ ಅದಕ್ಕೆ ಭಾರತವನ್ನು ಹೊಣೆಗಾರರನ್ನಾಗಿ ಮಾಡುವುದು ಪಾಕಿಸ್ತಾನಕ್ಕೆ ಹೊಸತೇನಲ್ಲ.

ಅಕ್ಟೋಬರ್‌ನಲ್ಲಿ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಗಳು ಇತ್ತೀಚಿನ ದಾಳಿಗಳಿಂದಾಗಿ ಪ್ರಮುಖ ಘರ್ಷಣೆಯಲ್ಲಿ ಭಾಗಿಯಾಗಿದ್ದವು. ವಿಶ್ವಸಂಸ್ಥೆಯ ಪ್ರಕಾರ, 50 ಅಫ್ಘಾನ್ ನಾಗರಿಕರು ಸೇರಿದಂತೆ ಎರಡೂ ಕಡೆಗಳಲ್ಲಿ 70 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಗಂಗಾ ನದಿಯ ಥೀಮ್​ನಲ್ಲಿ ಮಹಾಶಿವರಾತ್ರಿಗೆ ಸಜ್ಜಾಗಿದೆ ಇಶಾ ಫೌಂಡೇಷನ್
ಗಂಗಾ ನದಿಯ ಥೀಮ್​ನಲ್ಲಿ ಮಹಾಶಿವರಾತ್ರಿಗೆ ಸಜ್ಜಾಗಿದೆ ಇಶಾ ಫೌಂಡೇಷನ್
ಎತ್ತಿನ ಬಂಡಿಯಲ್ಲಿ ದುನಿಯಾ ವಿಜಯ್ ಪುತ್ರಿಯ ಮೆರವಣಿಗೆ: ವಿಡಿಯೋ
ಎತ್ತಿನ ಬಂಡಿಯಲ್ಲಿ ದುನಿಯಾ ವಿಜಯ್ ಪುತ್ರಿಯ ಮೆರವಣಿಗೆ: ವಿಡಿಯೋ
ಟಿವಿ9 ನವನಕ್ಷತ್ರ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ ಭಾವುಕ ಮಾತು
ಟಿವಿ9 ನವನಕ್ಷತ್ರ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ ಭಾವುಕ ಮಾತು
ರಿಯಲ್ ಎಸ್ಟೇಟ್ ಉದ್ಯಮಿ ರೋಹನ್ ಮೊಂಟೆರೋಗೆ ಟಿವಿ9 ನವ ನಕ್ಷತ್ರ ಪ್ರಶಸ್ತಿ
ರಿಯಲ್ ಎಸ್ಟೇಟ್ ಉದ್ಯಮಿ ರೋಹನ್ ಮೊಂಟೆರೋಗೆ ಟಿವಿ9 ನವ ನಕ್ಷತ್ರ ಪ್ರಶಸ್ತಿ
ಬೂಕರ್ ಪ್ರಶಸ್ತಿ ಲೇಖಕಿ ಬಾನು ಮುಷ್ತಾಕ್​ಗೆ ಟಿವಿ9 ನವ ನಕ್ಷತ್ರ ಅವಾರ್ಡ್​​
ಬೂಕರ್ ಪ್ರಶಸ್ತಿ ಲೇಖಕಿ ಬಾನು ಮುಷ್ತಾಕ್​ಗೆ ಟಿವಿ9 ನವ ನಕ್ಷತ್ರ ಅವಾರ್ಡ್​​
ಮದುವೆಗೆ ಬಂದಿದ್ದ ಮಹಿಳೆ ನಿಗೂಢ ನಾಪತ್ತೆ; ಸ್ಫೋಟಕ ಮಾಹಿತಿ ನೀಡಿದ ಎಸ್​​ಪಿ
ಮದುವೆಗೆ ಬಂದಿದ್ದ ಮಹಿಳೆ ನಿಗೂಢ ನಾಪತ್ತೆ; ಸ್ಫೋಟಕ ಮಾಹಿತಿ ನೀಡಿದ ಎಸ್​​ಪಿ
ಸರ್ಕಾರಿ ಮಕ್ಕಳಿಗೆ'ಸರ್ಪ್ರೈಸ್' ಕೊಟ್ಟ ಸಚಿವ ಜಮೀರ್
ಸರ್ಕಾರಿ ಮಕ್ಕಳಿಗೆ'ಸರ್ಪ್ರೈಸ್' ಕೊಟ್ಟ ಸಚಿವ ಜಮೀರ್
ಗುವಾಹಟಿಯಲ್ಲಿ 3,030 ಕೋಟಿ ರೂ. ವೆಚ್ಚದ ಸೇತುವೆ ಉದ್ಘಾಟಿಸಿದ ಪ್ರಧಾನಿ ಮೋದಿ
ಗುವಾಹಟಿಯಲ್ಲಿ 3,030 ಕೋಟಿ ರೂ. ವೆಚ್ಚದ ಸೇತುವೆ ಉದ್ಘಾಟಿಸಿದ ಪ್ರಧಾನಿ ಮೋದಿ
ಕತ್ತೆಗಳಿಗೆ ಮದುವೆ ಮಾಡಿಸಿದ ವಾಟಾಳ್ ನಾಗರಾಜ್
ಕತ್ತೆಗಳಿಗೆ ಮದುವೆ ಮಾಡಿಸಿದ ವಾಟಾಳ್ ನಾಗರಾಜ್
ಚಲಿಸುತ್ತಿದ್ದ ವಾಹನಗಳ ಮೇಲೆ ಬಿದ್ದ ಕಾಂಕ್ರೀಟ್ ಸ್ಲ್ಯಾಬ್
ಚಲಿಸುತ್ತಿದ್ದ ವಾಹನಗಳ ಮೇಲೆ ಬಿದ್ದ ಕಾಂಕ್ರೀಟ್ ಸ್ಲ್ಯಾಬ್