Period Leave: ಸ್ಪೇನ್​ನಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ತಿಂಗಳಲ್ಲಿ 3 ದಿನ ಮುಟ್ಟಿನ ರಜೆ ಘೋಷಣೆ

| Updated By: ಸುಷ್ಮಾ ಚಕ್ರೆ

Updated on: May 12, 2022 | 2:14 PM

Menstrual Leave: ಜಪಾನ್, ದಕ್ಷಿಣ ಕೊರಿಯಾ, ಇಂಡೋನೇಷ್ಯಾ ಮತ್ತು ಜಾಂಬಿಯಾ ಸೇರಿದಂತೆ ವಿಶ್ವದ ಇತರ ದೇಶಗಳು ಈಗಾಗಲೇ ಮುಟ್ಟಿನ ರಜೆಯನ್ನು ನೀಡುತ್ತಿವೆ. ಸ್ಪೇನ್​ನಲ್ಲಿ ಮಹಿಳೆಯರಿಗೆ ತಿಂಗಳಿಗೆ ಮೂರು ದಿನಗಳ ಋತುಚಕ್ರದ ರಜೆಯನ್ನು ನಿಗದಿಪಡಿಸಲಾಗಿದೆ.

Period Leave: ಸ್ಪೇನ್​ನಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ತಿಂಗಳಲ್ಲಿ 3 ದಿನ ಮುಟ್ಟಿನ ರಜೆ ಘೋಷಣೆ
ಸಾಂದರ್ಭಿಕ ಚಿತ್ರ
Image Credit source: Getty Image
Follow us on

ಸ್ಪೇನ್: ಆಫೀಸಿಗೆ ಹೋಗುವ ಶೇ. 65ರಷ್ಟು ಮಹಿಳೆಯರು ತಮ್ಮ ಋತುಚಕ್ರದ ಸಂದರ್ಭದಲ್ಲಿ ಕಚೇರಿಯಲ್ಲಿ ಕಿರಿಕಿರಿಯನ್ನು ಅನುಭವಿಸುತ್ತಾರೆ. ಹಾಗಂತ ಮನೆಯಲ್ಲಿರುವವರಿಗೆ ಈ ಮೂರ್ನಾಲ್ಕು ದಿನಗಳ ಕಾಲ ಕಿರಿಕಿರಿ ಆಗುವುದಿಲ್ಲ ಎಂದು ಅರ್ಥವಲ್ಲ. ಮನೆಯಲ್ಲಿದ್ದರೆ ವಿಶ್ರಾಂತಿ ಪಡೆಯಲು ಅವಕಾಶ ಇರುತ್ತದೆ. ಆದರೆ, ಕಚೇರಿಯಲ್ಲಿ ಆ ಆಯ್ಕೆ ಇಲ್ಲದ ಕಾರಣದಿಂದ ಮಹಿಳೆಯರು ತಮ್ಮ ಪಿರಿಯಡ್​ನ (menstrual) ಸಮಯದಲ್ಲಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಸುಸ್ತಾಗುತ್ತಾರೆ. ಭಾರತದಲ್ಲೂ ಕೆಲವು ಆಫೀಸ್​ಗಳಲ್ಲಿ ಇದೇ ಕಾರಣಕ್ಕೆ ಮಹಿಳೆಯರಿಗೆ ರೆಸ್ಟ್​ ರೂಂ ಸೌಲಭ್ಯವನ್ನು ಒದಗಿಸಲಾಗುತ್ತದೆ. ಆದರೆ, ಸ್ಪೇನ್​ನಲ್ಲಿ ಮೊದಲ ಬಾರಿಗೆ ಮಹಿಳೆಯರಿಗೆ ಋತುಚಕ್ರದ ಸಮಯದಲ್ಲಿ ‘ಪಿರಿಯಡ್ ರಜೆ’ (Period Leave) ನೀಡಲು ನಿರ್ಧರಿಸಲಾಗಿದೆ. ಈ ಮೂಲದ ಋತುಚಕ್ರದ ರಜೆ ನೀಡುತ್ತಿರುವ ಮೊದಲ ಪಾಶ್ಚಿಮಾತ್ಯ ದೇಶವೆಂಬ ಹೆಗ್ಗಳಿಕೆಗೆ ಸ್ಪೇನ್ ಪಾತ್ರವಾಗಿದೆ. ಸ್ಪೇನ್​ನಲ್ಲಿ ಮಹಿಳೆಯರಿಗೆ ತಿಂಗಳಿಗೆ ಮೂರು ದಿನಗಳ ವಿಶೇಷ ರಜೆಯನ್ನು ನಿಗದಿಪಡಿಸಲಾಗಿದೆ.

ಸ್ಪ್ಯಾನಿಷ್ ಸರ್ಕಾರವು ಮುಂದಿನ ವಾರ ಈ ನಿಯಮವನ್ನು ಅನುಮೋದಿಸಲಿದೆ ಎಂದು ಕ್ಯಾಡೆನಾ ಸೆರ್ ರೇಡಿಯೊ ಸ್ಟೇಷನ್ ಘೋಷಿಸಿದೆ. ಜಪಾನ್, ದಕ್ಷಿಣ ಕೊರಿಯಾ, ಇಂಡೋನೇಷ್ಯಾ ಮತ್ತು ಜಾಂಬಿಯಾ ಸೇರಿದಂತೆ ವಿಶ್ವದ ಇತರ ದೇಶಗಳು ಈಗಾಗಲೇ ಮುಟ್ಟಿನ ರಜೆಯನ್ನು ನೀಡುತ್ತಿವೆ. ಮಂಗಳವಾರ ನಡೆಯಲಿರುವ ಸ್ಪೇನ್‌ನ ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಜಾರಿಗೆ ಬರಲಿರುವ ಸುಧಾರಣಾ ಪ್ಯಾಕೇಜ್ ಅಡಿಯಲ್ಲಿ ಶಾಲೆಗಳು ಅಗತ್ಯವಿರುವ ಹುಡುಗಿಯರಿಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ಒದಗಿಸಲು ಸೂಚಿಸಲಾಗಿದೆ.

ಈ ಋತುಚಕ್ರದ ರಜೆ ವಿಶೇಷವಾಗಿ ಮುಟ್ಟಿನ ನೋವಿನಿಂದ ಬಳಲುತ್ತಿರುವ ಮಹಿಳೆಯರಿಗೆ ಪ್ರಯೋಜನವನ್ನು ನೀಡುತ್ತದೆ. ಮುಟ್ಟಿನ ಸಂದರ್ಭದಲ್ಲಿ ಅನೇಕ ಮಹಿಳೆಯರು ಡಿಸ್ಮೆನೊರಿಯಾ ಎಂದು ಕರೆಯಲ್ಪಡುವ ತೀವ್ರವಾದ ನೋವಿನಿಂದ ಬಳಲುತ್ತಾರೆ. ಕೆಲವೊಮ್ಮೆ ಈ ನೋವು ಗಂಭೀರ ಆರೋಗ್ಯ ಸಮಸ್ಯೆಗೂ ಕಾರಣವಾಗಬಹುದು. ಋತುಚಕ್ರದ ಸಂದರ್ಭದಲ್ಲಿ ಕೆಲವು ಮಹಿಳೆಯರಿಗೆ ತಲೆ ಸುತ್ತುವರಿಕೆ, ಹೊಟ್ಟೆ ನೋವು, ವಾಂತಿ, ಭೇದಿ, ತೀವ್ರವಾದ ತಲೆನೋವು ಮುಂತಾದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಹೀಗಾಗಿ, ಋತುಚಕ್ರದ ರಜೆ ನೀಡಲು ನಿರ್ಧರಿಸಲಾಗಿದೆ ಎಂದು ಸ್ಪೇನ್ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ
ನೈಟ್​ಶಿಫ್ಟ್​ನಲ್ಲಿ ಕೆಲಸ ಮಾಡ್ತಿದ್ದೀರಾ? ಹಾಗಾದರೆ ಈ ಸಲಹೆ ತಪ್ಪದೆ ಪಾಲಿಸಿ
Healthy Drinks: ವ್ಯಾಯಾಮದ ನಂತರ ಮನೆಯಲ್ಲಿ ತಯಾರಿಸಿದ ಈ ಎನರ್ಜಿ ಡ್ರಿಂಕ್ಸ್ ಸೇವಿಸಿ, ಉತ್ತಮ ಆರೋಗ್ಯ ಪಡೆಯಿರಿ
ಹೆಚ್ಚಿನ ವ್ಯಾಯಾಮ ಕೂಡ ಅನಿಯಮಿತ ಮುಟ್ಟಿಗೆ ಕಾರಣವಾಗಬಹುದು

ಸ್ಪ್ಯಾನಿಷ್ ಸ್ತ್ರೀರೋಗ ಶಾಸ್ತ್ರ ಮತ್ತು ಪ್ರಸೂತಿ ಸೊಸೈಟಿಯು ಮುಟ್ಟಿನ ಸಂದರ್ಭದಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ಮಹಿಳೆಯರು ತೀವ್ರವಾದ ನೋವಿನಿಂದ ಬಳಲುತ್ತಿದ್ದಾರೆ ಎಂದು ಹೇಳುತ್ತದೆ. ಈ ನೋವನ್ನು ಡಿಸ್ಮೆನೊರಿಯಾ ಎಂದು ಕರೆಯಲಾಗುತ್ತದೆ. ಡಿಸ್ಮೆನೊರಿಯಾದ ಲಕ್ಷಣಗಳು ತೀವ್ರವಾದ ಹೊಟ್ಟೆ ನೋವು, ತಲೆನೋವು, ಅತಿಸಾರ ಮತ್ತು ಜ್ವರವನ್ನು ಒಳಗೊಂಡಿರುತ್ತದೆ. ಹೊಸ ಯೋಜನೆಯ ಪ್ರಕಾರ, ಸ್ಪೇನ್‌ನ ಶಾಲೆಗಳು ಸ್ಯಾನಿಟರಿ ಪ್ಯಾಡ್‌ಗಳನ್ನು ಒದಗಿಸುತ್ತವೆ.

ಮುಂದಿನ ಮಂಗಳವಾರದ ಕ್ಯಾಬಿನೆಟ್ ಸಭೆಯಲ್ಲಿ ಜಾರಿಗೆ ಬರಲಿರುವ ಸುಧಾರಣೆಯು ಮುಟ್ಟಿನ ಆರೋಗ್ಯವನ್ನು ಸುಧಾರಿಸಲು ಇತರ ಕ್ರಮಗಳನ್ನು ಒಳಗೊಂಡಿದೆ. ಇದು ಅಗತ್ಯವಿರುವ ಹುಡುಗಿಯರಿಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ಒದಗಿಸುವಂತೆ ಶಾಲೆಗಳನ್ನು ಕಡ್ಡಾಯಗೊಳಿಸುತ್ತದೆ.

ಇತರೆ ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:13 pm, Thu, 12 May 22