ಸಿದ್ದರಾಮಯ್ಯ ಮತ್ತು ಶಿವಕುಮಾರ ಕೈಗಳನ್ನು ಅಕ್ಕಪಕ್ಕದಲ್ಲಿಟ್ಟರು ಪರಮೇಶ್ವರ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 09, 2022 | 4:08 PM

ಅದರೆ ಮಾಜಿ ಮುಖ್ಯಮಂತ್ರಿಗಳು ಅರಿತೋ ಅಥವಾ ಅರಿಯದೆಯೋ ಬೇರೆ ಕಡೆ ಇಟ್ಟಿದ್ದರು. ಇದನ್ನು ಗಮನಿಸಿದ ಪರಮೇಶ್ವರ್ ಸಿದ್ದರಾಮಯ್ಯನವರ ಕೈ ಎತ್ತಿ ಶಿವಕುಮಾರ ಕೈ ಪಕ್ಕ ಇಟ್ಟರು!

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ (KPCC) ಶುಕ್ರವಾರ ಭಾರತ್ ಜೋಡೋ ಯಾತ್ರೆಗೆ ಸಂಬಂಧಿಸಿದಂತೆ ಸುದ್ದಿಗೋಷ್ಟಿಯೊಂದನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಎಐಸಿಸಿ ಕರ್ನಾಟಕ ಉಸ್ತುವಾರಿ ರಣದೀಪ್ ಸುರ್ಜೆವಾಲಾ (Randeep Singh Surjewala), ಡಿಕೆ ಶಿವಕುಮಾರ, ಸಿದ್ದರಾಮಯ್ಯ, ಜಿ ಮರಮೇಶ್ವರ (G Parameswara), ಕೆಜೆ ಜಾರ್ಜ್, ಬಿಕೆ ಹರಿಪ್ರಸಾದ್ ಮೊದಲಾದವರು ಭಾಗವಹಿಸಿದ್ದರು. ವೆಬ್ ಸೈಟ್ ಲಾಂಚ್ ವೇಳೆ ಶಿವಕುಮಾರ್ ಅವರ ಕೈಯಿಟ್ಟ ಸ್ಥಳದಲ್ಲೇ ಸಿದ್ದರಾಮಯ್ಯ ಕೂಡ ಇಡಬೇಕಿತ್ತು. ಅದರೆ ಮಾಜಿ ಮುಖ್ಯಮಂತ್ರಿಗಳು ಅರಿತೋ ಅಥವಾ ಅರಿಯದೆಯೋ ಬೇರೆ ಕಡೆ ಇಟ್ಟಿದ್ದರು. ಇದನ್ನು ಗಮನಿಸಿದ ಪರಮೇಶ್ವರ್ ಸಿದ್ದರಾಮಯ್ಯನವರ ಕೈ ಎತ್ತಿ ಶಿವಕುಮಾರ ಕೈ ಪಕ್ಕ ಇಟ್ಟರು!