ಚೀನಾದ ಮಧ್ಯಪ್ರಾಂತ್ಯ ಹೆನಾನ್ (Henan)ನಲ್ಲಿ ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದಾಗಿ ಭೀಕರ ಪ್ರವಾಹ (China Floods) ಪರಿಸ್ಥಿತಿ ಉಂಟಾಗಿದೆ. 100 ವರ್ಷಗಳಲ್ಲಿ ಚೀನಾ(China) ಈ ಮಟ್ಟದ ಮಳೆ, ಪ್ರವಾಹವನ್ನು ಕಂಡಿರಲಿಲ್ಲ. ಹೆನಾನ್ ಬಹುತೇಕ ನಗರಗಳಲ್ಲಿ ಎಲ್ಲೇ ನೋಡಿದರೂ ನೀರು..ನೀರು. ರಸ್ತೆ, ಮನೆಗಳೆಲ್ಲ ಮುಳುಗಿನಿಂತಿವೆ. ಅದರಲ್ಲೂ ಐಫೋನ್ ಸಿಟಿ (iPhone City)ಯೆಂದೇ ಖ್ಯಾತಿಯಾಗಿರುವ ಝೆಂಗ್ಝು(Zhengzhou) ನಗರದಲ್ಲಿ ಜು.20ರಂದು ಸಂಜೆ 4 ಗಂಟೆಯಿಂದ 5 ಗಂಟೆವರೆಗೆ ಅಂದರೆ ಒಂದೇ ತಾಸಿನಲ್ಲಿ ಬರೋಬ್ಬರಿ 20 ಸೆಂಟಿಮೀಟರ್ ಮಳೆಯಾಗಿದೆ. ಸುಮಾರು 1.2 ಕೋಟಿ ಜನಸಂಖ್ಯೆ ಹೊಂದಿರುವ ಈ ನಗರದಲ್ಲೀಗ ನಾಗರಿಕರ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ. ಅತಿಯಾದ ಪ್ರವಾಹದಿಂದ ಜನರಿಗೆ ಒಂದಿನಿತೂ ಕದಲಲು ಸಾಧ್ಯವಾಗುತ್ತಿಲ್ಲ. ಜಲಾವೃತಗೊಂಡ ರಸ್ತೆಯಲ್ಲಿ, ಶಾಪಿಂಗ್ ಮಾಲ್ನಲ್ಲಿ, ಕಚೇರಿಗಳಲ್ಲಿ, ಸುರಂಗ ಮಾರ್ಗದಲ್ಲಿ ರೈಲುಗಳಲ್ಲಿ ಸಿಲುಕಿಕೊಂಡವರು ಅನೇಕ ಮಂದಿ. ಎಲ್ಲೆಲ್ಲೂ ನೀರೇ ಇರುವ ಕಾರಣಕ್ಕೆ ಅಲ್ಲಿಂದ ಹೊರಹೋಗಲೂ ಸಾಧ್ಯವಾಗುತ್ತಿಲ್ಲ.
ಚೀನಾದ ಮಾಧ್ಯಮಗಳು, ಬೇರೆ ನಗರಗಳ ಜನರು ಹೆನಾನ್ ಪ್ರಾಕೃತಿಕ ವಿಪತ್ತಿನ ಫೋಟೋ, ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಈ ಭೀಕರ ಪ್ರವಾಹಕ್ಕೆ ಇದುವರೆಗೆ 25 ಮಂದಿ ಮೃತಪಟ್ಟಿದ್ದಾರೆ. ಅದರಲ್ಲೂ ಸುರಂಗ ಮಾರ್ಗದಲ್ಲಿ ಸಿಲುಕಿರುವ ಪ್ರಯಾಣಿಕರೇ ಉಸಿರು ಚೆಲ್ಲುತ್ತಿದ್ದಾರೆ. ಇನ್ನೂ ಮೂರುದಿನಗಳ ಕಾಲ ತುಂಬ ಮಳೆಯಾಗುವ ಸಾಧ್ಯತೆ ಇದೆ ಎಂದು ಅಲ್ಲಿನ ಹವಾಮಾನ ತಜ್ಞರು ಅಂದಾಜಿಸಿರುವ ಬೆನ್ನಲ್ಲೇ, ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಹೆಚ್ಚಿನ ಗಮನ ಹರಿಸಿದ್ದಾರೆ. ಸುಮಾರು 5700 ಯೋಧರು ಹೆನಾನ್ನತ್ತ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ, ನಾಪತ್ತೆಯಾದವರ ಹುಡುಕುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಇಷ್ಟು ಪ್ರವಾಹಕ್ಕೆ ಕಾರಣವೇನು?
ಚೀನಾದ ಮಧ್ಯಪ್ರಾಂತ್ಯದಲ್ಲಿ ಇಷ್ಟೊಂದು ಪ್ರಮಾಣದ ಮಳೆಯಾಗುತ್ತಿರಲು ಕಾರಣ ಇನ್ ಫಾ ಚಂಡಮಾರುತ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ. ಅದರಲ್ಲೂ ಝೆಂಗ್ಝು ನಗರ ತೈಹಾಂಗ್ ಮತ್ತು ಫ್ಯೂನಿಯು ಪರ್ವತಗಳಿಂದ ಆವೃತವಾಗಿರುವುದರಿಂದ ಮತ್ತಷ್ಟು ಬಾಧಿಸುತ್ತಿದೆ ಎಂದು ಹೇಳಿದೆ. ಇಲ್ಲಿವೆ ನೋಡಿ ಚೀನಾ ಮಧ್ಯಪ್ರಾಂತ್ಯದ ಭೀಕರ ಫೋಟೋ, ವಿಡಿಯೋಗಳು..
The videos shared on Chinese social media about the floodings in Henan following the heavy rain really show the severity of the situation. These are some of them. pic.twitter.com/zZMKxvAGAX
— Manya Koetse (@manyapan) July 20, 2021
blockquote class=”twitter-tweet”>
Subway passengers trapped in the water. pic.twitter.com/IyqmKN7WEr
— Manya Koetse (@manyapan) July 20, 2021
One subway entrance of line 7 in Zhengzhou collapsed on Tuesday. pic.twitter.com/uH8ybyDOPi
— Manya Koetse (@manyapan) July 20, 2021
ಇದನ್ನೂ ಓದಿ: ವಿಚಾರಣೆ ವಿಳಂಬವಾಗಿದ್ದಕ್ಕೆ ‘ತಾರೀಖ್ ಪೆ ತಾರೀಖ್’ ಡೈಲಾಗ್ ಕಿರುಚಿ ನ್ಯಾಯಾಲಯದ ಕುರ್ಚಿ,ಕಂಪ್ಯೂಟರ್ ಕಿತ್ತೆಸೆದ ಭೂಪ
People Stuck Inside Trains Malls due to Floods In Henan province Of China