ನಮ್ಮ ರಾಜಕಾರಣಿಗಳು ಮೋದಿ ಬಗ್ಗೆ ಅಸೂಯೆ ಹೊಂದಿದ್ದಾರೆ: ಆಸ್ಟ್ರೇಲಿಯಾದ ವಿರೋಧ ಪಕ್ಷದ ನಾಯಕ
ಮೇ 23 ರಂದು, ಪಿಎಂ ಮೋದಿ ಅವರು ಪಪುವಾ ನ್ಯೂಗಿನಿಯಾ ಭೇಟಿಯನ್ನು ಮುಗಿಸಿದ ನಂತರ ತಮ್ಮ ಮೂರು ರಾಷ್ಟ್ರಗಳ ಭೇಟಿಯ ಮೂರನೇ ಮತ್ತು ಅಂತಿಮ ಹಂತದ ಭಾಗವಾಗಿ ಸಿಡ್ನಿಗೆ ಭೇಟಿ ನೀಡಿದರು. ಒಂಬತ್ತು ವರ್ಷಗಳಲ್ಲಿ ಇದು ಅವರ ಮೊದಲ ಆಸ್ಟ್ರೇಲಿಯಾ ಭೇಟಿಯಾಗಿತ್ತು.
ಆಸ್ಟ್ರೇಲಿಯದ ವಿರೋಧ ಪಕ್ಷದ ನಾಯಕ ಪೀಟರ್ ಡಟ್ಟನ್ (Peter Dutton) ಅವರು ತಮ್ಮ ದೇಶದ ರಾಜಕಾರಣಿಗಳು ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಬಗ್ಗೆ ಅಸೂಯೆ ಹೊಂದಿದ್ದಾರೆ ಎಂದು ಹೇಳಿದ್ದಾರೆ. ಸಿಡ್ನಿಯಲ್ಲಿ (Sydney) ನಡೆದ ಮೋದಿಯವರ ಕಾರ್ಯಕ್ರಮವೊಂದರಲ್ಲಿ ಭಾರಿ ಪ್ರಮಾಣದ ಜನ ಸೇರಿದ್ದನ್ನು ಉಲ್ಲೇಖಿಸಿ ಅವರು ಈ ಮಾತನ್ನು ಹೇಳಿದ್ದಾರೆ. ಗುರುವಾರ ಆಸ್ಟ್ರೇಲಿಯನ್ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಡಟ್ಟನ್ ಪ್ರಧಾನಿ ಮೋದಿಯವರಿಗೆ ಆತಿಥ್ಯ ನೀಡುವಲ್ಲಿ ಭಾರತೀಯ ಸಮುದಾಯದ ಕೆಲಸವನ್ನು ಮೆಚ್ಚಿರುವೆ ಎಂದು ಹೇಳಿದರು. ರಾಜಕೀಯದ ಎರಡೂ ಕಡೆಯಿಂದ ಸಾಕಷ್ಟು ಜನರು ಹಾಜರಾಗಿದ್ದರು, ಇದು ಬೆಳಗ್ಗೆ ನಾನು ಪ್ರಧಾನಿಯವರಲ್ಲಿ ಒಂದು ಮಾತು ಹೇಳಿದೆ. ಅದೇನೆಂದರೆ ನಿನ್ನೆ ರಾತ್ರಿ ಅಲ್ಲಿದ್ದ ಪ್ರತಿಯೊಬ್ಬ ರಾಜಕಾರಣಿಯೂ ಇನ್ನೊಂದು ಬದಿಯಲ್ಲಿ 20,000 ಜನರು ಅವರ ಸರ್ ನೇಮ್ (ಮೋದಿ) ಎಂದು ಒಟ್ಟಾಗಿ ಕೂಗಿದಾಗ ಅಸೂಯೆ ಪಟ್ಟರು. ವಿಶೇಷವಾಗಿ ಲೇಬರ್ ಪಾರ್ಟಿಯವರು ಎಂದು ಡಟ್ಟನ್ ಹೇಳಿದ್ದಾರೆ.
‘ಭಾರತ್ ಮಾತಾ ಕಿ ಜೈ’, ‘ವಂದೇ ಮಾತರಂ’ ಮತ್ತು ‘ಮೋದಿ, ಮೋದಿ’ ಎಂಬ ಘೋಷಣೆಗಳನ್ನು ಕೂಗಿದ ಭಾರತೀಯ ಜನಸಮೂಹದಿಂದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ ದೊರೆಯಿತು. ಭಾರತದೊಂದಿಗಿನ ಸಂಬಂಧದ ಕುರಿತು ಮಾತನಾಡುತ್ತಾ ಡಟ್ಟನ್, ತಮ್ಮ ಸರ್ಕಾರವು ಅಧಿಕಾರದಲ್ಲಿದ್ದಾಗ ಇದು ಸಾಕಷ್ಟು ಅಸಾಧಾರಣ ಮತ್ತು ಅಭಿವೃದ್ಧಿ ಶೀಲವಾಗಿತ್ತುಎಂದು ಹೇಳಿದರು.
Aussie politicians jealous of Indian PM @narendramodi says Leader of the Opposition @PeterDutton_MP @EthnicLinkGuru @DrAmitSarwal @Pallavi_Aus @SarahLGates1 @TVMohandasPai @rishi_suri @VohraManpreet @vijai63 @AusHCIndia @ARanganathan72 @shebatweets @samirsaran @DipenRughani pic.twitter.com/OlqiTT5eEb
— The Australia Today (@TheAusToday) May 26, 2023
ಮೇ 23 ರಂದು, ಪಿಎಂ ಮೋದಿ ಅವರು ಪಪುವಾ ನ್ಯೂಗಿನಿಯಾ ಭೇಟಿಯನ್ನು ಮುಗಿಸಿದ ನಂತರ ತಮ್ಮ ಮೂರು ರಾಷ್ಟ್ರಗಳ ಭೇಟಿಯ ಮೂರನೇ ಮತ್ತು ಅಂತಿಮ ಹಂತದ ಭಾಗವಾಗಿ ಸಿಡ್ನಿಗೆ ಭೇಟಿ ನೀಡಿದರು. ಒಂಬತ್ತು ವರ್ಷಗಳಲ್ಲಿ ಇದು ಅವರ ಮೊದಲ ಆಸ್ಟ್ರೇಲಿಯಾ ಭೇಟಿಯಾಗಿತ್ತು.
ಇದನ್ನೂ ಓದಿ: ಪ್ರಧಾನಿ ಮೋದಿಯೇ ಬಾಸ್: ಆಸ್ಟ್ರೇಲಿಯಾದ ಪಿಎಂ ಆಂಥೋನಿ ಅಲ್ಬನೀಸ್ ಮೆಚ್ಚುಗೆ
ಅಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ಪಿಎಂ ಮೋದಿಯವರನ್ನು “ಬಾಸ್” ಎಂದು ಕರೆದಿದ್ದರು. ಈ ವೇದಿಕೆಯಲ್ಲಿ ನಾನು ಕೊನೆಯ ಬಾರಿಗೆ ಯಾರನ್ನಾದರೂ ನೋಡಿದ್ದು ಬ್ರೂಸ್ ಸ್ಪ್ರಿಂಗ್‌ಸ್ಟೀನ್ ಮತ್ತು ಅವರಿಗೆ ಪ್ರಧಾನಿ ಮೋದಿಗೆ ಸಿಕ್ಕಿದ ಸ್ವಾಗತ ಸಿಗಲಿಲ್ಲ. ಪ್ರಧಾನಿ ಮೋದಿಯೇ ಬಾಸ್ ಎಂದು ಅಲ್ಬನೀಸ್ ಹೇಳಿದ್ದಾರೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ