ನೈಟ್​ಶಿಫ್ಟ್​ನಲ್ಲಿ ಕೆಲಸ ಮಾಡ್ತಿದ್ದೀರಾ? ಹಾಗಾದರೆ ಈ ಸಲಹೆ ತಪ್ಪದೆ ಪಾಲಿಸಿ

Night Shifts: ಎಲ್ಲಾ ಕ್ಷೇತ್ರದಲ್ಲೂ ಎಲ್ಲರಿಗೂ 9-5 ಕೆಲಸ ಸಿಗುವುದು ತುಂಬಾ ಕಷ್ಟ, ರಾತ್ರಿ ಶಿಫ್ಟ್​(Night Shift)ಗಳಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಇರುತ್ತದೆ. ಅದು ಸವಾಲೇ ಸರಿ. ಆದರೆ ಈ ನೈಟ್​ಶಿಫ್ಟ್​ಗಳಲ್ಲಿ ಕೆಲಸ ಮಾಡುವಂತವರಲ್ಲಿ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ನೈಟ್​ಶಿಫ್ಟ್​ಗಳಲ್ಲಿ ಕೆಲಸ ಮಾಡುವವರು ಈ ಸಲಹೆಗಳನ್ನು ತಪ್ಪದೆ ಪಾಲಿಸಿ.

ನೈಟ್​ಶಿಫ್ಟ್​ನಲ್ಲಿ ಕೆಲಸ ಮಾಡ್ತಿದ್ದೀರಾ? ಹಾಗಾದರೆ ಈ ಸಲಹೆ ತಪ್ಪದೆ ಪಾಲಿಸಿ
ನೈಟ್​ಶಿಫ್ಟ್
Follow us
TV9 Web
| Updated By: ನಯನಾ ರಾಜೀವ್

Updated on:May 11, 2022 | 2:41 PM

ಎಲ್ಲಾ ಕ್ಷೇತ್ರದಲ್ಲೂ ಎಲ್ಲರಿಗೂ 9-5 ಕೆಲಸ ಸಿಗುವುದು ತುಂಬಾ ಕಷ್ಟ, ರಾತ್ರಿ ಶಿಫ್ಟ್​(Night Shift)ಗಳಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಇರುತ್ತದೆ, ಅದು ಸವಾಲೇ ಸರಿ. ಆದರೆ ಈ ನೈಟ್​ಶಿಫ್ಟ್​ಗಳಲ್ಲಿ ಕೆಲಸ ಮಾಡುವಂತವರಲ್ಲಿ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ನೈಟ್​ಶಿಫ್ಟ್​ಗಳಲ್ಲಿ ಕೆಲಸ ಮಾಡುವವರು ಈ ಸಲಹೆಗಳನ್ನು ತಪ್ಪದೆ ಪಾಲಿಸಿ.

ನಿದ್ರೆಗೆ ಒಂದು ಸಮಯ ಫಿಕ್ಸ್ ಮಾಡಿ: ನಿತ್ಯವು ಒಂದೊಂದು ಸಮಯದಲ್ಲಿ ನಿದ್ರೆ ಮಾಡುವುದರಿಂದ ತೂಕ ಹೆಚ್ಚಳ, ಮಾನಸಿಕ ಒತ್ತಡ ಸೇರಿದಂತೆ ಹಲವು ಸಮಸ್ಯೆಗಳು ಕಾಡುತ್ತವೆ. ಹಾಗಾಗಿ ನೈಟ್​ಶಿಫ್ಟ್​ನಲ್ಲಿ ಕೆಲಸ ಮಾಡುವವರು ಮೊದಲು ನಿದ್ರೆ ಮಾಡುವ ಸಮಯವನ್ನು ಫಿಕ್ಸ್ ಮಾಡಿ, ದಿನ ಅದೇ ಸಮಯಕ್ಕೆ ಮಲಗಿ ಆರೋಗ್ಯವನ್ನು ಕಾಪಾಡಿಕೊಳ್ಳಿ.

ಕಾಫಿ, ಟೀಗಳ ಬಳಕೆ ಮಿತವಾಗಿರಲಿ: ರಾತ್ರಿ ನಿದ್ರೆ ಬರಬಾರದೆಂದು ಕೆಲಸಕ್ಕೆ ಯಾವುದೇ ತೊಂದರೆಯಾಗಬಾರದೆಂದು ಕಾಫಿ, ಟೀ ಸೇರಿದಂತೆ ಇತರೆ ಪಾನೀಯಗಳನ್ನು ಕುಡಿಯುತ್ತಾರೆ ಆದರೆ ಅದು ತಪ್ಪು ಇವುಗಳು ಕೂಡ ಅನಾರೋಗ್ಯವನ್ನುಂಟು ಮಾಡಬಹುದು.

ಫ್ರೀ ಟೈಂ ನಿರ್ವಹಿಸುವುದನ್ನು ಕಲಿಯಿರಿ: ಪ್ರತಿಯೊಬ್ಬರಿಗೂ ತಮ್ಮ ಕೆಲಸವನ್ನು ಹೊರತುಪಡಿಸಿ ತಮ್ಮದೇ ಆದ ಜೀವನವಿರುತ್ತದೆ. ಹಾಗಾಗಿ ಬಿಡುವಿನ ಸಮಯದಲ್ಲಿ ಮನೆಯವರೊಂದಿಗೆ ಕಾಲ ಕಳೆಯಿರಿ ಇದು ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತದೆ.

ಉತ್ತಮ ಆಹಾರವನ್ನು ತಿನ್ನಿ: ನಿತ್ಯ ಉತ್ತಮ ಆಹಾರವನ್ನು ತಿನ್ನಿ, ವರ್ಕೌಟ್ ಮಾಡಿ, ಅದಕ್ಕಾಗಿ ಸಮಯವನ್ನು ನಿಗದಿಪಡಿಸಿ, ಎಂದೂ ಆಲಸ್ಯವನ್ನು ತೋರಿಸಬೇಡಿ, ಇದು ನಿಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ.

ಅತಿ ಹೆಚ್ಚು ಆಹಾರ ಸೇವನೆ ಬೇಡ: ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರು ಹೆಚ್ಚು ಆಹಾರ ಸೇವನೆ ಮಾಡುತ್ತಾರೆ ಎಂದು ತಿಳಿದುಬಂದಿದೆ. ಒಮ್ಮೆಲೆ ಸೇವನೆ ಮಾಡದೇ ಇದ್ದರೂ ಆಗಾಗ ತಿನ್ನುವ ಅಭ್ಯಾಸ ಇವರಿಗಿರುತ್ತದೆ. ನಿದ್ರೆಯಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡುವ ಸಾಧ್ಯತೆ ಇರುತ್ತದೆ.

ಆದರೆ ಇದರಿಂದ ದೇಹಕ್ಕೆ ಅತಿಯಾದ ಕ್ಯಾಲೊರಿ ಅಂಶಗಳು ಸೇರುತ್ತಾ ಹೋಗುತ್ತವೆ. ಅನಾರೋಗ್ಯಕರ ಆಹಾರದಿಂದ ಮಧುಮೇಹ ನಿರ್ವಹಣೆ ಕೂಡ ಕಷ್ಟ ಆಗುತ್ತದೆ. ಹಾಗಾಗಿ ಆಹಾರ ಪದ್ಧತಿಯ ಬಗ್ಗೆ ಹೆಚ್ಚು ಗಮನವಹಿಸಬೇಕು. ನಿಮ್ಮ ಆರೋಗ್ಯದ ಬಗ್ಗೆ ಗಮನವಿರಲಿ: ಕಚೇರಿ ಎಂದು ನಿಮ್ಮ ಆರೋಗ್ಯವನ್ನು ಮರೆಯಬೇಡಿ, ಯೋಗ, ಧ್ಯಾನ, ಚರ್ಮದ ಆರೈಕೆಯನ್ನು ಮಾಡಿಕೊಳ್ಳಲೇಬೇಕಿದೆ.

ಇತ್ತೀಚೆಗೆ ಅಂದರೆ 2017ರಲ್ಲಿ ನಡೆದ ಒಂದು ಅಧ್ಯಯನದ ಪ್ರಕಾರ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಜನರಿಗೆ ತಮ್ಮ ಮಧುಮೇಹ ಸಮಸ್ಯೆಯನ್ನು ನಿರ್ವಹಿಸಿಕೊಳ್ಳಲು ತುಂಬಾ ಕಷ್ಟವಾಗುತ್ತಿದೆ ಎಂಬ ವಿಚಾರ ತಿಳಿದು ಬಂದಿದೆ. ಆದರೆ ಬೆಳಗಿನ ಸಮಯದಲ್ಲಿ ಕೆಲಸ ಮಾಡುವವರಿಗೆ ಅಥವಾ ಕೆಲಸ ಮಾಡದೆ ಇರುವವರಿಗೆ ತಮ್ಮ ಮಧುಮೇಹ ನಿರ್ವಹಣೆಯಲ್ಲಿ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ.

ರಾತ್ರಿ ಸಮಯದಲ್ಲಿ ಕೆಲಸ ಮಾಡುವವರು ಅತಿಯಾಗಿ ಆಹಾರ ಸೇವನೆ ಮಾಡುತ್ತಾರೆ ಎನ್ನುವ ಮಾತಿದೆ. ಅದರಿಂದ ದೇಹಕ್ಕೆ ಹೆಚ್ಚು ಕ್ಯಾಲೋರಿ ಅಂಶ ಮತ್ತು ಸಕ್ಕರೆ ಅಂಶ ಸೇರುವ ಸಾಧ್ಯತೆ ಇರುತ್ತದೆ. ಇದರಿಂದ ನಿದ್ರಾಹೀನತೆ ಸಮಸ್ಯೆ ಕೂಡ ಎದುರಾಗುವುದರಿಂದ ಅನಾರೋಗ್ಯ ಹೆಚ್ಚಾಗಲಿದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:36 pm, Wed, 11 May 22

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು