AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಸ್ಲಮಾಬಾದ್​​ನಲ್ಲಿ 12 ಜನರನ್ನು ಬಲಿ ಪಡೆದ ಬಾಂಬ್ ದಾಳಿಗೆ ಭಾರತವೇ ಕಾರಣವೆಂದ ಪಾಕಿಸ್ತಾನ!

ಪಾಕಿಸ್ತಾನದಲ್ಲಿ ಕಾರು ಸ್ಫೋಟವಾಗಿ 12 ಜನರು ಮೃತಪಟ್ಟಿದ್ದಾರೆ. ದೆಹಲಿಯಲ್ಲಿ ನಡೆದ ರೀತಿಯಲ್ಲೇ ಪಾಕಿಸ್ತಾನದಲ್ಲೂ ಆತ್ಮಾಹುತಿ ಬಾಂಬ್ ಸ್ಫೋಟ ನಡೆದಿದೆ. ಆದರೆ, ಇಸ್ಲಾಮಾಬಾದ್​ನ ಈ ಆತ್ಮಾಹುತಿ ಬಾಂಬ್ ದಾಳಿಗೆ ಭಾರತವೇ ಕಾರಣವೆಂದು ಪಾಕಿಸ್ತಾನ ದೂಷಿಸಿದೆ. ಅಫ್ಘಾನ್ ತಾಲಿಬಾನ್ "ಭಾರತದ ಪ್ರಾಕ್ಸಿ"ಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ.

ಇಸ್ಲಮಾಬಾದ್​​ನಲ್ಲಿ 12 ಜನರನ್ನು ಬಲಿ ಪಡೆದ ಬಾಂಬ್ ದಾಳಿಗೆ ಭಾರತವೇ ಕಾರಣವೆಂದ ಪಾಕಿಸ್ತಾನ!
Shehbaz Sharif
ಸುಷ್ಮಾ ಚಕ್ರೆ
|

Updated on: Nov 11, 2025 | 8:27 PM

Share

ಇಸ್ಲಮಾಬಾದ್, ನವೆಂಬರ್ 11: 12 ಜನರ ಸಾವಿಗೆ ಕಾರಣವಾದ ಇಸ್ಲಾಮಾಬಾದ್ ನ್ಯಾಯಾಲಯದ ಹೊರಗೆ ನಡೆದ ಆತ್ಮಾಹುತಿ ಬಾಂಬ್ ದಾಳಿಗೆ (Bomb Attack) ಪಾಕಿಸ್ತಾನದ (Pakistan) ಪ್ರಧಾನಿ ಶೆಹಬಾಜ್ ಷರೀಫ್ ಭಾರತವೇ ಕಾರಣವೆಂದು ಆರೋಪ ಮಾಡಿದ್ದಾರೆ. ಅಫ್ಘಾನಿಸ್ತಾನದ ಗಡಿಯ ಬಳಿಯ ವಾನಾದ ಕ್ಯಾಡೆಟ್ ಕಾಲೇಜಿನ ಮೇಲೆ ಸೋಮವಾರ ನಡೆದ ದಾಳಿಯಲ್ಲಿ ಭಾರತದ ಪಾತ್ರವಿದೆ ಎಂದು ಅವರು ಆರೋಪಿಸಿದ್ದಾರೆ.

ಪಾಕಿಸ್ತಾನ ಸರ್ಕಾರದ ಸುದ್ದಿ ಸಂಸ್ಥೆಯಾದ ಅಸೋಸಿಯೇಟೆಡ್ ಪ್ರೆಸ್ ಆಫ್ ಪಾಕಿಸ್ತಾನ (APP) ಪ್ರಕಾರ, ಈ ಅವಳಿ ದಾಳಿಗಳಿಗೆ ಭಾರತ ಪ್ರಾಯೋಜಿತ ಭಯೋತ್ಪಾದಕ ಪ್ರಾಕ್ಸಿಗಳು ಕಾರಣ ಎಂದು ಪಾಕ್ ಪ್ರಧಾನಿ ಆರೋಪಿಸಿದ್ದಾರೆ. “ಈ ದಾಳಿಗಳು ಪಾಕಿಸ್ತಾನವನ್ನು ಅಸ್ಥಿರಗೊಳಿಸುವ ಗುರಿಯನ್ನು ಹೊಂದಿರುವ ಭಾರತದ ರಾಜ್ಯ ಪ್ರಾಯೋಜಿತ ಭಯೋತ್ಪಾದನೆಯ ಮುಂದುವರಿಕೆಯಾಗಿದೆ” ಎಂದು ಅವರು ಮಾಧ್ಯಮಗಳೆದುರು ಹೇಳಿದ್ದಾರೆ. ಆದರೆ, ಈ ಹುಸಿ ಆರೋಪಕ್ಕೆ ಯಾವುದೇ ಪುರಾವೆಗಳನ್ನು ಅವರು ನೀಡಿಲ್ಲ.

ಇದನ್ನೂ ಓದಿ: ಪಾಕಿಸ್ತಾನದಲ್ಲೂ ಕೋರ್ಟ್​ ಹೊರಗೆ ನಿಲ್ಲಿಸಿದ್ದ ಕಾರು ಸ್ಫೋಟ; 12 ಜನರು ಸಾವು

ದಕ್ಷಿಣ ಏಷ್ಯಾದಲ್ಲಿ ಭಯೋತ್ಪಾದನೆಯ ತಾಣವಾಗಿರುವ ಪಾಕಿಸ್ತಾನವು ಬಹಳ ಹಿಂದಿನಿಂದಲೂ ಭಯೋತ್ಪಾದನೆಯ ರಫ್ತುದಾರನಾಗಿದೆ. ತಾನೇ ಭಯೋತ್ಪಾದಕರಿಗೆ ಆಶ್ರಯ ನೀಡುತ್ತದೆ. ಆ ಉಗ್ರರು ಪಾಕಿಸ್ತಾನದ ಮೇಲೆ ದಾಳಿ ನಡೆಸಿದಾಗ ಅದಕ್ಕೆ ಭಾರತವನ್ನು ಹೊಣೆಗಾರರನ್ನಾಗಿ ಮಾಡುವುದು ಪಾಕಿಸ್ತಾನಕ್ಕೆ ಹೊಸತೇನಲ್ಲ.

ಇತ್ತ ದೆಹಲಿಯಲ್ಲಿ ನಡೆದ ಕಾರು ಬಾಂಬ್ ಸ್ಫೋಟದ ಹಿಂದೆ ಜಮ್ಮು ಕಾಶ್ಮೀರದ ಗಡಿಯ ಭಯೋತ್ಪಾದಕರ ನಂಟಿನ ಬಗ್ಗೆ ತನಿಖಾಧಿಕಾರಿಗಳಿಗೆ ಕೆಲವು ಸಾಕ್ಷಿಗಳು ಸಿಕ್ಕಿವೆ ಎನ್ನಲಾಗುತ್ತಿದೆ. ಎರಡೂ ದೇಶಗಳಲ್ಲಿ ಒಂದೇ ದಿನ ಕಾರು ಬಾಂಬ್ ಸ್ಫೋಟ ಸಂಭವಿಸಿರುವುದು ಕಾಕತಾಳೀಯ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ