ಕೊರೊನಾ ವೈರಸ್ ಹರಡಬಹುದೆಂಬ ಭಯದಿಂದ ಮೂರು ಮಕ್ಕಳನ್ನು ನಾಲ್ಕು ತಿಂಗಳ ಕಾಲ ಪೋಷಕರು ತಮ್ಮ ಕೋಣೆಗಳಲ್ಲಿ ಬಂಧಿಸಿರುವ ಘಟನೆ ಸ್ವೀಡನ್ ದೇಶದಲ್ಲಿ ನಡೆದಿದೆ.
ಮಕ್ಕಳ ಮೇಲಿನ ಪ್ರೀತೀನೋ, ಸೋಂಕಿನ ಭೀತೀನೋ.. ಎಲ್ಲ ಕೊರೊನಾ ಮಹಿಮೆ
ಸ್ವೀಡನ್ ದೇಶದ ದಂಪತಿ ಮಕ್ಕಳಿಗೆ ಕೊರೊನಾ ವೈರಸ್ ಹರಡಬಹುದೆಂಬ ಭಯದಿಂದ ತಮ್ಮ ಅಪಾರ್ಟ್ಮೆಂಟ್ನಿಂದ ಹೊರಹೋಗದಂತೆ ತಡೆದು, ರೂಮಿನಲ್ಲಿ ಕೂಡಿ ಹಾಕಿದ್ದಾರೆ. ಜೊತೆಗೆ ಮಕ್ಕಳನ್ನು ಕೂಡಿ ಹಾಕಿದ್ದ ರೂಮಿನ ಬಾಗಿಲನ್ನು ಹಲಗೆಗಳಿಂದ ಮುಚ್ಚಿದ್ದಾರೆ. ಇದರಿಂದ ಮಕ್ಕಳು 4 ತಿಂಗಳವರೆಗೆ ರೂಮಿನಲ್ಲಿಯೆ ಬಂಧಿಯಾಗಿದ್ದರು.
ಪ್ರಕರಣ ಬೆಳಕಿಗೆ ಬಂದ ನಂತರ ಅಲ್ಲಿನ ನ್ಯಾಯಾಲಯವು ವಿಚಾರಣೆ ನಡೆಸಿ, ಸುಮಾರು 4 ತಿಂಗಳುಗಳ ಕಾಲ ಪೋಷಕರಿಂದ ಬಂಧಿಸಲ್ಪಟ್ಟ ಮೂರು ಮಕ್ಕಳನ್ನು ಮನೆಗೆ ಮರಳಲು ಅನುಮತಿಸಬಾರದು ಎಂದು ಸ್ವೀಡನ್‌ನ ಆಡಳಿತ ನ್ಯಾಯಾಲಯವು ತೀರ್ಪು ನೀಡಿದೆ.
Published On - 11:36 am, Fri, 4 September 20