
ಆಸ್ಟ್ರೇಲಿಯಾದ ರಾಜಕಾರಣಿಗಳು ಪ್ರಧಾನಿ ನರೇಂದ್ರ ಮೋದಿ(Narendra Modi) ಬಗ್ಗೆ ಅಸೂಯೆ ಹೊಂದಿದ್ದಾರೆ ಎಂದು ಆಸ್ಟ್ರೇಲಿಯಾದ ವಿರೋಧ ಪಕ್ಷ ನಾಯಕ ಪೀಟರ್ ಡಟ್ಟನ್(Peter Dutton) ಹೇಳಿದ್ದಾರೆ. ಪೀಟರ್ ಡಟ್ಟನ್ ಅವರು ಆಸ್ಟ್ರೇಲಿಯಾ ಸಂಸತ್ತಿನಲ್ಲಿ ಮಾತನಾಡುತ್ತಾ ಪ್ರಧಾನಿ ಮೋದಿಯವರನ್ನು ಹೊಗಳಿದರು. ಜಗತ್ತಿನ ಮೂಲೆ ಮೂಲೆಯಲ್ಲಿ 20 ಸಾವಿರ ಜನರನ್ನು ಒಟ್ಟುಗೂಡಿಸಿ ಮೋದಿ-ಮೋದಿ ಎಂಬ ಘೋಷಣೆಗಳನ್ನು ಕೂಗುವಂತೆ ಮಾಡುವ ಸಾಮರ್ಥ್ಯ ನಮ್ಮ ಯಾವ ನಾಯಕರಿಗೂ ಇಲ್ಲ ಎಂದರು.
ಕಳೆದ ವರ್ಷ ಮೇ ತಿಂಗಳಲ್ಲಿ ಪ್ರಧಾನಿ ಮೋದಿ ಆಸ್ಟ್ರೇಲಿಯಾಕ್ಕೆ ಭೇಟಿ ನೀಡಿದ್ದರು. ಆ ಭೇಟಿಯ ವೇಳೆ ಸಿಡ್ನಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾರತೀಯ ಸಮುದಾಯಕ್ಕೆ ಸೇರಿದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು. ಆಸ್ಟ್ರೇಲಿಯನ್ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಸಂಸದ ಪೀಟರ್ ಡಟ್ಟನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದರು ಮತ್ತು ಭಾರತೀಯ ಸಮುದಾಯದ ಕೆಲಸವನ್ನು ಶ್ಲಾಘಿಸಿದರು.
ಇದಕ್ಕೂ ಮುನ್ನ 2013ರಲ್ಲಿ ಸಿಡ್ನಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೂಡ ಡಟ್ಟನ್ ಇದೇ ರೀತಿಯ ಹೇಳಿಕೆಯನ್ನು ನೀಡಿದ್ದರು. ಭಾರತ್ ಮಾತಾ ಕಿ ಜೈ’, ‘ವಂದೇ ಮಾತರಂ’ ಮತ್ತು ‘ಮೋದಿ, ಮೋದಿ’ ಎಂಬ ಘೋಷಣೆಗಳನ್ನು ಕೂಗಿದ ಭಾರತೀಯ ಜನಸಮೂಹದಿಂದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ ದೊರೆಯಿತು. ಭಾರತದೊಂದಿಗಿನ ಸಂಬಂಧದ ಕುರಿತು ಮಾತನಾಡುತ್ತಾ ಡಟ್ಟನ್, ತಮ್ಮ ಸರ್ಕಾರವು ಅಧಿಕಾರದಲ್ಲಿದ್ದಾಗ ಇದು ಸಾಕಷ್ಟು ಅಸಾಧಾರಣ ಮತ್ತು ಅಭಿವೃದ್ಧಿ ಶೀಲವಾಗಿತ್ತುಎಂದು ಹೇಳಿದ್ದರು.
ಮತ್ತಷ್ಟು ಓದಿ: ನಮ್ಮ ರಾಜಕಾರಣಿಗಳು ಮೋದಿ ಬಗ್ಗೆ ಅಸೂಯೆ ಹೊಂದಿದ್ದಾರೆ: ಆಸ್ಟ್ರೇಲಿಯಾದ ವಿರೋಧ ಪಕ್ಷದ ನಾಯಕ
ಭಾರತದೊಂದಿಗಿನ ಸಂಬಂಧಗಳ ಕುರಿತು ಮಾತನಾಡಿದ ಅವರು, ತಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸಂಬಂಧಗಳು ಸಾಕಷ್ಟು ಅಸಾಧಾರಣ ಮತ್ತು ಬಲವಾಗಿತ್ತು ಎಂದು ಹೇಳಿದರು. ಪ್ರಧಾನಿ ಮೋದಿ ಸಿಡ್ನಿ ತಲುಪಿದಾಗ ಎನ್‌ಆರ್‌ಐ ಸಮುದಾಯದ ಜನರು ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದರು, ಈ ಸಂದರ್ಭದಲ್ಲಿ ಜನರು ‘ಭಾರತ್ ಮಾತಾ ಕಿ ಜೈ’, ‘ವಂದೇ ಮಾತರಂ’ ಮತ್ತು ‘ಮೋದಿ-ಮೋದಿ’ ಎಂದು ಘೋಷಣೆಗಳನ್ನು ಕೂಗಿದರು.
ಪ್ರಧಾನಿ ಮೋದಿ ಕಳೆದ ವರ್ಷ ಮೇ 23 ರಂದು ಆಸ್ಟ್ರೇಲಿಯಾ ಸೇರಿದಂತೆ 3 ದೇಶಗಳಿಗೆ ಭೇಟಿ ನೀಡಿದ್ದರು. 9 ವರ್ಷಗಳಲ್ಲಿ ಪ್ರಧಾನಿ ಮೋದಿಯವರ ಮೊದಲ ಆಸ್ಟ್ರೇಲಿಯಾ ಭೇಟಿ ಇದಾಗಿದೆ. ಈ ಅವಧಿಯಲ್ಲಿ ಅವರು ಪಪುವಾ ನ್ಯೂಗಿನಿಯಾಕ್ಕೂ ಹೋಗಿದ್ದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ